ತುಷಾರಿಣಿ
ಕವನ
ತಮವನ್ನು ಓಡಿಸುತ
ತರತರದಿ ಬೆಳಕಿನವಳು
ತುಷಾರವಾಗಿ ಮನವ
ತಂಗಾಳಿಯಲಿ ಅಪ್ಪಿದಳು||
ತಳಮಳದ ಹೃದಯವನು
ತಪ್ಪಿಲದೆ ಒಪ್ಪಿದಳು
ತರಂಗದ ಅಲೆಯಂತೆ
ತೆವಂಗದಿ ಕಾಣುವಳು||
ತನುವನು ಬಯಸುತ
ತಪಸಿಯಾಗಿ ನಿಂತಳು
ತಮಟೆಯನು ಬಾರಿಸಿ
ತಳಕಿತ್ತದೆ ಕುಳಿತಳು||
ತಂಗುತಲಿ ಹೃದಯದಿ
ತಂಪನು ಅನುಭವಿಸಿದಳು
ತಂಗದಿರನಾದ ನಲ್ಲನನು
ತಂಗರಗದಿ ನೋಡಿದಳು||
ತೆಪ್ಪದಲಿ ನನಗಾಗಿ
ತಂದಿಹಳು ನಗೆಯಲ್ಲಿ
ತುಪ್ಪವನು ಹೆಪ್ಪಿಳಿಸಿ
ತೆಂಗಿನ ತೋಟದಲ್ಲಿ||
-ಶಂಕರಾನಂದ ಹೆಬ್ಬಾಳ
ಚಿತ್ರ್
