ತೊಂಡೆಕಾಯಿ ತಿನ್ನುವುದರಿಂದ ಆಗುವ ಲಾಭವೇನು?

ತೊಂಡೆಕಾಯಿ ತಿನ್ನುವುದರಿಂದ ಆಗುವ ಲಾಭವೇನು?

ತೊಂಡೆಕಾಯಿ ಹೆಚ್ಚು ಫೈಬರ್ ಅಂಶವನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಎ, ಬಿ1, ಸಿ ಮತ್ತು ಕ್ಯಾಲ್ಸಿಯಂ ಇರುತ್ತದೆ. ಇದರಲ್ಲಿ ಕ್ಯಾಲೊರಿಗಳು ಕಡಿಮೆಯಿದ್ದು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರಿಸಲು ಸಹಕಾರಿಯಾಗಿದೆ. ಕಿಡ್ನಿಸ್ಟೋನ್ ಸಮಸ್ಯೆ ಎದುರಿಸುತ್ತಿರುವವರಿಗೆ ತೊಂಡೆಕಾಯಿ ರಾಮಬಾಣವಾಗಿದೆ. ವಾರಕ್ಕೊಮ್ಮೆಯಾದರೂ ತೊಂಡೆಕಾಯಿ ತಿಂದರೆ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.

1. ತೊಂಡೆಕಾಯಿಯನ್ನು ಹೆಚ್ಚಾಗಿ ಸೇವಿಸುವುದರಿಂದ ಕಫದ ಸಮಸ್ಯೆ ದೂರವಾಗುತ್ತದೆ.

2.ತೊಂಡೆಕಾಯಿಯಲ್ಲಿರುವ ಬೀಜಗಳು ಮಲಬದ್ಧತೆಯನ್ನು ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಮಲ ವಿಸರ್ಜನೆಗೆ ಸಂಬಂಧಿಸಿದ ಸಮಸ್ಯೆಯನ್ನು ಕೂಡ ಗುಣಪಡಿಸುತ್ತದೆ.

3. ದೇಹದ ಯಾವುದೇ ಭಾಗದಲ್ಲಿ ಹುಳು ಕಚ್ಚಿ ಗುಳ್ಳೆಗಿದ್ದರೆ ತೊಂಡೆಕಾಯಿಯ ಎಲೆಗಳನ್ನು ಜಜ್ಜಿ ಹಚ್ಚಿದರೆ ನೋವು ನಿವಾರಣೆಯಾಗುತ್ತದೆ.

4. ವಿಟಮಿನ್ ‘ಸಿ’, ವಿಟಮಿನ್ ‘ಬಿ2’, ವಿಟಮಿನ್ ‘ಬಿ 3’ ಹೇರಳವಾಗಿರುವ ತೊಂಡೆಕಾಯಿ ನಮ್ಮ ರಕ್ತ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

5.ತೊಂಡೆಕಾಯಿ ಎಲೆ ರಸವನ್ನು ನೀರಲ್ಲಿ ಬೆರೆಸಿ ದಿನಕ್ಕೆ 3 ಬಾರಿ ಸೇವಿಸಿದರೆ ದೇಹದ ಉಷ್ಣತೆ ಕಡಿಮೆಯಾಗುತ್ತದೆ.

6. 2 ಚಮಚ ತೊಂಡೆಕಾಯಿ ಎಲೆಯ ರಸವನ್ನು ಅರ್ಧ ಬಟ್ಟಲು ಮೊಸರಿನ ಜತೆ ದಿನಕ್ಕೆ 2 ಬಾರಿ ಸೇವಿಸಿದರೆ ಭೇದಿ ನಿಲ್ಲುತ್ತದೆ. 

7.ತೊಂಡೆಕಾಯಿಯ ಹಸಿ ಹಣ್ಣನ್ನು ದಿನಕ್ಕೆ ಎರಡರಂತೆ ಸೇವಿಸಿದರೆ, ಒಣಗಿರುವ ಚರ್ಮ ಮೃದುವಾಗುತ್ತದೆ ಹಾಗೂ ಮಧುಮೇಹ ನಿಯಂತ್ರಣದಲ್ಲಿರುತ್ತದೆ. 

8. ದೇಹದಲ್ಲಿ ಗಂದೆಗಳು ಮತ್ತು ಕಜ್ಜಿ ಆಗಿದ್ದರೆ ತೊಂಡೆಕಾಯಿ ಎಲೆಗಳನ್ನು ಜಜ್ಜಿ ಪೇಸ್ಟ್‌ ಮಾಡಿ ಆ ಜಾಗಕ್ಕೆ ಲೇಪ ಮಾಡಿದರೆ ಗಂದೆಗಳು ಶಮನವಾಗುತ್ತವೆ.  

