ತೀರ್ಥಯಾತ್ರೆ
ಪ್ರಿಯ ಸಂಪದಿಗರೆ,
"ಇದೊಂದು ತೀರ್ಥ ಕ್ಷೇತ್ರಗಳ ಬಗ್ಗೆ ತಿಳಿದಿರುವ ವಿಷಯವನ್ನು ಹಂಚಿಕೊಳ್ಳುವ ಪ್ರಯತ್ನ, ಇದಕ್ಕೆ ಯಾರು ಬೇಕಾದರು ತಮಗೆ ತಿಳಿದದ್ದನ್ನು ಸೇರಿಸಬಹುದು.
ಇಲ್ಲಿ ಯಾರನ್ನು ಉದ್ದೇಶಿಸಿ ಬರೆದುದ್ದಲ್ಲ. ಇಲ್ಲಿ ಬರುವ ಸನ್ನಿವೇಷಗಳು ಕೇವಲ ಕಾಲ್ಪನಿಕ"
ತೀರ್ಥಯಾತ್ರೆ
"ರೀ ನಂದು ಸ್ನೋ, ಸೆಂಟು ಹಾ! ನ್ಯೆಟಿ ಎಲ್ಲಾ ಹಾಕಿದಿರಾ ತಾನೆ, ಸ್ವಲ್ಪಾ ಜಾಸ್ತಿ ದುಡ್ಡು ತೊಗೊಳ್ಳಿ, ನಾನು ಷಾಪಿಂಗ್ ಮಾಡಬೇಕು"
"ಅಲ್ವೇ ಯಾವ ರೇಶ್ಮೆ ಸೀರೆಗಳು ಹಾಕಲಿ, ಯಾವ ಕಾಟನ್ ಸ್ಯಾರಿ ಹಾಕಲಿ ಅದನ್ನ ಹೇಳು, ಬರೀ ಅಲಂಕಾರ ಮಾಡ್ಕೋಳ್ಳೊದೇ ಹೇಲ್ತಿಯಲ್ಲ"
"ಅಯ್ಯೋ ನೀವು ಸೀರೆ ಗೀರೆ ಆಂತ ತಲೆ ತಿಂದ್ರೆ ನಾನ್ ಬರೋದೇ ಇಲ್ಲಾ, ಏನೋ ಜಾಲಿಯಾಗಿ ಹೋಗೋಣ ಆಂದ್ರೆ ನಿಮ್ದೂಂದು, ಆ ಹೊಸ ಡ್ರೆಸ್ ಎರಡು ಹಾಕ್ರಿ, ವೆಟ್ ಟಿಶ್ಯು ಮರೀಬೇಡಿ"
"ಲಕ್ಷಣವಾಗಿ ಸೇರೆ ಉಟ್ಕೋ, ಈ ಚೊಡಿದಾರ್ ಹಕ್ಕೊಂಡರೆ ಆ ದೇವಸ್ಥಾನದಲ್ಲಿ ಒಳಗೆ ಬಿಡ್ತಾರೋ ಇಲ್ವೋ"
"ಅಲ್ಲಾರೀ ಚೊಡಿದಾರ್ ಏನು ಡ್ರೆಸ್ ಅಲ್ವ. ಅದೇನು ಸೀರೆ ಮಾತ್ರ ದೇವ್ರು ಒಪ್ಪೋದು ಅಂತ ಎಲ್ಲಾದ್ರು ಬರಿದಿದಾನ"
"ಅದು ಹಾಗಲ್ಲ , ಎಲ್ಲಿ ಏನು ಸಂಪ್ರದಾಯ ಇರತ್ತೋ ಅದನ್ನು ನಾವು ಪಾಲಿಸಿದರೆ ಅದು ನಮಗೂ ಅನುಕೊಲ ಅಲ್ಲಿ ಇರುವವರಿಗೊ ಅನುಕೂಲ"
"ಅದೆನೋ ನಂಗೊತ್ತಿಲ್ಲ, ನಂಗೆ ಹೆಂಗನಿಸತ್ತೊ ಹಾಗೆ ಮಾಡೋದು, ಆಮೇಲೆ ಈಗ್ಲೆ ಹೇಳಿದೀನಿ, ಆ ಪುಷ್ಕರಿಣಿಲಿ ಸ್ನಾನ ಮಾಡು ಅಂದ್ರೆ ನಾನ್ ಮಾಡಲ್ಲ, ನಾನು ರೂಂನಲ್ಲೆ ಮಾಡೋದು"
"ನಾವು ಹೋಗ್ತಾ ಇರೋದು ತೀರ್ಥ ಯಾತ್ರೆ ಅಂತ, ಅಲ್ಲಿ ಪುಷ್ಕರಿಣಿಲಿ ಗಂಗೆ ಸನ್ನಿಧಾನ ಇದೆ, ದೇವಾನು ದೇವತೆಗಳು ಅಲ್ಲಿ ಸ್ನಾನ ಮಾಡಿದಾರೆ ಅಂತ ಪುರಾಣ ಹೇಳುತ್ತೆ. ರೂಮ್ ಸಿಗತ್ತೋ ಇಲ್ವೋ"
