ತಿಳಿಯದೋ ನಿನ್ನಾಟ..ರಚನೆ ಹೆಳವನಕಟ್ಟೆ ಗಿರಿಯಮ್ಮ

ತಿಳಿಯದೋ ನಿನ್ನಾಟ..ರಚನೆ ಹೆಳವನಕಟ್ಟೆ ಗಿರಿಯಮ್ಮ

ತಿಳಿಯದೊ ನಿನ್ನಾಟ ತಿರುಪತಿಯ ವೆಂಕಟ
ನೀರೊಳುಯಳವ ಮೋರೆಯ ನೆಳಲ
ನೋಡುವಿ ಸುಳಿವರಂಬುಧಿ ಇಳೆಯನಾಳುವ
ಭಳಿರೆ ಭಾರ್ಗವ ಖಳನ ಛೇದಿಸಿ ಕೊಳಲ
ದನಿಯನು ನಳಿನಮುಖಿಯರಿಗೆ ನಾಚಿಸುವದಿ
ದೊಳಿತೆಯೇಳು ಹವಣಗಾರನೆ
ಆರುಬಲ್ಲರು ನಿನ್ನ ಶ್ರೀ ಲಕ್ಷ್ಮಿಯ ಮನಸಿಗೆ
ತೋರದಿಹ ಪರಬ್ರಹ್ಮ ಉಳಿದವರು ಬಲ್ಲರೆ
ನೀರಜಾಸನ ಬೊಮ್ಮಾ ಇದು ನಿಮ್ಮ ವರ್ತಿ
ನೀರೊಳಗೆ ಮನೆ ಭಾರ ಬೆನ್ನಲಿ
ಕೋರೆದಾಡೆಯ ನಾರಸಿಂಹನೆ ಭೂರಿ ಬೇಡಿದಿ
ಧೀರ ಹರುಷದಿ ವಾರಿ ಬಂಧಿಸಿ ಮಾರ ಜನಕನೆ
ನಾರಿಯರ ವ್ರತಭಂಗ ಕುದುರೆಯನೇರಿ
ಮೆರಿವೆ ಕೋಮಲಾಂಗನೆ
ಸಕಲ ಮಾಯವಿದೇನೊ ತ್ರಿವಿಕ್ರಮನ ಪಾಲಿಸಿ
ಸಕಲನುಳಿಹಿದೆ ನೀನು ಭಕುತಿಯಿಂದಲಿ
ಸ್ತುತಿಪರಿಗೆ ಸುರಧೇನು ಸುಮನಸರ ಭಾನೂ
ಅಖಿಳವೇದೋದ್ಧಾರ ಗಿರಿಧರ
ನಿಖಿಳ ಭೂಮಿಯ ತಂದ ನರಹರಿ
ಯುಕುತಿಯಲಿ ಆಳಿದೆ ಭಕ್ತವೃಂದಕೆ
ಸುಖವ ತೋರುವ ವೇಣು ಗೋಪಾಲನೆ
ರುಕುಮನನುಜೆಯ ರಮಣ ಬೌದ್ಧನೆ
ಲಕ್ಷುಮಿಯರಸನೆ ಕಲ್ಕಿ ರೂಪನೆ
ನಿನ್ನ ರೂಪವಿದೆಲ್ಲಾ ನೋಡುವರಿಗೆ
ಕಣ್ಣು ಸಾಸಿರವಿಲ್ಲಾ ಪಾಡಿ ಪೊಗಳಲು
ರಂನ್ನಘಾತಿದೆನಲ್ಲಾ ಕಂಣಮುಚ್ಚದೆ
ಬೆಂನ್ನ ತೋರುವೆ ಮಂಣ ಕೆದಿರದಿ
ಚಿಂಣಗೊಲಿದನೆ ಸಂಣವಾಮನ ಪುಣ್ಯಪುತ್ರನೆ
ಹಂಣುಸವಿದನೆ ಬೆಂಣೆಗಳ್ಳನೆ
ಹೆಂಣುಗಳ ವ್ರತಗಳೆವ ಹೆಳವನೆಂದು
ಗೆಲಿಸಿದ ರಂಗ ದೇವೋತ್ತುಂಗನೆ