9.ಋತುಸ್ರಾವದ ಸಂದರ್ಭದಲ್ಲಿ ತೊಂಡೆಕಾಯಿಯನ್ನು ಸೇವಿಸುವುದರಿಂದ ಮುಟ್ಟಿನ ನೋವು ಕಡಿಮೆಯಾಗುತ್ತದೆ.

10.ತೊಂಡೆಕಾಯಿಯಲ್ಲಿ ಕಡಿಮೆ ಕ್ಯಾಲೊರಿಗಳಿರುತ್ತದೆ ಮತ್ತು ಹೆಚ್ಚು ಹೊತ್ತು ನಿಮ್ಮ ಹೊಟ್ಟೆಯನ್ನು ತುಂಬಿದಂತಿರಿಸುತ್ತದೆ. ಇದರಿಂದ ನೀವು ಸುಲಭವಾಗಿ ತೂಕ ಕಳೆದುಕೊಳ್ಳಬಹುದು.

11. ಒಂದು ಲೋಟ ತೊಂಡೆಕಾಯಿ ಎಲೆಯ ರಸವನ್ನು ಒಂದು ಲೋಟ ಎಳ್ಳೆಣ್ಣೆ ಜತೆ ಕುದಿಸಿ ತಯಾರಿಸಿದ ಎಣ್ಣೆಯನ್ನು ಚರ್ಮದ ಕಾಯಿಲೆಗೆ ಉಪಯೋಗಿಸಬಹುದು.

12.ಪೊಟ್ಯಾಸಿಯಂ ಹೆಚ್ಚಿರುವ ತೊಂಡೆಕಾಯಿ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

13.ಕಣ್ಣುಗಳು ಉರಿಯುತ್ತಿದ್ದರೆ ಒಂದು ಲೋಟ ನೀರಿಗೆ ಒಂದು ಲೋಟ ತೊಂಡೆಕಾಯಿ ಎಲೆಯ ರಸ ಸೇರಿಸಿ ಒಂದು ಲೋಟ ರಸ ಆಗುವವರೆಗೆ ಚೆನ್ನಾಗಿ ಕುದಿಸಿ. ಆ ರಸವನ್ನು ದಿನಕ್ಕೆ 3 ಬಾರಿ ಸೇವಿಸಿದರೆ ಕಣ್ಣುರಿ ನಿವಾರಣೆಯಾಗುತ್ತದೆ.

14.ಒಂದು ಲೋಟ ತೊಂಡೆಕಾಯಿ ಎಲೆಯ ರಸವನ್ನು ಒಂದು ಲೋಟ ಎಳ್ಳೆಣ್ಣೆ ಜತೆ ಕುದಿಸಿ ಆ ಎಣ್ಣೆಯನ್ನು ಚರ್ಮದ ಮೇಲೆ ಹಚ್ಚಿದರೆ ಸೋರಿಯಾಸಿಸ್‌ನಂತಹ ಚರ್ಮದ ಸಮಸ್ಯೆ ಕಡಿಮೆಯಾಗುತ್ತದೆ.

15. ತೊಂಡೆಕಾಯಿ ಕಫದ ಸಮಸ್ಯೆಯನ್ನು ನಿವಾರಿಸುತ್ತದೆ. ಅಲ್ಲದೆ ಇದು ರಕ್ತವನ್ನು ಶುದ್ಧೀಕರಿಸುತ್ತದೆ

16.ಸಂಧಿಗಳಲ್ಲಿ ಊತ ಇದ್ದರೆ, ತೊಂಡೆ ಗಿಡದ ಎಲೆಗಳನ್ನು ಬೇವಿನ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಪೇಸ್ಟ್‌ ತಯಾರಿಸಿ, ಊತ ಇರುವ ಜಾಗದಲ್ಲಿ ಲೇಪನ ಮಾಡಿದರೆ ಊತ ಕಡಿಮೆಯಾಗುತ್ತದೆ.

17.ಎಳೆಯ ತೊಂಡೆ ಕಾಯಿಯನ್ನು ಬಾಯಿಗೆ ಹಾಕಿ ಚೆನ್ನಾಗಿ ಜಗಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.