" ರೀ ನಿಮ್ ಪುರಾಣ ನಂಗೆ ಬೇಡ. ಅದು ಇದು ಏನು ಹೇಳ್ಬೇಡಿ"
"ನಿಮ್ಮಣ್ಣ ಬೇರೆ ಬರ್ತಾರೆ ಆಂತೀಯ, ನಿಮ್ಮ ಅತ್ತಿಗೆಗೆ ನಾವು ಮಠದಲ್ಲಿ ಊಟ ಮಾಡೋದು ಅಂತ ಹೇಳಿದಿಯ ತಾನೆ"
"ನಮ್ಮ ಆಣ್ಣ, ಆತ್ತಿಗೆ, ಅವ್ರ ಮಕ್ಕಳು ಇವರಿಗೆಲ್ಲ ನೀವು ಏನು ಹೇಳ್ಬೇಡಿ, ಆವ್ರು ಹೇಗಾದ್ರು ಇರಲಿ, ಏನೋ ನಾವು ಹೊಸ ಕಾರ್ ತೊಗೊಂಡಿದೀವಿ ಆಂತಾ ಜೊತೆಗೆ ಬರ್ತಾರೆ ಅಷ್ಟೆ"
"ಅಲ್ಲಾ ಕಣೇ ತೀರ್ಥಯಾತ್ರೆ ಅಂದ್ರೆ ಶುದ್ದವಾಗಿ , ಒಳ್ಳೆ ಮನಸ್ಸಿನಿಂದ ಹೋಗಬೇಕು, ಆದೇನು ಜಾಲಿ ಟ್ರಿಪ್ ಅಲ್ಲ. ಎಲ್ಲಂದರಲ್ಲಿ ತಿನ್ನೋದು, ಎಷ್ಟೋತ್ತಿಗೋ ಏಳೋದು, ಮೊದಲು ಹೋಗಿ ದೇವರ ದರ್ಶನ ಸೇವೆ ಮಾಡೋದು ಬಿಟ್ಟು ಹೋಟಲಲ್ಲಿ ತಿನ್ನೋದು. ಇದೆಲ್ಲಾ ನಂಗೆ ಸರಿಬರೋಲ್ಲ ನೋಡು".
"ನಿಮಗೇನು ಎಲ್ಲ ತೀರ್ಥ ಕ್ಷೇತ್ರಗಳ ವಿವರಣೆ ಗೊತ್ತಾ, ಆಲ್ಲಿನ ವಿಷೇಶಗಳು ಗೊತ್ತಾ?"
" ಹಾಗೆ ಕೇಳು ಮತ್ತೆ, ನಿನಗೆ ಯಾವ ತೀರ್ಥ ಕ್ಷೇತ್ರದ ವಿವರಣೆ ಬೇಕು ಹೇಳು, ಅಲ್ಲಿನ ವಿಷೇಶ, ನಡವಳಿಕೆ, ಸ್ಠಳ ಮಹಿವೆ, ಅಲ್ಲಿನ ಸಂಪ್ರದಾಯ ಎಲ್ಲಾ ಬೇಕಿದ್ರೆ ಹೇಳ್ತೀನಿ, ಆದ್ರೆ ಅಲ್ಲಿ ಹೋದಾಗ ಹಾಗೆ ನಡೆದುಕೊಳ್ತೀನಿ ಅಂತ ಮಾತುಕೊಡು"
"ಅಲ್ಲಾರಿ ಮದುವೆ ಆದಾಗ್ಲಿಂದ ನೀವೇನಾದ್ರೊ ಪಿಕ್ ನಿಕ್ ಕರೆದಿಕೊಂಡು ಹೋಗಿದಿರಾ ಬರೀ ಅ ದೇವಸ್ಥಾನ, ಈ ಪುಣ್ಯಕ್ಷೇತ್ರ ಅಂತಾನೆ ತಾನೆ ಕರ್ಕೊಂಡ್ ಹೋಗಿರೋದು. ಸುಮ್ನೆ ಹೀಳ್ರಿ"
"ಮೊದಲು ಯಾವ ಸ್ಥಳ ಬೇಕು ನೀನೆ ಕೇಳು"
"ಮೊದಲು ತಿರುಪತಿ ಬಗ್ಗೆ ನಿಮಗೇನು ಗೊತ್ತು ಅದನ್ನಹೇಳಿ, ಬೇರೇದು ಆಮೇಲೆ"
"ಸರಿ ಹಾಗಿದ್ರೆ ತಿರುಪತಿ ತಿರುಮಲ ಬಗ್ಗೆನೆ ಹೇಳ್ತಿನಿ ಕೇಳು" ಆಮೇಲೆ ಕೇಳ್ತಾ ಕೇಳ್ತಾ ನಿದ್ದೆ ಮಾಡಬೇಡ"
ಮುಂದುವರಿಯುವುದು......
Comments
ಉ: ತೀರ್ಥಯಾತ್ರೆ
In reply to ಉ: ತೀರ್ಥಯಾತ್ರೆ by bhalle
ಉ: ತೀರ್ಥಯಾತ್ರೆ