ತುಪ್ಪದ ದೀಪ ಹಚ್ಚುವುದರ ರಹಸ್ಯಗಳು..!

ತುಪ್ಪದ ದೀಪ ಹಚ್ಚುವುದರ ರಹಸ್ಯಗಳು..!

ಬಹು ಪ್ರಾಚೀನಕಾಲದಿಂದಲೂ ನಮ್ಮಲ್ಲಿ ಆಚರಣೆಯಲ್ಲಿರುವ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಸಂಪ್ರದಾಯಗಳನ್ನು ಇಂದಿನ ಪಾಶ್ಚಿಮಾತ್ಯ ವಿಜ್ಞಾನ, ಇವೆಲ್ಲದಕ್ಕೆ ಅರ್ಥವಿಲ್ಲದೆ ಗೊಡ್ಡು ಸಂಪ್ರದಾಯ, ಮೂಢನಂಬಿಕೆ ಅನಾಗರಿಕತೆಯ ಲಕ್ಷಣ ಎಂದು ಹೀಯಾಳಿಸಿ ಅವುಗಳನ್ನು ತೊರೆಯಲು ಉಪದೇಶಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಮಂದಿ ಆಧುನಿಕ ವಿಚಾರವಾದಿಗಳು ಈ ಧಾರ್ಮಿಕ ಪರಂಪರೆಗಳ ಹಿಂದೆ ಇರುವ ಸತ್ಯಾಸತ್ಯತೆಗಳನ್ನು ತಿಳಿಯಲು ಚಿಂತನೆ ನಡೆಸಿ ಇವುಗಳು ಕೇವಲ ಅರ್ಥಹೀನ ಅನಾಗರಿಕ, ಮೂಢನಂಬಿಕೆಗಳಾಗಿರದೆ ನಮ್ಮ ನಾಗರಿಕ ಸಂಸ್ಕೃತಿಯ ಸಂಕೇತವಾಗಿವೆ. ವ್ಯಕ್ತಿ ಮತ್ತು ಸಮಾಜದ ಆರೋಗ್ಯಕ್ಕೆ ಪೂರಕವಾಗಿವೆ ಎಂಬ ವೈಜ್ಞಾನಿಕ ಸತ್ಯವನ್ನು ಜನತೆಗೆ ತೋರಿಸಲು ಪ್ರಯತ್ನ ನಡೆಸಿದ್ದಾರೆ. ಭಾರತೀಯ ಸಂಸ್ಕೃತಿಯ ಆಧಾರಸ್ತಂಭಗಳಂತಿರುವ ಈ ಧಾರ್ಮಿಕ ಪರಂಪರೆಗಳೂ ನಮ್ಮ ಧರ್ಮ ಮತ್ತು ಸಂಸ್ಕೃತಿಯ ಉನ್ನತಿಗೆ ಕಾರಣವಾಗಿವೆ ಎನ್ನುವ ವಿಚಾರವನ್ನು ಜನತೆಗೆ ತಿಳಿಯಹೇಳಬೇಕಾದುದು ಇಂದಿನ ಆಧುನಿಕ ವಿಚಾರವಾದಿಗಳ ಚಿಂತಕರ ಆದ್ಯ ಕರ್ತವ್ಯವಾಗಿದೆ.

*ಸ್ವಾಸ್ಥ ರಕ್ಷಣೆಗೆ ಪೂರಕ* :

