ತಾಯ ಮನಸು

ತಾಯ ಮನಸು

ಕವನ

ಮನದಲಿ ತುಂಬಿಹ ಕುರೆಯನು ದೂಡುತ

ಕನಸಲು ಸವಿಯನು ಪಡೆಯುತಲಿ

ನನಸನು ಪಡೆಯುತ ಸಂಸ್ಕೃತಿ ಕಲಿತರೆ

ಘನದಲಿ ವಿದ್ಯೆಯ ಹೊಂದುತಲಿ

 

ಮೋಹವು ನಿನಗದು ಬೇಡವು ಕಂದನೆ

ದಾಹದ ಮಾರ್ಗದಿ ನಡೆಯದಿರು

ದೇಹದ ವಾಸನೆ ನೀಗುತ ಸಾಗಿರೆ

ನೇಹದ ರೀತಿಯೆ ಬದುಕುತಿರು

 

ಜೀವನ ಸಾಗಲಿ ಹೀಗೆಯೆ ಬಾಳಲಿ

ಪಾವನ ಚಿಂತನ ರೀತಿಯಲಿ

ದೇವನ ಪೂಜಿಸಿ ಭಕುತಿಲಿ ಬೇಡಿರೆ

ಕಾವನು ನಿನ್ನನು ಬೆಳಗುತಲಿ

***

ಗಝಲ್

ಮಧುರ ಕ್ಷಣಗಳ ಅರಿವುಯಿದೆ ಮೌನವಾಗಿರು

ಬದುಕಿಗೆ ಸುಂದರ ಹರವುಯಿದೆ ಮೌನವಾಗಿರು

 

ಪ್ರೀತಿಯ ತಂತಿಗೆ ಮನವುಯಿದೆ ಮೌನವಾಗಿರು

ಕೈಯಬಳೆ ಸದ್ದಿಗೆ ತನುವುಯಿದೆ ಮೌನವಾಗಿರು

 

ತುಟಿಗೆ ಮೀರಿದ ಚೆಲುವುಯಿದೆ ಮೌನವಾಗಿರು

ಚೈತ್ರದ ಸೊಗಸಿಗೆ ದಿನವುಯಿದೆ ಮೌನವಾಗಿರು

 

ರಾತ್ರಿಯ ಚಂದಿರನಿಗೆ ಒಲವುಯಿದೆ ಮೌನವಾಗಿರು

ತಾರೆಯ ನೋಟದಲಿ ಗೆಲುವುಯಿದೆ ಮೌನವಾಗಿರು

 

ಈಶನೊಲವಿಗೆ ಬಿರಿದ ಫಲವುಯಿದೆ ಮೌನವಾಗಿರು

ಮನದರಸಿಗೆ ಸವಿಯ ಕುಲವುಯಿದೆ ಮೌನವಾಗಿರು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್