ತಾಯಿ

ತಾಯಿ

ಬರಹ

------***** ತಾಯಿ *****-------
ಧರೆಯುಕ್ಕಿ ಬಂದ ಗಂಗೆಯ
ಸ್ವಾಗತ ಪೂಜೆಯಿಂದಿಡಿದು
ವಾಸ್ಥುಪುರುಷನಿಗೆ ಪ್ರಸಾದವಿಡುವವರೆಗೆ
ನಿಂತು ನೊಂದವಳು ಎನ್ನಮ್ಮ

ಹಿಂದೆ ಅಪ್ಪನಿದ್ದರೂ
ಹತ್ತಾರು ತಿಂಗಳು ಎದುರು ನಿಂತು
ಮನೆಯ ಹೆತ್ತು ಕೊಟ್ಟವಳು ಎನ್ನಮ್ಮ
ಕಾಡುವ ಮಧುಮೇಹದ ನಡುವೆ
ಸುಡುವ ಉರಿಬಿಸಿಲ ಕೆಳಗೆ
ಕಾಲನಿಗೆ ಎದುರು ನಿಂತು ಸಾಧಿಸಿದ ಧೀಮಂತೆ
ಎನ್ನ ತಾಯಿ ಇವಳು ಧೀಮಂತೆ
ಅಮ್ಮ ಕೈ ನಡುಗುತಿದೆ
ಬರೆಯಲು ಮನ ಕೈ ಎರೆಡೂ ಓಡುತ್ತಿಲ್ಲ

ಇಷ್ಟೆಲ್ಲಾ ನೆನಪು ಬಂದಿದ್ದು
ಉರಿಬಿಸಿಲ ಕೆಳಗೆ
ಏನನೂ ಲೆಕ್ಕಿಸದೆ ನಿಂತ
ಇನ್ನೊಂದು ತಾಯಿಯ ಕಂಡಾಗ
ಎಲ್ಲ ತಾಯಂದಿರೂ ಹೀಗೇನಾ?
ಲೋಕದ ನೋವುಂಡವರು, ನಂಜುಂಡವರು

--ನರೇಂದ್ರ