ದೇವರಿಗೆ ತುಪ್ಪದ ದೀಪ ಹಚ್ಚುವ ಸಂಪ್ರದಾಯ ನಮ್ಮಲ್ಲಿ ಬಹುಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿರುವ ಒಂದು ಧಾರ್ಮಿಕ ಪರಂಪರೆ. ಇದೇ ರೀತಿ ದೇವಸ್ಥಾನಗಳಲ್ಲಿ ತುಪ್ಪದ ದೀಪ ಹಚ್ಚುವುದು, ತುಪ್ಪದ ಆರತಿ ಬೆಳಗುವುದು, ಹೋಮ-ಹವನಗಳಲ್ಲಿ ಅಗ್ನಿಗೆ ತುಪ್ಪ ಸುರಿಯುವುದು ಮುಂತಾದ ಧಾರ್ಮಿಕ ಸಂಪ್ರದಾಯಗಳು ನಮ್ಮಲ್ಲಿ ರೂಢಿಯಲ್ಲಿವೆ. ಇಂತಹ ಧಾರ್ಮಿಕ ಸಂಪ್ರದಾಯದ ಹಿನ್ನೆಲೆಯ ಸತ್ಯವನ್ನು ತಿಳಿಯಲು ಪ್ರಾಮಾಣಿಕ ಚಿಂತನೆ ನಡೆಸಿದಾಗ ಇದು ಕೇವಲ ಅರ್ಥಹೀನ ಆಚರಣೆ ಅಥವಾ ಮೂಢನಂಬಿಕೆಯಾಗಿರದೆ, ವ್ಯಕ್ತಿ ಮತ್ತು ಸಮಾಜದ ಸ್ವಾಸ್ಥ್ಯ ರಕ್ಷಣೆಗೆ ಪೂರಕವಾಗಿದೆ ಎಂಬ ವೈಜ್ಞಾನಿಕ ಸತ್ಯದ ಅರಿವಾಗುತ್ತದೆ.

ಆಯುರ್ವೇದ ವೈದ್ಯಶಾಸ್ತ್ರ ತುಪ್ಪ ಮತ್ತು ಅದರ ಔಷಧಿಯ ಗುಣಗಳನ್ನು ವಿಫುಲವಾಗಿ ಚರ್ಚಿಸುತ್ತಾ ಆಯಸ್ಸು ಮತ್ತು ಆರೋಗ್ಯ ವರ್ಧನೆಗೆ ತುಪ್ಪ ಒಂದು ಶ್ರೇಷ್ಠ ಪೌಷ್ಟಿಕ ಪದಾರ್ಥ ಎಂದು ಸಾರುತ್ತದೆ. ಅಗ್ನಿ ದೀಪಕ (ಜೀರ್ಣಶಕ್ತಿಯನ್ನು ಹೆಚ್ಚಿಸುವಿಕೆ) ಕಾಂತಿವರ್ಧಕ, ಶುಕ್ರ ವರ್ಧಕ, ಓಜೋವರ್ಧಕ, ಯೌವ್ವನಕಾರಕ, ಆಯುರ್ವರ್ಧಕ, ಚಕ್ಷುಶ್ಯ (ಕಣ್ಣಿಗೆ ಹಿತಕಾರಕ) ವಿಷಘ್ನ ಮುಂತಾದ ಅಮೂಲ್ಯಗುಣಗಳ ಜೊತೆಗೆ ತುಪ್ಪ, ಧೃತಿ, ಸ್ಮತಿವರ್ಧಕ, ಅಂದರೆ ವಿಷವನ್ನು ಗ್ರಹಿಸುವ ಶಕ್ತಿಧಾರಣ ಶಕ್ತಿ, ಸ್ಮರಣ ಶಕ್ತಿ, ಪ್ರಸಾಧನ ಶಕ್ತಿ ಮುಂತಾದ ಬುದ್ಧಿಯ ಅಷ್ಟಾಂಗ ಗುಣಗಳನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ತುಪ್ಪಕ್ಕೆ ಮನಸ್ಸಿನಲಿ ಮೂಡಬಹುದಾದ ದುಷ್ಟ ವಿಚಾರಗಳನ್ನು ನಿವಾರಿಸಿ, ಶಾಂತಚಿತ್ತ ಸ್ಥಿತಿಯನ್ನುಂಟು ಮಾಡುವ ಒಂದು ಅಪೂರ್ವ ಗುಣವಿದೆ. ಇಂತಹ ಅದ್ಭುತ ಗುಣವುಳ್ಳ ತುಪ್ಪದ ಸೇವನೆಯಿಂದ ಆಯಸ್ಸು ಮತ್ತು ಆರೋಗ್ಯ ವೃದ್ಧಿಯಾಗುತ್ತದೆ ಎಂದು ಅರಿತಿದ್ದ ನಮ್ಮ ಪೂರ್ವಿಕರು ಇದನ್ನು ತಮ್ಮ ದೈನಂದಿನ ಆಹಾರದಲ್ಲಿ, ಆಚಾರದಲ್ಲಿ, ಹಾಗೂ ಔಷಧಿಯಾಗಿ ದಿನನಿತ್ಯ ಬಹು ವ್ಯಾಪಕವಾಗಿ ಬಳಸುತ್ತಿದ್ದರು.

