ತಾರೆ ಅವತಾರ

ತಾರೆ ಅವತಾರ

ಮೂಳೆ ಮೂಳೆಯಲ್ಲಿ ಕ್ಯಾಲ್ಸಿಯಂ, ರಕ್ತ ಹರಿವಲ್ಲೆಲ್ಲಾ ಕಬ್ಬಿಣ
ಇಂಗಾಲದಿಂದಲೇ ಜೀವನ, ಮಿದುಳಲ್ಲೂ ಇದೆ, ಸಾರಜನಕ ರಸಾಯನ
 
ವಿಜ್ಞಾನಿಗಳು ಹೇಳುತ್ತಾರೆ ಈ  ದೇಹದಲ್ಲಿ  ನೂರಕ್ಕೆ ೯೩ ನಕ್ಷತ್ರಧೂಳಿನ ಕಣ
ಒಳಗೊಳಗೆ ಹೋದಂತೆ ಆಗಿದೆಯಲ್ಲವೇ ನಿಮಗೆ ಸೂರ್ಯ ಬಿಂಬ ದರ್ಶನ?
 
ನಿಜದಲ್ಲಿ ನಾವೆಲ್ಲಾ ನಕ್ಷತ್ರಗಳ ಅವತಾರ
ಸುಮ್ಮನೆ ಇಟ್ಟುಕೊಂಡಿದ್ದೇವೆ ಮನುಷ್ಯರ ಹೆಸರ!  
                                                                -ಶಿವರಾಮ 
ಸ್ಫೂರ್ತಿ: ನಿಕಿತಾ ಗಿಲ್ ಅವರ 93 PERCENT STARDUST 

Comments

Submitted by H A Patil Mon, 08/01/2016 - 20:10

ಶಿವರಾಮ ಶಾಸ್ತ್ರೀಯವರಿಗೆ ವಂದನೆಗಳು
'ತಾರೆ ಅವತಾರ' ಆರು ಸಾಲಿನ ಈ ಕವನದಲ್ಲಿ ಮನು ಕುಲದ ನಂಬಿಕೆಗಳನ್ನೆಲ್ಲ ಗೂಡಿಸಿ ಹಾಕಿ ಬಿಟ್ಟಿದ್ದೀರಿ, ನಿಮ್ಮ ವಸ್ತುನಿಷ್ಟ ಅಭಿವ್ಯಕ್ತಿಗೆ ಅಭಿನಂದನೆಗಳು.

Submitted by shivaram_shastri Mon, 09/26/2016 - 17:52

In reply to by H A Patil

ಧನ್ಯವಾದಗಳು ಪಾಟೀಲರೆ ...
ಇದು ಬೇರೊಬ್ಬರ ಕವಿತೆ. ನಾನು ಕನ್ನಡಕ್ಕೆ ತಂದವನಷ್ಟೇ!
ಗೂಡಿಸಿ ಎಂಬುದನ್ನು ಗುಡಿಸಿ ಎಂದು ಓದಿಕೊಂಡೆ.