ತಿಳಿ ಮುಗಿಲು
ಕವನ
ತಿಳಿಬಾನಿನ ಶಶಿಯು ನಾನು
ನಿನಗಾಗಿ ಮಾಡಿರುವೆ ಬಾನು
ತಿಳಿಮೋಡ ಸುಂದರ ಪಲ್ಲಂಗ
ತುಂಬಿರುವೆ ಮಿನಿಗು ಚುಕ್ಕಿರಂಗ
ತಿಳಿಮುಗಿಲ ಬಿಳಿಮೋಡದಲಿ
ಕೊಡುವೆ ಬಾರೆ ಸಿಹಿಚುಂಬನ
ತಿಳಿ ಬಾನ ತಿಳಿ ರಾತ್ರಿಯಲಿ
ಮಾಡುವ ಬಾ ಸವಿ ನರ್ತನ
ನೀನೊಮ್ಮೆ ಬಂದು ನೋಡುವೆಯ
ನನ್ನದೆಯಲಿ ಬರೆದಿಹ ಕವಿತೆಯ
ಹೃದಯ ಮಿಡಿತದ ಸವಿಗಾನ
ಪ್ರತಿ ಪದದಲು ನಿನದೆ ಧ್ಯಾನ
ನಗುವ ಚೆಲ್ಲಿ ನಿಂತು ನಾವು
ಖುಷಿ ಪಡುವ ಎಲ್ಲ ನೋಡಿ
ನಲಿವ ಎದೆಯ ಹರುಷದಲಿ
ಇಡುವ ಮನವ ಸರಸದಲಿ
ಹರಸಿ ಶುಭವ ಮೆರೆವ ಭಾನು
ಕಿರಣ ಸವಿಯನುಣಿಸುವ ಭಾನು
ಎರೆದು ಒಲವ ಕುಣಿದು ನಲಿವ
ಹಾಡಿ ನಲಿವ ಕೂಡಿ ಬಾಳುವ
-ಬಂದ್ರಳ್ಳಿ ಚಂದ್ರು, ತುಮಕೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್