*ವೈಜ್ಞಾನಿಕ ಹಿನ್ನೆಲೆ :*

ಮನೆಯಲ್ಲಿ ಮಂಗಳ ಕಾರ್ಯ ನಡೆಯುವಾಗ, ಮದುವೆ-ಮುಂಜಿಗಳಲ್ಲಿ, ಹಾಗೂ ಜನಿಸಿದಾಗ, ಹಬ್ಬ ಹರಿದಿನ ಮುಂತಾದ ವಿಶೇಷ ಸಂದರ್ಭಗಳಲ್ಲಿ ದೇವರಿಗೆ ತುಪ್ಪದ ದೀಪ ಹಚ್ಚಿ, ತುಪ್ಪದ ಆರತಿ, ಬೆಳಗುವ ಸಂಪ್ರದಾಯ ಬಹು ಹಿಂದಿನ ಕಾಲದಿಂದಲೂ ರೂಢಿಯಲ್ಲಿದೆ. ಪ್ರತಿದಿನ ದೇವರಿಗೆ ತುಪ್ಪದ ದೀಪ ತುಪ್ಪದ ಆರತಿ, ಬೆಳಗುವ ಸಂಪ್ರದಾಯ ಬಹು ಹಿಂದಿನ ಕಾಲದಿಂದಲೂ ರೂಢಿಯಲ್ಲಿದೆ.

