ತುಂತುರು ಕವನಗಳು

ತುಂತುರು ಕವನಗಳು

ಕವನ

 

ಸಾಕು ನಿನ್ನ
ಐ.ಟಿ. ಡ್ಯೂಟಿ 
ತೆಗೋ ಸ್ವಲ್ಪ ಬ್ರೇಕು
ಸವಿಯುವ ಬಾ 
ಗೆಳೆಯ ಈಗ
ಕಾಫಿ ಮತ್ತು ಕೇಕು
        *****
ಕಡಲಿನಾಳಕೆ ಇಳಿದು
ಇವ 
ಎಲ್ಲ ತಿಳಿದ
ಆದರೆ 
ನನ್ನ ಮನಸಿನಾಳಕೆ
ಇಳಿಯದೆ
ಹೊರಗೆ ಉಳಿದ
   *****
ಪ್ರಿಯಾ,
ನೀ ಕೊಟ್ಟ ಮುತ್ತು
ಮತ್ತು
ನಿನ್ನೊಡನೆ ಕಳೆದ
ಹೊತ್ತು
ನಾನೀಗ ಮರೆಯಬಾರದು
ಎಂದಷ್ಟೇ  ಗೊತ್ತು
-ಮಾಲು

 

Comments

Submitted by venkatb83 Tue, 10/16/2012 - 17:36

"ಕಡಲಿನಾಳಕೆ ಇಳಿದು
ಇವ
ಎಲ್ಲ ತಿಳಿದ
ಆದರೆ
ನನ್ನ ಮನಸಿನಾಳಕೆ
ಇಳಿಯದೆ
ಹೊರಗೆ ಉಳಿದ
*****

:(((
ಪ್ರಿಯಾ,
ನೀ ಕೊಟ್ಟ ಮುತ್ತು
ಮತ್ತು
ನಿನ್ನೊಡನೆ ಕಳೆದ
ಹೊತ್ತು
ನಾನೀಗ ಮರೆಯಬಾರದು
ಎಂದಷ್ಟೇ ಗೊತ್ತು"

:()))

ಮಾಲ ಅವ್ರೆ-
ಸಾಲುಗಳು ಅರ್ಥಪೂರ್ಣವೂ ಸಮಯೋಚಿತ್ಯವೂ ಆಗಿವೆ...
ನನಗೆ ಬಹು ಮೆಚ್ಚುಗೆಯಾದವು...
ನನ್ನಿ..

ಶುಭವಾಗಲಿ..

\|

Submitted by Seema.v.Joshi Wed, 10/17/2012 - 13:15

In reply to by Seema.v.Joshi

ಮಾಲಾರವರೇ ನಿಮ್ಮ ತುಂತುರು ಕವನಗಳು ಓದುಗರ ಮನಸ್ಸಿಗೆ ಖಂಡಿತವಾಗಿಯೂ ತಂಪನ್ನೀಯುತ್ತವೆ. ಸೀಮಾ ಜೋಶಿ.

Submitted by Maalu Wed, 10/17/2012 - 17:37

In reply to by Premashri

ನನ್ನ ಕವಿತೆಯನ್ನು, ಹನಿಗವನಗಳನ್ನು ಓದುತ್ತಿರುವ ಮತ್ತು
ಉತ್ತಮ ಪ್ರತಿಕ್ರಿಯೆ ನೀಡುತ್ತಿರುವ ನಿಮಗೆಲ್ಲ ಧನ್ಯವಾದಗಳು.
ನಿಮ್ಮ ಪ್ರೀತಿಯ ಮಾಲು.