18.ತೊಂಡೆಕಾಯಿಯಲ್ಲಿ ವಿಟಮಿನ್ ‘ಸಿ’ ಮತ್ತು ಬೀಟಾ ಕೆರೋಟಿನ್ ಹೆಚ್ಚಾಗುವುದರಿಂದ ಕ್ಯಾನ್ಸರ್ ಅನ್ನು ತಡೆಗಟ್ಟುವ ಸಾಮರ್ಥ್ಯವನ್ನು ಇದು ಹೊಂದಿದೆ.

19.ದೇಹದ ತುರಿಕೆಯ ನಿವಾರಣೆ : ದೇಹದಲ್ಲಿ ಹುಳು ಕಚ್ಚಿ ಗಾಯ ಅಥವಾ ತುರಿಕೆಯಾಗಿದ್ದರೆ, ತೊಂಡೆಕಾಯಿಯ ಎಲೆಗಳನ್ನು ಜಜ್ಜಿ ಹಚ್ಚಿದರೆ ಗಾಯ, ಗಂದೆ, ತುರಿಕೆ ನಿವಾರಣೆ ಆಗುತ್ತದೆ.

20.ಚರ್ಮ ಮೃದುವಾಗಲು : ತೊಂಡೆಕಾಯಿಯ ಹಸಿ ಹಣ್ಣನ್ನು ದಿನಕ್ಕೆ 2 ರಂತೆ ಸೇವಿಸಿದರೆ ಒಣಗಿರುವ ಚರ್ಮ ಮೃದುವಾಗುತ್ತದೆ.

21.ಸೋರಿಯಾಸಿಸ್ ನಂತಹ ಚರ್ಮ ರೋಗ ಇದ್ದಲ್ಲಿ ಒಂದು ಲೋಟ ತೊಂಡೆಕಾಯಿಯ ಎಲೆಯ ರಸವನ್ನು ಒಂದು ಲೋಟ ಎಳ್ಳೆಣ್ಣೆ ಜತೆ ಕುದಿಸಿ ಆ ಎಣ್ಣೆಯನ್ನು ಚರ್ಮದ ಮೇಲೆ ಹಚ್ಚಿದರೆ ಚರ್ಮದ ಸಮಸ್ಯೆ ಕಡಿಮೆಯಾಗುತ್ತದೆ.

22.ದೇಹದ ಉಷ್ಣತೆ ಮತ್ತು ಕಣ್ಣು ಉರಿ: ತೊಂಡೆಕಾಯಿಯ ಎಲೆಯ 5 ಚಮಚ ರಸಕ್ಕೆ 1 ಲೋಟ ನೀರು ಹಾಕಿ ಕುದಿಸಿ ನಂತರ ಸೇವಿಸಿದರೆ ದೇಹದ ಉಷ್ಣತೆ ಮತ್ತು ಕಣ್ಣುರಿ ಕಡಿಮೆಯಾಗುತ್ತದೆ.

23.ಬಾಯಿ ಹುಣ್ಣು : ತೊಂಡೆ ಹಣ್ಣನ್ನು ಬಾಯಿಗೆ ಹಾಕಿ ಚೆನ್ನಾಗಿ ಜಗಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.

24.ಅತಿಯಾದ ಭೇದಿ : ಅತಿಯಾಗಿ ಭೇದಿಯಾಗುತ್ತಿದ್ದರೆ 2 ಚಮಚ ತೊಂಡೆಕಾಯಿ ಎಲೆಯ ರಸವನ್ನು ಅರ್ಧ ಬಟ್ಟಲು ಮೊಸರಿನ ಜತೆ ದಿನಕ್ಕೆ 2 ಬಾರಿ ಸೇವಿಸಿದರೆ ಭೇದಿ ನಿಲ್ಲುತ್ತದೆ.

25.ತಲೆಬುರುಡೆಯ ಬೊಕ್ಕೆ ನಿವಾರಣೆಗೆ: ತೊಂಡೆಕಾಯಿ ಎಲೆಗಳಿಂದ ನೀರು ಹಾಕದೆ ರಸ ತೆಗೆಯಿರಿ. ಕೆಲವು ಸಮುದ್ರ ಚಿಪ್ಪುಗಳನ್ನು(ಹಸಿರು ಬಣ್ಣದ್ದು) ಮೂರು ದಿನಗಳ ಕಾಲ ಇದರಲ್ಲಿ ನೆನೆಸಿಡಿ. ನಾಲ್ಕನೇ ದಿನ ಇದನ್ನು ಹೊರತೆಗೆದು ಇದ್ದಿಲಿನಲ್ಲಿ ಸುಟ್ಟುಬಿಡಿ. ಇದರ ಬೂದಿ ತೆಗೆದುಕೊಂಡು ಅದನ್ನು ಹಸುವಿನ ಬೆಣ್ಣೆಯ ಜತೆಗೆ ಮಿಶ್ರಣ ಮಾಡಿ ಪೇಸ್ಟ್ ಮಾಡಿ. ಈ ಪೇಸ್ಟ್ ನ್ನು ತಲೆಬುರುಡೆಯಲ್ಲಿರುವ ಬೊಕ್ಕೆಗಳಿಗೆ ಹಚ್ಚಿಕೊಳ್ಳಿ. ಇದು ಸರಳ ಆಯುರ್ವೇದ ಔಷಧಿ.