ಪ್ರತಿದಿನ ದೇವರಿಗೆ ತುಪ್ಪದ ದೀಪ ಹಚ್ಚಿ ಪೂಜಿಸುವ ಪದ್ಧತಿಯನ್ನು ಈಗಲೂ ಸಹ ಕೆಲವರ ಮನೆಗಳಲ್ಲಿ ಕಾಣಬಹುದು. ಹೀಗೆ ಹಚ್ಚುವ ತುಪ್ಪದ ದೀಪ, ಬೆಳಗುವ ತುಪ್ಪದ ಆರತಿ ಅಂಧ ಶ್ರದ್ಧೆ, ಗೊಡ್ಡು ಸಂಪ್ರದಾಯ ಎಂದು ಅನೇಕರು ಭಾವಿಸಿರುವರು. ಆದರೆ ಇಲ್ಲಿ ದೇವರ ಮುಂದೆ ತುಪ್ಪದ ದೀಪ ಹಚ್ಚುವ ಪರಂಪರೆಯನ್ನು ವೈಜ್ಞಾನಿಕವಾಗಿ ವಿಚಾರ ಮಾಡಿದಾಗ ತುಪ್ಪದಲ್ಲಿರುವ ವಿಷಘ್ನ ಗುಣದಿಂದ ತುಪ್ಪದ ದೀಪ ಉರಿಯುವಾಗ ಹೊರಸೂಸುವ ಧೂಮ ಮನೆಯಲ್ಲಿನ ವಾತಾವರಣದಲ್ಲಿರುಬಹುದಾದ ವಿಷ. ಕ್ರಿಮಿಗಳನ್ನು ನಾಶ ಮಾಡಿ ಅದನ್ನು ಶ್ರದ್ಧ ಮಾಡುತ್ತದೆ. ಇದಲ್ಲದೆ ಈ ಧೂಮವನ್ನು ನಾವು ಉಸಿರಾಟದ ಮೂಲಕ ಸೇವಿಸಿದಾಗ, ತುಪ್ಪದ ಮೇಧೋವರ್ಧಕ ಗುಣ ಪ್ರಭಾವದಿಂದ ಮಿದುಳಿನಲ್ಲಿ ಚೇತನ ಉಂಟಾಗಿ, ಮಿದುಳಿನ ಗ್ರಹಣ, ಧಾರಣ, ಸ್ಮರಣ ಪ್ರಸಾದನ ಶಕ್ತಿಗಳು ವೃದ್ಧಿಯಾಗುತ್ತವೆ. ಇದರಿಂದ ವ್ಯಕ್ತಿಯಲ್ಲಿ ವಿಷವನ್ನು ಗ್ರಹಿಸುವ ಶಕ್ತಿ, ಧಾರಣ ಮಾಡುವ ಶಕ್ತಿ, ಜ್ಞಾಪಕಶಕ್ತಿ ಪ್ರಸಾರಣ ಶಕ್ತಿಗಳು ಹೆಚ್ಚುತ್ತವೆ. ಇದಲ್ಲದೆ ತುಪ್ಪದ ಮತ್ತೊಂದು ಅಮೂಲ್ಯ ಗುಣವಾದ ಪಾಪನಾಶಕ ಶಕ್ತಿಯ ಪ್ರಭಾವದಿಂದ ಮನಸ್ಸಿನ ದೋಷಗಳಿಂದ ರಜೋಗುಣ ಮತ್ತು ತಮೋಗುಣಗಳು ನಾಶವಾಗಿ ಸಾತ್ವಿಕ ಗುಣ ವೃದ್ಧಿಯಾಗುತ್ತದೆ ಇದರಿಂದ ಮನಸ್ಸಿನಲ್ಲಿ ಮೂಡಬಹುದಾದ ಪಾಪ ವಿಚಾರಗಳು, ದುಷ್ಟ ವಿಚಾರಗಳು ದೂರವಾಗಿ ಶಾಂತಚಿತ್ತತೆ ಮೂಡುತ್ತದೆ.

*ಆರೋಗ್ಯದ ದೃಷ್ಟಿಯಿಂದ :*

ಮನೆಯಲ್ಲಿ ದೇವರಿಗೆ ದಿನನಿತ್ಯ ತುಪ್ಪದ ದೀಪ ಬೆಳಗಿಸುವುದರಿಂದ ವಾತಾವರಣ ನಿರ್ಮಲವಾಗುವುದೇ ಅಲ್ಲದೆ ಮನಸ್ಸಿನಲ್ಲಿ ಮೂಡಬಹುದಾದಂತಹ ಪಾಪ ಚಿಂತನೆಗಳು ದೂರವಾಗಿ ಮನೆಯಲ್ಲಿ ವಾಸ ಮಾಡುವ ಮನಸ್ಸು ಶಾಂತಚಿತ್ತ ಸ್ಥಿತಿಯನ್ನು ದುರವಾಗಿ ಮನೆಯಲ್ಲಿ ವಾಸ ಮಾಡುವ ಮನಸ್ಸು ಶಾಂತಚಿತ್ತ ಸ್ಥಿತಿಯನ್ನು ಪಡೆದು ಸದಾ ಶಾಂತಿ, ನೆಮ್ಮದಿ ನೆಲೆಸುತ್ತವೆ. ದೇವರ ಮುಂದೆ ತುಪ್ಪದ ದೀಪ ಹಚ್ಚಿ ಪೂಜೆ ಧ್ಯಾನದಲ್ಲಿ ತೊಡಗಿದಾಗ ಮನಸ್ಸಿನ ಚಿಂಚಲತೆ ದೂರವಾಗಿ ಮನಸ್ಸು ಧ್ಯಾನದಲ್ಲಿ ಅಚಲವಾಗಿ ನಿಲ್ಲುತ್ತದೆ. ಇದರಿಂದ ಧ್ಯಾನದ ಪೂರ್ಣ ಫಲ ನಮಗೆ ದೊರೆಯುತ್ತದೆ. ಆದುದರಿಂದ ದೇವರ ಮುಂದೆ ತುಪ್ಪದ ದೀಪ ಹಚ್ಚುವ ಸಂಪ್ರದಾಯ ಮೂಢನಂಬಿಕೆಯಾಗಿರದೆ ಮನಸ್ಸಿನ ಆರೋಗ್ಯವನ್ನು ಕಾಪಾಡುವ ಒಂದು ಶ್ರೇಷ್ಠ ವೈಜ್ಞಾನಿಕ ಸತ್ಯವನ್ನು ನಿರೂಪಿಸುತ್ತದೆ.

