ತೊಂಡೆಕಾಯಿ ಗೊಜ್ಜು
ಬೇಕಿರುವ ಸಾಮಗ್ರಿ
ಕತ್ತರಿಸಿ ಬೇಯಿಸಿದ ತೊಂಡೆಕಾಯಿ ಹೋಳುಗಳು - ೩ ಕಪ್, ಒಣಮೆಣಸಿನ ಕಾಯಿ- ೫ ರಿಂದ ೬, ಕಡಲೆ ಬೇಳೆ - ೨ ಚಮಚ, ಚೆಕ್ಕೆ - ೨, ಎಳ್ಳು - ೨ ಚಮಚ, ಕೊತ್ತಂಬರಿ ಬೀಜ - ೧ ಚಮಚ, ಹುಣಸೆ ರಸ - ೧/೪ ಕಪ್, ಉಪ್ಪು ರುಚಿಗೆ ತಕ್ಕಷ್ಟು, ಬೆಲ್ಲದ ಹುಡಿ - ೩ ಚಮಚ, ಎಣ್ಣೆ - ೪ ಚಮಚ, ಸಾಸಿವೆ - ೧ ಚಮಚ, ಇಂಗು ೧/೪ ಚಮಚ, ತೆಂಗಿನತುರಿ - ೪ ಚಮಚ, ಹೆಚ್ಚಿದ ಕೊತ್ತಂಬರಿ ಸೊಪ್ಪು - ೪ ಚಮಚ.
ತಯಾರಿಸುವ ವಿಧಾನ
ಒಣ ಮೆಣಸಿನಕಾಯಿ, ಕಡಲೆಬೇಳೆ, ಚೆಕ್ಕೆ, ಎಳ್ಳು, ಕೊತ್ತಂಬರಿ ಬೀಜಗಳನ್ನು ಎಣ್ಣೆಯಲ್ಲಿ ಹುರಿದು ಹುಡಿ ಮಾಡಿ ಮಸಾಲೆ ತಯಾರಿಸಿ. ಕಾದ ಎಣ್ಣೆಗೆ ಸಾಸಿವೆ, ಇಂಗು ಒಗ್ಗರಣೆ ಕೊಡಿ. ಒಗ್ಗರಣೆಗೆ ಹುಣಸೆ ರಸ, ಬೆಲ್ಲ, ಉಪ್ಪು ಹಾಕಿ ಕುದಿಸಿ. ಈ ಮಿಶ್ರಣಕ್ಕೆ ತೊಂಡೆಕಾಯಿ ಹೋಳುಗಳು, ಮಸಾಲೆ ಹುಡಿ, ಸೇರಿಸಿ ಚೆನ್ನಾಗಿ ಕೈಯಾಡಿಸಿ. ಒಲೆಯಿಂದ ಕೆಳಗಿರಿಸಿ. ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.