ತುಂಟ ನಾಯಿ - ಶಿಶು ಗೀತೆ

ತುಂಟ ನಾಯಿ - ಶಿಶು ಗೀತೆ

ಕವನ

ನಮ್ಮ ಮನೆಯಲೊಂದು ತುಂಟ

ನಾಯಿ ಇರುವುದು..!!

ಬೌ ಬೌ ಎಂದು ದಿನವು

ಅರಚು ತಿರುವುದು..!!

 

ಬಾಲದಂತೆ ನನ್ನ ಹಿಂದೆ

ತಾನು ಬರುವುದು..!!

ಕಳ್ಳರನ್ನು ನೋಡಿತಾನು

ಕೂಗಿ ಕೊಳುವುದು..!!

 

ನನ್ನ ಜೊತೆಗೆ ಮುದ್ದು ನಾಯಿ

ತಿಂಡಿ ತಿನುವುದು..!!

ನಿತ್ಯನನ್ನ ಗೆಳೆಯನಂತೆ

ಜೊತೆಯಲಿರುವುದು..!!

 

ಕೋಪ ಬಂದು ಬಡಿದರೊಮ್ಮೆ

ಕಚ್ಚಿ ಬಿಡುವುದು..!!

ಪಾಪ ಎಂದು ಮುತ್ತನಿಡಲು

ಮೆಚ್ಚಿ ಬರುವುದು..!!

 

ಓಣಿಯಲ್ಲಿ ಒಲುಮೆಗಳಿಸಿ

ತಾನು ಮೆರೆವುದು..!!

ವೀರನಾಗಿ ದೇಶಕಾಯ್ದು

ಕೀರ್ತಿ ಪಡೆವುದು..!!

 

-*ಶಂಕರಾನಂದ ಹೆಬ್ಬಾಳ*

ಚಿತ್ರ: ಗೂಗಲ್ 

 

ಚಿತ್ರ್