ತೆರೆ ಮೇಲೆ ಜಗ್ಗೇಶ್ ಪ್ರೇಮ ಪರಿಮಳಾ !

ತೆರೆ ಮೇಲೆ ಜಗ್ಗೇಶ್ ಪ್ರೇಮ ಪರಿಮಳಾ !

ಒಂದು ಪರಿಶುದ್ಧ ಪ್ರೇಮ ಕಥೆ. ನಿಜ ಜೀವನದ ಪ್ರೇಮ ಪಯಣ. ಪ್ರೀತಿಸಿದಾಗ ಹುಡುಗಿಗೆ 15. ಹುಡುಗನಿಗೆ 19 ವರ್ಷ. ಎದೆಯಲ್ಲಿ  ಅರಳಿದ ಪ್ರೀತಿ ಅಗಾಧ. ಇಟ್ಟ ಹೆಚ್ಜೆ ಮುಂದಿಡದ ದೃಢ ಹೃದಯ. ಪ್ರೀತಿಸಿ ಮದುವೆ ಆದ ನಂತರ ಒಂದೂವರೆ ವರ್ಷ ದೂರ..ದೂರ. ಒಂದೇ ಒಂದು ನೋಟ ಇಲ್ಲ. ಸಂಪರ್ಕ ಇಲ್ಲವೇ ಇಲ್ಲ. ಸಂಪರ್ಕ ಸಿಕ್ಕಾಗ ಆಗಿದ್ದು ಒಂದೆ. ಕೋರ್ಟ್ ಮೆಟ್ಟಿಲೇರೊ ಕಷ್ಟ. ಚಿಕ್ಕ ಪ್ರೇಮಿಗಳ ಚೊಕ್ಕ ಒಲವಿಗೆ ನ್ಯಾಯಾಧೀಶರೇ ಮರುಕ ಪಟ್ಟರು. ಮಾನವೀಯತೆ ಆಧರಿಸಿ ಆ ಜೋಡಿಯನ್ನ ಒಂದು ಮಾಡಿದರು. ಆ ಲವ್ ಸ್ಟೋರಿ ಈಗ ಸಿನಿಮಾ ಆಗುತ್ತಿದೆ.
----

ನವರಸಗಳ ನಾಯಕ ಆತ. ನಗಿಸಿದರೆ ಸ್ವರ್ಗವೇ ಹತ್ತಿರ. ಬಾಳಿನಲ್ಲಿ ಬಂದ ಕಷ್ಟ ಅಷ್ಟಿಷ್ಟಲ್ಲ. 19 ನೇ ವಯಸ್ಸಿಗೆ ಪ್ರೀತಿ ಅರಳಿದೆ. ಪ್ರೀತಿಸಿದ ಹುಡುಗಿಯದರೂ ಯಾರು..? 15 ರ ಹರೆಯದ ಹುಡುಗಿ. ಹೆಸರು ಪರಿಮಳಾ. ಕನ್ನಡ ಬಾರದ ಚೆಲುವೆ. ಹುಡುಗ ಕನ್ನಡಿಗ. ನಗಿಸೋದು ತಿಳಿದಿದೆ. ಬಣ್ಣದ ಗೀಳು. ಅದು ಯಾರು ಅಂತ ಗೊತ್ತಾಗಿರ ಬೇಕ್ಕ ಲ್ಲ. ಹೌದು..! ನಾವು ಹೇಳ್ತಿರೋ ಪ್ರೇಮ ಕಥೆಯ, ಆ ಕಥಾನಾಯಕ ಬೇರೆ ಯಾರೂ ಅಲ್ಲ. ಅದು ನವರಸ ನಾಯಕ ಜಗ್ಗೇಶ್. ಆ ಹುಡುಗಿ ಜಗ್ಗೇಶ್ ಪತ್ನಿ ಪರಿಮಳಾ ಅವರೇ.
ಒಂದು ಇಡೀ ಚಿತ್ರಕ್ಕೆ ಆಗಬಲ್ಲ ಕಥೆ ಇವರದ್ದು. ಪ್ರೀತಿಸಿ ಮದುವೆ ಆಗಿ. ಮದುವೆ ಆದರೂ ಪತ್ನಿಯನ್ನ ಕೋರ್ಟಲ್ಲಿಯೇ ಪಡೆದ ದುರಂತ.ಹಾಗೆ ಪಡೆದ ಈ ದಾಂಪತ್ಯಕ್ಕೆ ಈಗ ಭರ್ತಿ 32 ವರ್ಷ. ಮಾರ್ಚ್-22 -1984 ರಲ್ಲಿ  ಸಳರವಾಗಿ ಮದುವೆ ಆಗಿದ್ದರು. ತಮ್ಮ ಕಥೆ ಸಿನಿಮಾ ರೂಪದಲ್ಲಿಯೇ ಇದೆ ಅಂತ ಸುಮ್ಮನಿದ್ದರು ಜಗ್ಗೇಶ್ ಮತ್ತು ಪರಿಮಳಾ.

ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ ಜಗ್ಗೇಶ್ !
ಜಗ್ಗೇಶ್ ತಮ್ಮ  ಜೀವನದ ಕಥೆಯನ್ನ  ಮತ್ತೆ ಹೆಣೆಯುತ್ತಿದ್ದಾರೆ. ಅದು ಸಿನಿಮಾಗೋಸ್ಕರ. ತಮ್ಮ ಕಥೆಯನ್ನ  ಚಿತ್ರ ಮಾಡೋಕೆ ಮುಂದಾಗಿದ್ದಾರೆ. ತಾವು ಅನುಭವಿಸಿದ ನೋವು. ಒಲವಿನ ಪರಿಶುದ್ಧತೆ.ಎಲ್ಲವನ್ನೂ ಮತ್ತೆ ಮತ್ತೆ ಮೆಲುಕು ಹಾಕುತ್ತಿದ್ದಾರೆ. ಅದನ್ನ ಸಿನಿಮಾದ ಚೌಕಟ್ಟಿಗೆ ತರುವಲ್ಲಿ ಈಗ ಬ್ಯುಜಿಯಾಗಿದ್ದಾರೆ. ಶ್ರೀಘ್ರದಲ್ಲಿಯೇ ಸಿನಿಮಾ ಸೆಟ್ಟೇರುತ್ತಿದೆ.

ನವರಸನಾಯಕನ ಕಥೆಗೆ ಯಾರು ಡೈರೆಕ್ಟರ್
ಜಗ್ಗೇಶ್ ಅವರ ಪ್ರೇಮ ಕಥೆಯನ್ನ ಬೇರೆಯವರು ಡೈರೆಕ್ಟ್ ಮಾಡುತ್ತಿಲ್ಲ. ಸ್ವತ: ಜಗ್ಗೇಶ್ ತಮ್ಮ ಕಥೆಯನ್ನ ನಿರ್ದೇಶನ ಮಾಡುತ್ತಿದ್ದಾರೆ. ಪತ್ನಿ ಪರಿಮಳಾ ಜಗ್ಗೇಶ್ ಚಿತ್ರ ನಿರ್ಮಾಣ ಮಾಡಲಿದ್ದಾರೆ. ತಮ್ಮ ನೈಜ ಕಥೆ ಬೆಳ್ಳಿ ತೆರೆಗೆ ತುಂಬಾ ಚೆನ್ನಾಗಿ ಬರಬೇಕೆಂದು ಸಾಕಷ್ಟು ಕಾಳಜಿ ವಹಿಸುತ್ತಿದ್ದಾರೆ. ಈ ಆದರ್ಶ ದಂಪತಿ.

ಚಿತ್ರದ ನಾಯಕ ಯಾರೂ ? ನಾಯಕಿ ಮತ್ಯಾರು ?
ಚಿತ್ರದ ಪಾತ್ರಗಳು ನೈಜವಾಗಿಯೆ ಇರಬೇಕು. ತಮ್ಮ ನೈಜ ಪಾತ್ರಕ್ಕೆ ಸೂಕ್ತ ನಾಯಕ ಸಿಗಬೇಕು. ಪಾತ್ರವನ್ನ ಹಾಗಾಗಿಯೇ ಜೀವಿಸಬೇಕು. ಹಾಗೊಂದು ಅಗಾಧ ನಂಬಿಕೆ ಮೇಲೆ ಜಗ್ಗೇಶ್ ತಮ್ಮ ಚಿತ್ರಕ್ಕೆ ನಾಯಕನನ್ನ ಆಯ್ಕೆ ಮಾಡಿದ್ದಾರೆ. ಅದು ಯಾರೂ ಅನ್ನೋದು ಈಗ ಸಸ್ಪೆನ್ಸ್ ಆಗಿ ಉಳಿದಿಲ್ಲ. ಸುವರ್ಣ ನ್ಯೂಸ್ ನ exclusive ಸಂದರ್ಶನದಲ್ಲಿ ಜಗ್ಗೇಶ್ ತಮ್ಮ ನಾಯಕನ ಹೆಸರು ಹೇಳಿದ್ದಾರೆ. ಅದು ಯಾರೂ ಅಂತ ಕುತೂಹಲವೇ. ಹೇಳ್ತಿವೆ. ಯತಿರಾಜ್ ಅಂತ. ಈ ಯುವ ನಾಯಕನ ತಂದೆ ಹೆಸರು ಹೇಳಿದಾಗ ನಿಮಗೆ ಅದ್ಯಾರು ಅಂತ ತಿಳಿಯುತ್ತದೆ. ಅದು ಮತ್ಯಾರು ಅಲ್ಲ. ಜಗ್ಗೇಶ್. ಜಗ್ಗೇಶ್ ಅವರ ಕಿರು ಪುತ್ರ ಯತಿರಾಜ್ ಚಿತ್ರದ ನಾಯಕ. ನಾಯಕಿಯ ಆಯ್ಕೆ ಇನ್ನೂ ನಡೀತಿದೆ. ಪರಿಮಳಾ ಅವರ ಪಾತ್ರವನ್ನ  ಜೀವಿಸಬಲ್ಲ . ಬಬ್ಲಿ ಮತ್ತು ರೌಡಿ ಥರದ ಪಾತ್ರಧಾರಿಯ, ಹುಡುಕಾಟದಲ್ಲಿದ್ದಾರೆ ಪರಿಮಳಾ ಜಗ್ಗೇಶ್.

