'ತುಳು' ಭಾಷೆ ಇಲ್ಲಿ ಒಪ್ಪಿಗೆಯೇ?

'ತುಳು' ಭಾಷೆ ಇಲ್ಲಿ ಒಪ್ಪಿಗೆಯೇ?

Comments

ಬರಹ

ಕರಾವಳಿ ಜಿಲ್ಲೆಯಲ್ಲಿ ಪ್ರಚಲಿತವಿರುವ 'ತುಳು' ಭಾಷೆ ಈಗ ವಿಶ್ವದೆಲ್ಲೆಡೆ ಪಸರಿಸಿರುವ ತುಳುವರಿಂದಾಗಿ ಮಾನ್ಯತೆ ಪಡೆದಿದೆ.

ಕರಾವಳಿಯಲ್ಲಿರುವ ಸಾಮಾನ್ಯ ಎಲ್ಲಾ ಪತ್ರಿಕೆಗಳಲ್ಲೂ ತುಳು ವಿಭಾಗವಿದೆ.. ಹಾಗೂ ನಾನು ನೋಡಿದಂತೆ.. ಮುಂಬಯಿಯ ಜನಪ್ರಿಯ ಪತ್ರಿಕೆ 'ಕರ್ನಾಟಕ ಮಲ್ಲ' ದಲ್ಲಿಯೂ ತುಳುವಿಗೆ ವಿಷೇಶ ಸ್ಥಾನವಿದೆ.

ನನ್ನ ಪ್ರಶ್ನೆಯೇನೆಂದರೆ.. ಒಂದು ವೇಳೆ ತುಳು ಬರಹಗಾರರಿದ್ದಲ್ಲಿ.. ಅವರಿಗಾಗಿ ಸಂಪದದಲ್ಲಿ ಜಾಗವಿದೆಯೇ? ಸಂಪದ ಓದುಗರು ಇದನ್ನ ಸ್ವೀಕರಿಸುವಿರಾ?

ತುಳುವಿಗೆ 'ಮಲಯಾಳ' ಸ್ವರೂಪದ ಲಿಪಿಯಿದ್ದರೂ ಆಧುನಿಕ ಸಾಹಿತ್ಯದಲ್ಲಿ ನಾನೆಲ್ಲಿಯೂ ಈ ತುಳು ಲಿಪಿಯ ಬರವಣಿಗೆ ನೋಡಿಲ್ಲ ಎಲ್ಲರೂ ಕನ್ನಡ ಲಿಪಿಯಲ್ಲೇ ಬರೆಯುತ್ತಿದ್ದಾರೆ...

ಓದುಗರೇ ನಿಮ್ಮ ಅಭಿಪ್ರಾಯವೇನು.. ಸಂಪದದಲ್ಲಿ ತುಳುವಿಗೆ ಸ್ಥಾನದ ಬಗ್ಗೆ..

ಧನ್ಯವಾದಗಳೊಂದಿಗೆ
ಪ್ರಕಾಶ್ ಶೆಟ್ಟಿ ಉಳೆಪಾಡಿ
ಒಬ್ಬ ತುಳುವ ;)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet