ತಾಯ ಮನಸು
ಕವನ
ಮನದಲಿ ತುಂಬಿಹ ಕುರೆಯನು ದೂಡುತ
ಕನಸಲು ಸವಿಯನು ಪಡೆಯುತಲಿ
ನನಸನು ಪಡೆಯುತ ಸಂಸ್ಕೃತಿ ಕಲಿತರೆ
ಘನದಲಿ ವಿದ್ಯೆಯ ಹೊಂದುತಲಿ
ಮೋಹವು ನಿನಗದು ಬೇಡವು ಕಂದನೆ
ದಾಹದ ಮಾರ್ಗದಿ ನಡೆಯದಿರು
ದೇಹದ ವಾಸನೆ ನೀಗುತ ಸಾಗಿರೆ
ನೇಹದ ರೀತಿಯೆ ಬದುಕುತಿರು
ಜೀವನ ಸಾಗಲಿ ಹೀಗೆಯೆ ಬಾಳಲಿ
ಪಾವನ ಚಿಂತನ ರೀತಿಯಲಿ
ದೇವನ ಪೂಜಿಸಿ ಭಕುತಿಲಿ ಬೇಡಿರೆ
ಕಾವನು ನಿನ್ನನು ಬೆಳಗುತಲಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
![](https://saaranga-aws.s3.ap-south-1.amazonaws.com/s3fs-public/%E0%B2%A4%E0%B2%BE%E0%B2%AF%E0%B2%BF%E0%B2%AE.jpeg)