ಆಗಸ್ಟ್ ಹೊತ್ತಿಗೆ ಸ್ಕ್ರಿಪ್ಟ್ ಕಂಪ್ಲೀಟ್ ಮಾಡೋ ಪ್ಲಾನ್​
ಜಗ್ಗೇಶ್ ಈಗ ಸ್ಕ್ರಿಪ್ಟ್ ಮಾಡುತ್ತಿದ್ದಾರೆ.  ಆಗಸ್ಟ್ ಹೊತ್ತಿಗೆ ಇಡೀ ಸ್ಕ್ರಿಪ್ಟ್ ಕಂಪ್ಲೀಟ್ ಮಾಡೋ ಯೋಚನೆ ಇದೆ. ಆದರೆ, ಸದ್ಯ ಜಗ್ಗೇಶ್ ಅವರು ಮೈಸೂರಲ್ಲಿ ಒಂದು ಚೌಟ್ರಿ ಕಟ್ಟುತ್ತಿದ್ದಾರೆ. ಅದಕ್ಕೆ ‘ಮದುವೆ ಆಲಯ’ ಅಂತ ಹೆಸರೂ ಇದೆ. ಅದರ ಕೆಲಸ ಪೂರ್ಣಗೊಂಡ ನಂತರವೇ ಸಿನಿಮಾ ಕೆಲಸಕ್ಕೆ ಮತ್ತಷ್ಟು ಇನ್ವಾಲ್ ಆಗಲಿದ್ದಾರೆ. ತಮ್ಮ ಕಥೆಯನ್ನ ಅಷ್ಟೆ ಅಚ್ಚು ಕಟ್ಟಾಗಿಯೇ ತೆರೆಗೆ ತರೋ ಅತಿ ದೊಡ್ಡ ಮಹದಾಸೆಯನ್ನ ಹೊಂದಿದ್ದಾರೆ ಜಗ್ಗೇಶ್.

70-80 ರ ಫೀಲ್​ ನ ಸಿನಿಮಾ
ಜಗ್ಗೇಶ್ ಅವರ ಪ್ರೇಮ ಕಥೆ  70-80 ರಲ್ಲಿಯೇ ನಡೆದದ್ದು. ಅದನ್ನ  ಯಥಾವತ್ತು ಕಟ್ಟಿಕೊಡಲು, ಸೆಟ್ ಹಾಕೋ ಪ್ಲಾನ್ ಇದೆ. ಆ ದಿನಗಳಲ್ಲಿ ತಾವಿದ್ದ ಗೆಟಪ್​ನ ರೂಪವನ್ನ ತರೋದು ಜಗ್ಗೇಶ್ ಕನಸು. ಪುತ್ರ ಯತಿರಾಜ್​ ಆ ತಯಾರಿ ಮಾಡುತ್ತಿದ್ದಾರೆ. ಒಂದು ಪರಶುದ್ಧ ಪ್ರೇಮ ಕಥೆಯನ್ನ ಜಗ್ಗೇಶ್ ಕನ್ನಡಿಗರಿಗೆ ಕೊಡಲಿದ್ದಾರೆ. ಜಗ್ಗೇಶ್ ಅವರ ನೈಜ ಪ್ರೇಮ ಕಥೆ ಸಿನಿಮಾ ಆಗುತ್ತಿದೆ ಎಂಬ ಸುದ್ದಿನೇ ಥ್ರಿಲ್ ಆಗುತ್ತಿದೆ. ಇಡಿ ಕಥೆ ಬೆಳ್ಳಿ ತೆರೆಗೆ ಬಂದ್ರೆ ಹೇಗಿರಬೇಡ. ವೇಟ್ ಮಾಡಿ. ಜಗ್ಗೇಶ್ ಅವರ ಲವ್ ಸ್ಟೋರಿ ನಿಜಕ್ಕೂ ಸೂಪರ್. ನಿಮ್ಮ ವಿಶ್ವಾಸ ಕಂಡಿತಾ ಸುಳ್ಳಾಗೋದಿಲ್ಲ.

-ರೇವನ್ ಪಿ.ಜೇವೂರ್​