26.ಮಧುಮೇಹಕ್ಕೆ: ತೊಂಡೆಕಾಯಿ ಎಲೆಗಳ ರಸ ತೆಗೆದುಕೊಂಡು 20-30 ಮಿ.ಲೀ.ನಷ್ಟು ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಕುಡಿಯಿರಿ. ಹೀಗೆ ಮಾಡಿದರೆ ಮೂರು ತಿಂಗಳಲ್ಲಿ ಸಕ್ಕರೆ ಮಟ್ಟವು ತಗ್ಗುವುದು. ಈ ಎಲೆಗಳಲ್ಲಿರುವ ಅಂಶವು ಕಿಣ್ವ ಗ್ಲೂಕೋಸ್ -6-ಫಾಸ್ಫಟೇಸ್ ಅನ್ನು ಪ್ರತಿಬಂಧಿಸುತ್ತವೆ. ಗ್ಲೂಕೋಸ್ -6-ಫಾಸ್ಫಟೇಸ್ ಯಕೃತ್ ನ ಪ್ರಮುಖ ಕಿಣ್ವವಾಗಿದ್ದು, ಇದು ಸಕ್ಕರೆಯ ಚಯಾಪಚಯವನ್ನು ನಿಯಂತ್ರಿಸುವುದು. ಇದರಿಂದಾಗಿ ಮಧುಮೇಹಿಗಳಿಗೆ ಇದನ್ನು ಸಲಹೆ ಮಾಡಲಾಗಿದೆ.

27.ಕಾಮಾಲೆ ರೋಗ ನಿವಾರಣೆ: 30 ಮಿ.ಲೀ. ತಾಜಾ ತೊಂಡೆಕಾಯಿ ಎಲೆಗಳ ರಸ, 50 ಗ್ರಾಂ ಎಮ್ಮೆಯ ಹಾಲಿನ ಮೊಸರು(ಎಮ್ಮೆಗೆ ಗಂಡು ಕರುವಿರಬೇಕು). ಇದನ್ನು ಮಿಶ್ರಣ ಮಾಡಿಕೊಂಡು ಒಂದು ವಾರ ಕಾಲ ಸೇವಿಸಿ ಮತ್ತು ಆಹಾರ ಪಥ್ಯ ಮಾಡಿದರೆ ಒಂದು ವಾರದಲ್ಲಿ ಕಾಮಾಲೆ ನಿವಾರಣೆಯಾಗುವುದು.

28.ಪಾದಗಳು ಮತ್ತು ಅಂಗೈಯ ಉರಿಗೆ: ತೊಂಡೆಕಾಯಿ ಎಲೆಗಳ ರಸ, ಕಪ್ಪುಮುಳ್ಳಿನ ಸೇಬಿನ ಎಲೆಗಳ ರಸ, ದೊಡ್ಡ ಬೀನ್ಸ್ ನ ಎಲೆಗಳ ರಸವನ್ನು ಸಮಾನ ಪ್ರಮಾಣದಲ್ಲಿ ಬೆರೆಸಿಕೊಂಡು ಅದನ್ನು ತೆಗೆದಿಡಬೇಕು. ಇದರ ಬಳಿಕ ಪ್ರತಿನಿತ್ಯ ಪಾದಗಳು ಮತ್ತು ಅಂಗೈಗೆ ಇದನ್ನು 10-15 ನಿಮಿಷ ಕಾಲ ಮಸಾಜ್ ಮಾಡಿದರೆ ಆಗ ಅತಿಯಾದ ಉಷ್ಣತೆ, ಉರಿ ನಾಲ್ಕನೇ ದಿನದಿಂದಲೇ ಕಡಿಮೆಯಾಗುವುದು.

