ತುಂಟ ಕೃಷ್ಣನ ತುಂಟಾಟ
ಕವನ
ಬಾನಿನಲ್ಲಿ ಪೂರ್ಣ ಚಂದ್ರ
ಹಾಲಬೆಳಕು ಭೂಮಿಗೆ
ತುಂಟ ಕೃಷ್ಣ ಅವಿತು ಕುಳಿತ
ರಾಧೆ ಬರುವ ವೇಳೆಗೆ
ಎಲ್ಲಿ ಅವಿತರೇನು ಕೃಷ್ಣ
ರಾಧೆ ಹುಡುಕದಿರುವಳೆ
ನಿನ್ನ ಆಟ ಬಲ್ಲಳವಳು
ಆಕೆ ಅರಿಯದಿರುವಳೆ?
ಹೃದಯದೊಳಗೆ ನೀನ್ನನಿರಿಸಿ
ಸತತ ಭಜಿಸುತಿರುವಳು
ಇಂದು ಹೂವಸಹಿತ ಬಂದು
ಪಾದ ಪೂಜೆ ಗೈದಳು
ನೈವೇದ್ಯಕೆಂದು ಸಿಹಿಯ ಮಾಡಿ
ತಂದಳಾಕೆ ಜೊತೆಯಲಿ
ನಿನಗೆ ನೀಡಿ ಖುಷಿಯು ಮನದಿ
ಚೆಲುವ ನಗುವು ಮೊಗದಲಿ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್