*ಪರಿಸರ ಸಂರಕ್ಷಣೆಗಾಗಿ :*

ಇದಲ್ಲದೆ ಹೋಮ, ಹವನ, ಯಜ್ಞ-ಯಾಗಾದಿಗಳಲ್ಲಿ ಅಗ್ನಿಗೆ ತುಪ್ಪ ಸುರಿಯುವ ಪರಂಪರೆಯೂ ಸಹ ಬಹಳ ವೈಜ್ಞಾನಿಕ ಮಹತ್ವವುಳ್ಳದ್ದಾಗಿದೆ. ಹೋಮ ಯಜ್ಞಗಳಲ್ಲಿ ಬಳಸುವ ವಿಶೇಷ ವನಸ್ಪತಿಗಳು ಹಾಗೂ ತುಪ್ಪ ಇವುಗಳಿಂದ ಹೊರ ಸೂಸುವ ಧೂಮ ಸುತ್ತಮುತ್ತಲಿನ ವಾತಾವರಣವನ್ನು ನಿರ್ಮಲಗೊಳಿಸುತ್ತದೆ. ಹಾಗೂ ವ್ಯಕ್ತಿಯ ಮನಸ್ಸಿನ ಶಾಂತಚಿತ್ತತೆಯನ್ನು ಕಾಪಾಡಿ ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡುವ ಸಾಮರ್ಥ್ಯವುಳ್ಳದ್ದಾಗಿದೆ ಎಂಬ ವಿಚಾರವನ್ನು ಇತ್ತೀಚಿನ ಕೆಲವು ವಿಚಾರವಾದಿ ವಿಜ್ಞಾನಿಗಳು ಪ್ರಮಾಣಿಕರಿಸಿದ್ದಾರೆ. ‌     ‌           ‌         ‌       ‌             ‌            ‌        ‌        ‌        ‌    ‌    ‌      ‌          ‌         ‌             ‌  ‌                                                     *ದೇವರಿಗೆ ತುಪ್ಪದ ದೀಪ ಹಚ್ಚುವುದೇಕೆ...?*

ಹಿಂದೂ ಧರ್ಮದಲ್ಲಿ ತುಪ್ಪದ ದೀಪಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಪೂಜೆ ಸಮಯದಲ್ಲಿ ಹಲವು ಜನರು ತುಪ್ಪದ ದೀಪ ಹಚ್ಚುವುದನ್ನು ನೋಡಿದ್ದೇವೆ.. ತುಪ್ಪದ ದೀಪ ಹಚ್ಚುವುದರಿಂದ ಸಕಾರಾತ್ಮಕತೆ ಹೆಚ್ಚುತ್ತದೆ. ದೇವರಿಗೆ ತುಪ್ಪದ ದೀಪ ಯಾಕೆ ಶ್ರೇಷ್ಠ.. ವಿಸ್ತಾರವಾಗಿ ಇಲ್ಲಿದೆ ಮಾಹಿತಿ. 

