ತಾವರೆ

ತಾವರೆ

ಕವನ

ತಾವರೆಯಂತ ಕಣ್ಣೋಳೆ...... ಬಿಗುಮಾನದ ನೋಟಕ್ಕೆ ಬೀಗೋಳೆ............. ಪ್ರೀತಿಯ ಕಂಪ ಸೂಚಿಸದೆ ಸೂಸುವವಳೆ........ ಒಮ್ಮೆ ಈ ಪ್ರೀತಿಯ ಬರವಣಿಗೆಯ ಕೇಳೆ............... ನಿನ್ನ ನಗುವ ಮಡಚಿ ಆಗಸಕ್ಕೆ ಎಸೆದೆ............ ಅದೇ ಚಂದ್ರನಾಗಿ ಈ ರಾತ್ರಿ ಬಂದಿದೆ....... ಕನಸೊಳಗೆ ಹೊಸ ಹೊಸ ಭಾವ ಮೂಡಿಸಿದೆ..... ಆ ಭಾವಕ್ಕೆಲ್ಲ ನಿನದೆ ಹೆಸರು ಏಕಿದೆ? ನಂಬುವೆಯಾ! ಈ ಕಲ್ಪನೆ ನಿನ್ನಲ್ಲಿಯೂ ಇದೆ! ಇನ್ನೇಕೆ ಹುಚ್ಚು ವಿವರಣೆ ಎಂದು ಹೃದಯ ಸುಮ್ಮನಿದೆ....... ನಿಮ್ಮ ಜೈಶಂಕರ್...