ತಾಯಿ ಭಾರತಿಯ ಸುಪುತ್ರ - ನೇತಾಜಿ

ತಾಯಿ ಭಾರತಿಯ ಸುಪುತ್ರ - ನೇತಾಜಿ

ಕವನ

ಯುವಕರಿಗೆ ಆದರ್ಶಪ್ರಾಯರಾದವರು

ಬತ್ತದ ತೊರೆಯಂತೆ ಝರಿಯಾಗಿ ಹರಿದವರು//

ಭಾರತ ದೇಶದ ಅಪ್ರತಿಮ ಸಾಹಸಿಗರು

ಸೂಕ್ಷ್ಮಮತಿ ಸದ್ಗುಣ ಸಂಪನ್ನರಿವರು//

 

ಸೈನಿಕ ಶಕ್ತಿಯ ಹುಟ್ಟು ಹಾಕಿದರು

ಸಂಘಟಕ  ಶಕ್ತಿಯ ದಂಡ ನಾಯಕರು/

ಗುರಿಯೇ ಸಾಧನೆ ಹೋರಾಡಿ ಎಂದರು

ಶೌರ್ಯ ಸಾಹಸದಿ ಮೆರೆದ ರು//

 

ಸ್ವಾಮಿ ವಿವೇಕಾನಂದರೇ ಆದರ್ಶ ನಿಮಗೆ

ಆಂಗ್ಲರ ವಿರುದ್ಧ ಸೆಣಸಾಡಿ ಕೊನೆವರೆಗೆ/

ಪಾರತಂತ್ರ್ಯವದು ಚುಚ್ಚುತಿಹ ಮುಳ್ಳು

ಜೀವವದು ಮುಡಿಪು ಗೆಲುವು ಸಾಧಿಸಲು //

 

ಸೆರೆವಾಸ ಗೃಹಬಂಧನ ಕಷ್ಟ ಉಂಡರು

ತ್ವರಿತಕ್ರಾಂತಿ ಮಿಂಚಿನ ಪ್ರವಾಸ ಕೈಗೊಂಡರು/

ಹೋರಾಟದ ಬದುಕು ಜೀವನದಿ ಕಂಡರು

ದೇಶ ಸೇವೆಯೇ ಈಶ ಸೇವೆ ಯೆಂದರು//

 

ತಾಯಿ ಭಾರತಿಯ ಸುಪುತ್ರರಿವರು

ದೇಶಕ್ಕಾಗಿ ವೇಷ ಮರೆಸಿದ ತ್ಯಾಗಿಗಳಿವರು

ಬ್ರಿಟಿಷರ ಹೆಡೆಮುರಿ ಕಟ್ಟಿದ ರಾಷ್ಟ್ರೀಯ ನಾಯಕರಿವರು

ಭಾರತಾಂಬೆಯ ಕಣ್ಣೀರ ಹನಿಗಳ ಒರೆಸಿದವರು

 

ಸ್ವಾತಂತ್ರ್ಯ ಸಂಗ್ರಾಮದಿ ಧುಮುಕಿ ಪಣ ತೊಟ್ಟರು

ರಾಷ್ಟ್ರಭಕ್ತಿಯ ಕಿಚ್ಚನ್ನು ಹಚ್ಚಿದರು/

ಮುತ್ಸದ್ಧಿ ಪ್ರಾಮಾಣಿಕರ ಅಂತ್ಯ ನಿಗೂಢ

ದೇಶಕ್ಕೆ ದೇಶವೇ ದು:ಖದ ಮಡು ನೋಡ//

 

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್