ತಿರುವು

ತಿರುವು

ಕವನ

ಬದುಕಲು  ಬೇಕು  ಭರವಸೆ

ಬೇಕಿಲ್ಲ  ಯಾವುದೇ ನಿರಾಸೆ

ಬದುಕುವ  ನಾಳೆಗಳ ನಿರೀಕ್ಷೆಯಲ್ಲಿ

ಹಲವು  ತಿರುವುಗಳು  ಬಂದರು ಬದುಕಲ್ಲಿ

 

ಸೋಲು  ಗೆಲುವು  ಇರುವುದು ನಿಜ

ಏನೇ ಬಂದರು ಎದುರಿಸು ಮನುಜ

ಏಳು ಬೀಳು ಎಲ್ಲವೂ ಸಹಜ

ಎಷ್ಟೆ ತಿರುವುಗಳು ಬಂದರು ನೀ ರಾಜ 

 

ಮಾಡು ಇಲ್ಲವೇ ಮಡಿ ಎಂದರು ಗಾಂಧಿ ತಾತ

ನಿನ್ನಾ ಶ್ರಮವಿರಲಿ ಅನವರತ

ಕಾಯಕವೇ ಕೈಲಾಸ ಎಂದರು ಬಸವಣ್ಣ

ತಿರುವುಗಳು  ಏನೇ ಬಂದರು ನೀ ಬಾಳಣ್ಣ

 

ಬದುಕಲ್ಲಿ  ನಾನಾ ತಿರವುಗಳು

ಬಾಲ್ಯದಿಂದ  ಹದಿ ಹರೆಯಕ್ಕೆ

ಹರೆಯದಿಂದ  ಗೃಹಸ್ಥಾಶ್ರಮಕ್ಕೆ

ವೃದ್ಧಪ್ಯಾಕ್ಕೆ ಜೀವನದ ತಿರುವು ಮುಕ್ತಾಯ

 

ತಿರುವುಗಳಿದ್ದರೆ  ಜೀವನದಲ್ಲಿ ತೃಪ್ತಿ, ಹೆಮ್ಮೆ

ಏನೋ ಸಾಧಿಸಿದ  ಹಿರಿಮೆ ಗರಿಮೆ

ಸಮಾಜದಲ್ಲಿ ಸಿಗುವುದು ಗೌರವ ಹೆಮ್ಮೆ

ತಿರುವುಗಳೇ  ಯಶಸ್ಸಿನ  ಮೆಟ್ಟಿಲು

 

-ಎಸ್. ನಾಗರತ್ನ ಚಿತ್ರದುರ್ಗ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್