*ದೇವರಿಗೆ ತುಪ್ಪದ ದೀಪ ಹಚ್ಚುವುದರ ಪ್ರಯೋಜನಗಳು*

ಹಿಂದೂ ಧರ್ಮ ಹಾಗೂ ಧರ್ಮ ಗ್ರಂಥಗಳಲ್ಲಿ ತುಪ್ಪದ ದೀಪಕ್ಕೆ ಸಾಕಷ್ಟು ಮಹತ್ವವಿದೆ. ಪ್ರತಿ ಹಿಂದೂ ಕುಟುಂಬದಲ್ಲಿ ಬೆಳಿಗ್ಗೆ ಮತ್ತು ಸಂಜೆ ಮನೆಯಲ್ಲಿ ಮಹಿಳೆಯರು ದೇವರ ಮುಂದೆ ದೀಪವನ್ನು ಹಚ್ಚುವ ಪದ್ಧತಿ ಇದೆ. ದೀಪ ಹಚ್ಚುವುದರಿಂದ ದೇವತೆಗಳು ಸಂತೋಷವಾಗುತ್ತಾರೆ ಎಂದು ಹೇಳಲಾಗಿದೆ. ಆದರೆ, ಶಿವ ಪುರಾಣದ ಪ್ರಕಾರ, ದೇವರ ಮುಂದೆ ದೀಪ ಹಚ್ಚುವುದರಿಂದ ಮನೆಯಲ್ಲಿ ಸಂತೋಷ, ನೆಮ್ಮದಿ, ಸಂಪತ್ತು ಹಾಗೂ ಆರೋಗ್ಯ ವೃದ್ದಿಸುತ್ತದೆ. ತುಪ್ಪದ ದೀಪ ಹಚ್ಚುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ, ಆದ್ದರಿಂದ ತುಪ್ಪದ ದೀಪಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ. 

*ತುಪ್ಪದ ದೀಪ ಹಚ್ಚುವುದು ಏಕೆ..!*

ದೇವರಿಗೆ ತುಪ್ಪದ ದೀಪ ಹಚ್ಚುವುದು ಹಿಂದಿನ ಕಾಲದಿಂದಲೂ ನಡೆದು ಬಂದ ಸಂಪ್ರದಾಯ. ತುಪ್ಪದ ಆರತಿ ಬೆಳಗುವುದು, ತುಪ್ಪದ ದೀಪ ಹಚ್ಚುವುದು, ಹೋಮ ಹವನಗಳಲ್ಲಿ  ಅಗ್ನಿಗೆ ತುಪ್ಪ ಸುರಿಯುವುದು , ಮುಂತಾದ ಧಾರ್ಮಿಕ ಕಾರ್ಯಗಳಲ್ಲಿ ಇದು ರೂಢಿಯಲ್ಲಿದೆ. ಈಗಲೂ ಪ್ರತಿ ದಿನ ದೇವರಿಗೆ ತುಪ್ಪದ ದೀಪ ಹಚ್ಚುವ ಪದ್ಧತಿ ಇದೆ. 

ಇನ್ನು ಪ್ರತಿಯೊಬ್ಬರೂ ದೇವರ ಮುಂದೆ ದೀಪ ಹಚ್ಚುತ್ತಾರೆ. ಈ ಮೂಲಕ ಆರಾಧನೆ ಮಾಡಿ, ನಿತ್ಯ ಬೆಳಿಗ್ಗೆ ಹಾಗೂ ಸಂಜೆ ದೀಪ ಹಚ್ಚುತ್ತಾರೆ. ಈ ರೀತಿ ದೀಪ ಹಚ್ಚುವುದರಿಂದ ಮನೆಯಲ್ಲಿ ಇರುವ ಅಂಧಕಾರ ಹೋಗಿ ವಾಸ್ತು ದೋಷ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. 

*ತುಪ್ಪ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ..!*

ತುಪ್ಪ ವಿದ್ಯುತ್ಕಾಂತೀಯ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಚರ್ಮದ ಕೋಶಗಳನ್ನು ಸಕ್ರಿಯಗೊಳಿಸುತ್ತದೆ. ಇದು ಡರ್ಮಟೈಟಿಸ್ ನಂತಹ ಕಾಯಿಲೆಗಳನ್ನು ನಿವಾರಿಸುತ್ತದೆ. ಮನೆಯಲ್ಲಿ ಪ್ರತಿದಿನ ತುಪ್ಪದ ದೀಪ ಹಚ್ಚುವುದರಿಂದ ಮನೆಯ ವಾತಾವರಣದಲ್ಲಿರುವ ಇರುವ ಮಾಲಿನ್ಯವು ನಿವಾರಣೆಯಾಗುತ್ತದೆ. 