29.ಋತುಚಕ್ರದ ನೋವಿಗೆ: ತೊಂಡೆಕಾಯಿ ಎಲೆಗಳ ರಸ, ಕಪ್ಪು ಸಾಸಿವೆ ಹುಡಿ(3-5ಗ್ರಾಂ), ಬೆಳ್ಳುಳ್ಳಿ ರಸ(1 ಚಮಚ) ಬೆರೆಸಿಕೊಂಡು ಸಣ್ಣ ಸಾಸಿವೆ ಗುಳಿಗೆ ತಯಾರಿಸಿ. ಪ್ರತಿನಿತ್ಯ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟದ ಬಳಿಕ 2-3 ಗುಳಿಗೆಯನ್ನು ನೀರಿನೊಂದಿಗೆ ಸೇವಿಸಿ. ಇದು 2ನೇ ದಿನವೇ ಋತುಚಕ್ರದ ನೋವು ನಿವಾರಿಸುವುದು. 

30.ಯೋನಿ ನೋವು ತಗ್ಗಿಸುವುದು: ತೊಂಡೆಕಾಯಿ ಎಲೆಗಳ ರಸ(50ಮಿ.ಲೀ.), 50 ಗ್ರಾಂ ಎಮ್ಮೆಯ ಹಾಲಿನ ಮೊಸರು(ಎಮ್ಮೆಗೆ ಗಂಡು ಕರುವಿರಬೇಕು) ಮಿಶ್ರಣ ಮಾಡಿಕೊಂಡು ಉಪಾಹಾರ ಮತ್ತು ರಾತ್ರಿ ಊಟಕ್ಕೆ ಮೊದಲು ಇದನ್ನು ಸೇವಿಸಬೇಕು. ಇದರೊಂದಿಗೆ ನೀವು ಖಾರ, ಹುಳಿ ಮತ್ತು ಉಪ್ಪಿನಾಂಶ ಹೆಚ್ಚಿರುವ ಆಹಾರ ಸೇವನೆ ಮೂರು ದಿನಗಳ ಕಾಲ ಬಿಡಬೇಕು ಮತ್ತು ವಿವಿಧ ಕಾರಣಗಳಿಂದ ಬಂದಿರುವ ಯೋನಿ ನೋವು ನಿವಾರಣೆಯಾಗುವುದು. ತೊಂಡೆಕಾಯಿಯನ್ನು ಕುಷ್ಠರೋಗ, ಜ್ವರ, ಅಸ್ತಮಾ, ಗಂಟಲೂತ ಮತ್ತು ಕಾಮಾಲೆ ನಿವಾರಣೆಗೆ ಬಳಸಲಾಗುವುದು. ಬಾಂಗ್ಲಾದೇಶದಲ್ಲಿ ಇದನ್ನು ಸಂಧಿವಾತ ಮತ್ತು ಗಂಟು ನೋವು ನಿವಾರಣೆಗೆ ಬಳಸಲಾಗುತ್ತದೆ. ತೊಂಡೆಕಾಯಿ ಎಲೆಗಳ ಪೇಸ್ಟ್ ನ್ನು ಹಚ್ಚಿಕೊಂಡು ಚರ್ಮದ ತುರಿಗಜ್ಜಿ ನಿವಾರಿಸಬಹುದು. ತೊಂಡೆಕಾಯಿಯು ಬೆಟಾ ಕ್ಯಾರೋಟೀನ್ ನಿಂದ ಸಮೃದ್ಧವಾಗಿದೆ. ಇದು ಋತುಬಂಧದ ಮೊದಲು ಮಹಿಳೆಯರಲ್ಲಿ ಬರುವ ಸ್ತನದ ಕ್ಯಾನ್ಸರ್ ಸಮಸ್ಯೆ ನಿವಾರಿಸುವುದು. ವಯಸ್ಸಾದಾಗ ಕಾಡುವ ಅಕ್ಷಿಪಟಲದ ಅವನತಿ ತಡೆಯುವುದು.

ಸೂಚನೆ: ತೊಂಡೆಕಾಯಿ ಬಹು ಉಪಯೋಗಿಯೇ ಆದರೂ ಬಳಸುವ ಮುನ್ನ ನಿಮ್ಮ ದೇಹ ಪ್ರಕೃತಿಯನ್ನು ಗಮನದಲ್ಲಿಟ್ಟುಕೊಂಡಿರಿ. ತೊಂಡೆಕಾಯಿಯ ಅಲರ್ಜಿ ಇದ್ದಲ್ಲಿ ಇದರ ಬಳಕೆ ಮಾಡಬೇಡಿ. 

(ಸಂಗ್ರಹಿಸಿದ್ದು) 

ಚಿತ್ರ ಕೃಪೆ: ಇಂಟರ್ನೆಟ್ ತಾಣ