ತೆಂಗಿನಕಾಯಿ ಸಿಹಿ ವಡೆ
ಬೇಕಿರುವ ಸಾಮಗ್ರಿ
ತೆಂಗಿನ ತುರಿ ೨ ಕಪ್, ಚಿರೋಟಿ ರವೆ ೧ ಕಪ್, ಸಕ್ಕರೆ ಹುಡಿ - ೧ ಕಪ್, ಏಲಕ್ಕಿ ಹುಡಿ ಕಾಲು ಚಮಚ, ಜಾಯಿಕಾಯಿ ಹುಡಿ ಕಾಲು ಚಮಚ, ಕರಿಯಲು ಎಣ್ಣೆ
ತಯಾರಿಸುವ ವಿಧಾನ
ತೆಂಗಿನ ತುರಿಗೆ ಎಣ್ಣೆಯೊಂದನ್ನು ಬಿಟ್ಟು ಉಳಿದೆಲ್ಲಾ ಸಾಮಾನುಗಳನ್ನು ಸೇರಿಸಿ. ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲಸಿಡಿ. ಕಲಸಿದ ಮಿಶ್ರಣವನ್ನು ೨೦ ನಿಮಿಷಗಳವರೆಗೆ ನೆನೆಸಿ. ಕಲಸಿದ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಬೇಕಾದ ಗಾತ್ರದಲ್ಲಿ ವಡೆ ತಟ್ಟಿ ಕಾದ ಎಣ್ಣೆಯಲ್ಲಿ ಕರಿದರೆ ಸವಿಯಾದ ತೆಂಗಿನಕಾಯಿ ವಡೆ ತಯಾರು.