ಇನ್ನು ತುಪ್ಪದ ದೀಪ ಹೊರಸೂಸುವ ಹೊಗೆ ಗಾಳಿಯ ಶುದ್ಧೀಕರಣವಾಗಿ ಕಾರ್ಯನಿರ್ವಹಿಸುತ್ತದೆ. ಮತ್ತು ಮನೆಯ ಗಾಳಿಯಲ್ಲಿರುವ ಸೂಕ್ಷ್ಮ ಜೀವಿಗಳನ್ನು ಸಹ ನಾಶಪಡಿಸುತ್ತದೆ. ತುಪ್ಪದ ದೀಪದ ಸುವಾಸನೆ ಮನಸ್ಸನ್ನು ಶಾಂತವಾಗಿರಿಸುತ್ತದೆ ಮತ್ತು ಖಿನ್ನತೆಯನ್ನು ನಿವಾರಿಸುತ್ತದೆ. 

*ತುಪ್ಪದ ದೀಪ ಹಚ್ಚಲು ಧಾರ್ಮಿಕ ಕಾರಣಗಳೇನು..?*

ಹಿಂದೂ ಧರ್ಮದಲ್ಲಿ, ಬೆಂಕಿಯನ್ನು ದೇವತೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಪ್ರತಿ ಪೂಜೆಯನ್ನು ದೀಪವನ್ನು ಬೆಳಗಿಸುವ ಮೂಲಕ ಪ್ರಾರಂಭಿಸಲಾಗುತ್ತದೆ. ಅಲ್ಲದೇ ಮನೆಯಲ್ಲಿ ತುಪ್ಪದ ದೀಪವನ್ನು ಬೆಳಗಿಸುವ ಮೂಲಕ ತಾಯಿ ಲಕ್ಷ್ಮೀ ದೇವಿ ಕೂಡಾ ಸಂತೋಷದಿಂದ ಮನೆಯಲ್ಲಿ ಶಾಶ್ವತವಾಗಿ ನೆಲಸುತ್ತಾಳೆ ಎಂದು ಹೇಳಲಾಗುತ್ತದೆ. 

*ದೀಪವನ್ನು ಬೆಳಗಿಸುವ ಸರಿಯಾದ ನಿಯಮಗಳೇನು..?*

ದೀಪವನ್ನು ಹಚ್ಚುವುದರಿಂದ ನೀವು ದೀಪದ ಜ್ವಾಲೆಯನ್ನು ಪೂರ್ವಕ್ಕೆ ಇಟ್ಟುಕೊಂಡರೆ, ಅದು ನಿಮ್ಮ ಜೀವತಾವಧಿಯನ್ನು ಹೆಚ್ಚಿಸುತ್ತದೆ. 

ತುಪ್ಪದ ತುಪ್ಪದ ದೀಪವನ್ನು ಬೆಳಗಿಸುವಾಗ, ಅದರ ಜ್ವಾಲೆಯು ಪಶ್ಚಿಮಕ್ಕೆ ಹೋಗಲು ಬಿಡಬೇಡಿ, ಇಲ್ಲದಿದ್ದರೆ ಅದು ನಿಮ್ಮ ಮನೆಯಲ್ಲಿ ದುಃಖವನ್ನು ಹೆಚ್ಚಿಸುತ್ತದೆ.

ತುಪ್ಪದ ದೀಪದ ಜ್ವಾಲೆಯನ್ನು ನೀವು ಉತ್ತರ ದಿಕ್ಕಿನ ಕಡೆಗೆ ಇಟ್ಟುಕೊಂಡರೆ, ಇದರಿಂದ ನೀವು ಪ್ರಯೋಜನ ಪಡೆಯುತ್ತೀರಿ. 

