ತಾಳಬದ್ಧ

ತಾಳಬದ್ಧ

ಬರಹ

"ನನ್ನ ಕನಸಿನ ಪಕಳೆಯಲಿ ನೀ ನಿದ್ದೆ ಮಾಡುವ ಹುಡುಗನಂತೆ
ನಿನ್ನ ಕನಸಿನ ನೆರಿಗೆಯಲಿ ನಾ ಸುತ್ತಿ ಅಲೆಯುವ ಹುಚ್ಚಿಯಂತೆ"

ಎಷ್ಟು ತಾಳಬದ್ಧವಾದರೇನು ಬಂತು-
ನನ್ನ ಕನಸಲ್ಲಿ ನಿನ್ನ ಉಡಾಫೆ
ನಿನ್ನ ಕನಸಲ್ಲಿ ನನ್ನ ಮಗ್ನತೆ
ಗೊತ್ತಾಗದ ಮೇಲೆ!