ತಾರತಮ್ಯತೆ ದೂರವಾಗಲಿ...

ತಾರತಮ್ಯತೆ ದೂರವಾಗಲಿ...

ಕವನ

ಪ್ರತಿಯೊಬ್ಬ ಮನುಜನಿಗೂ ಜೀವವಿದೆ,

ಆದರೆ ಮನುಷ್ಯತ್ವ ಇಲ್ಲದಂತಾಗಿದೆ,

ಈ ತಾರತಮ್ಯತಾ ಭಾವವು ತಾಂಡವವಾಡುತ್ತಿದೆ...

ಈ ತಾರತಮ್ಯತೆಯ ವಿವಿಧ ಮಜಲುಗಳು ಹಲವು ರೀತಿಯಲ್ಲಿವೆ....

 

ಎಲ್ಲರ ಜೊತೆ ಮಾತನಾಡುವುದರಲ್ಲಿ,

ಎಲ್ಲರ ಜೊತೆ ಕುಳಿತುಕೊಳ್ಳುವುದರಲ್ಲಿ,

ಅಲ್ಲಿ-ಇಲ್ಲಿ ಮುಟ್ಟಿದರೆ,

ನೀರು ಕುಡಿಯುವುದರಲ್ಲಿ,

ಅಲ್ಲಿ ಅವರ ಜೊತೆ ಕುಳಿತು ಊಟ ಮಾಡುವಲ್ಲಿ,

ಅಲ್ಲಿ ಎಲ್ಲರ ಜೊತೆ ಕೆಲಸ ಮಾಡುವಲ್ಲಿ,

ಮಾಡಿದ ಕೆಲಸದಲ್ಲಿ ಸಂಬಳ/ಕೂಲಿ ಪಡೆಯುವಿಕೆಯಲ್ಲಿ,

ಉಡುಪು/ಬಟ್ಟೆ ಧರಿಸುವಿಕೆಯಲ್ಲಿ,

ನೋಡುವ ನೋಟದಲ್ಲಿ,

ಮಾತನಾಡುವ ರೀತಿಯ ದಾಟಿಯಲ್ಲಿ,

ಮೇಲು-ಕೀಳು ಎಂದು ನೋಡುವಲ್ಲಿ,

ಉಳ್ಳವರು-ಇಲ್ಲದವರು ಎನ್ನುವುದರಲ್ಲಿ,

ಬಡವರು-ಶ್ರೀಮಂತರು ಎನ್ನುವುದರಲ್ಲಿ,

ಪುರುಷ ಪ್ರಧಾನ-ಸ್ತ್ರೀಯರು ನಿಧಾನ ಎನ್ನುವಲ್ಲಿ,

ಮೇಲ್ಜಾತಿ-ಕೆಳಜಾತಿ,ಮೇಲ್ವರ್ಣ-ಕೆಳವರ್ಣವೆಂದು ಗುರುತಿಸುವಲ್ಲಿ,

ಒಳ್ಳೆಯ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುವಲ್ಲಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಕಲಿತವರನ್ನು ನೋಡುವ ದೃಷ್ಟಿ ಯಲ್ಲಿ,

ಸರ್ಕಾರದ ಯೋಜನೆಗಳನ್ನು ಪಡೆಯುವಲ್ಲಿ...

ಹೇಳುತ್ತಾ ಹೋದರೆ ಮುಗಿಯದು-ಬಗೆಹರಿಸಲಾಗದು ಅಲ್ಲವೆ...

 

ಎಲ್ಲರಲ್ಲೂ ನಾವೆಲ್ಲಾ  ಒಂದೇ ಎಂಬ ಏಕತಾ ಭಾವ ಎಲ್ಲಿದೆ,

ಎಲ್ಲೆಲ್ಲೂ ತಾರತಮ್ಯ ತಾಂಡವವಾಡುತಿದೆ,

ಕೆಲವರನ್ನು ಇದರೊಳಗೆ ಸಿಕ್ಕಿಸಿ ಬೆಂಕಿಯಿಟ್ಟು ನೋಡಿ ಗಹಗಹನೆ ನಗುವ ಸಮಾಜ ನಮ್ಮದಾಗಿದೆ.

ಪ್ರಶ್ನಿಸಿದರೆ ಪಟಾರ್ ಎಂದು ಕೆನ್ನೆಗೆ ಬಾರಿಸುವವರು ಬಹುಪಾಲು ಮಂದಿ ಇರುವಾಗ ಅಲ್ಪರು ನಾವೇನು ಹೋರಾಟ ಮಾಡುವುದು.ಒಂದು ವೇಳೆ ನ್ಯಾಯಕ್ಕಾಗಿ ಮೊರೆ ಹೋದರೂ ನ್ಯಾಯ ಸಿಗುತ್ತೆ ಎಂಬ ನಂಬಿಕೆ ಇಲ್ಲದಂತಾಗಿರುವ ಸ್ಥಿತಿ ನಿರ್ಮಾಣವಾಗಿದೆ...

 

ಎಲ್ಲರೂ ಸಹ ಮನುಷ್ಯರೇ ತಾನೇ,

ಎಲ್ಲರಿಗೂ ಇರಲೋಂದೇ ಭೂಮಿ,ಒಂದೇ ಆಗಸ,

ಗಾಳಿ,ಬೆಂಕಿ,ಕುಡಿಯಲು ನೀರು ಬಳಸುವಾಗ ಈ ತಾರತಮ್ಯ ಮಾಡಿ ಪಡೆಯುವುದೇನಿದೆ.

ಎಲ್ಲರೂ ಒಂದೇ ಎಂದು ಹೊಂದಿಕೊಂಡು ಬದುಕಿ ಮನಸುಗಳು ಶುದ್ಧವಾಗಿ ,ಸ್ವಚ್ಛಂದವಾಗಿ ಹಕ್ಕಿಯಂತೆ ಆಗಸದಲ್ಲಿ ಹಾರಾಡಲು ಬಿಡಿ.

ಹೃದಯವನ್ನು ವಿಶಾಲ ಸಮುದ್ರವನ್ನಾಗಿಸಿ ನದಿಗಳು ಬಂದು ಸಂಧಿಸುವಂತೆ ಸಾಮರಸ್ಯದಿಂದ ಸಂಬಂಧಗಳ ಸ್ವೀಕರಿಸಿ.

 

ಪ್ರತಿಯೊಬ್ಬರೂ ಸಹ ತಮ್ಮ ಉತ್ತಮ ಯೋಚನೆ,ಸಕಾರಾತ್ಮಕ ಚಿಂತನೆ,ಬುದ್ಧಿವಂತಿಕೆಯಿಂದ ಭಿನ್ನರಿರಬಹುದು.

ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಯಾರು ತಮ್ಮನ್ನು 

ತೊಡಗಿಸಿಕೊಳ್ಳುವರೋ ಅಂತವರ ಜೊತೆಗೆ ಸೇರಿ ಸಾಮರಸ್ಯ ಸಾಧಿಸೋಣ..

ಸಜ್ಜನರ ಸಹವಾಸ ಸವಿಜೇನು ಸವಿದಂತೆ ಈ ಬದುಕನ್ನು ಪ್ರತಿಯೊಬ್ಬರೂ ಪರಸ್ಪರ ಹೊಂದಿಕೊಂಡು ಬೇಧ-ಭಾವ ಮರೆತು ಒಂದಾಗಿ ಬದುಕೋಣ...

 

-ಶಾಂತಾರಾಮ ಶಿರಸಿ, ಉತ್ತರ ಕನ್ನಡ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್