ದೀಪದ ಜ್ವಾಲೆಯನ್ನು ದಕ್ಷಿಣದ ಕಡೆಗೆ ಇಟ್ಟುಕೊಂಡರೆ, ನೀವು ನಷ್ಟ ಅನುಭವಿಸುತ್ತೀರಿ. ಇದು ನಿಮ್ಮ ಮನೆಯಲ್ಲಿ ಹಣದ ನಷ್ಟಕ್ಕೆ ಕಾರಣವಾಗಬಹುದು. ಪೂಜೆ ಮಾಡುವಾಗ, ಎರಡು ರೀತಿಯ ದೀಪವನ್ನು ಯಾವಾಗಲೂ ಬೆಳಗಿಸುವಾಗ, ತುಪ್ಪದ ದೀಪದ ಸುವಾಸನೆ ಇದು ಮನೆಯಲ್ಲಿ ಶಾಂತಿಯ, ವಾತಾವರಣವನ್ನು ಸೃಷ್ಟಿಸುತ್ತದೆ. 

ಪೂಜೆ ಮಾಡುವಾಗ ಎಂದಿಗೂ ತುಪ್ಪದ ದೀಪದಿಂದ ಅಗರಬತ್ತಿ ಹಚ್ಚಬೇಡಿ. ಇದರಿಂದ ಬಡತನ ಹೆಚ್ಚಾಗುತ್ತದೆ. ಒಂದು ದೀಪವನ್ನು ಮತ್ತೊಂದು ದೀಪಕ್ಕೆ ಹಚ್ಚುವುದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. 

ಅಂತೆಯೇ, ದೀಪದೊಂದಿಗೆ ದೀಪವನ್ನು ಎಂದಿಗೂ ಬೆಳಗಿಸಬೇಡಿ. ಇದು ಮನೆಯ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಅದೇ ರೀತಿ ದೀಪ ಹಚ್ಚುವಾಗ ಬೆಂಕಿ ಕಡ್ಡಿ ಬಳಸುತ್ತೀರಿ. ಆಗ ಬಾಯಿಂದ ಬೆಂಕಿ ಕಡ್ಡಿ ಆರಿಸಬೇಡಿ. ಕೈಯಿಂದ ನಂದಿಸಿ, ನೀವು ಬಾಯಿಂದ ಬೆಂಕಿ ನಂದಿಸಲು ಪ್ರಯತ್ನಿಸಿದರೆ ಲಕ್ಷ್ಮೀ ಅಲ್ಲಿಂದ ಹೋಗುತ್ತಾಳೆ ಎನ್ನುವ ನಂಬಿಕೆ ಇದೆ.

ಪೂಜೆಯ ವೇಳೆ ಪ್ರಮುಖ ವಿಷಯವೆಂದರೆ, ಪೂಜೆಯ ಸಮಯದಲ್ಲಿ ಮತ್ತು ನಂತರದ ಹಲವು ಗಂಟೆಗಳ ಕಾಲ ದೀಪವನ್ನು ಬೆಳಗಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. 

*ಎಣ್ಣೆಗಿಂತ ತುಪ್ಪ ಮುಖ್ಯ…*

ಧರ್ಮಗ್ರಂಥಗಳಲ್ಲಿ ಎಣ್ಣೆಗಿಂತ ಹೆಚ್ಚು ತುಪ್ಪದ ದೀಪವನ್ನು ಬೆಳಗಿಸುವುದು ಹೆಚ್ಚು ಮುಖ್ಯ ಎಂದು ಹೇಳಲಾಗುತ್ತದೆ. ಎಣ್ಣೆ ಅಥವಾ ತುಪ್ಪದಿಂದ ದೀಪವನ್ನು ಹಚ್ಚಬೇಕು. ಅದರಲ್ಲೂ ತುಪ್ಪದ ದೀಪ ಹೆಚ್ಚು ಶ್ರೇಷ್ಠ ಎಂದು ಹೇಳಲಾಗುತ್ತದೆ.

(ಸಂಗ್ರಹ)