ತೊಂಡೆಕಾಯಿ ದೋಸೆ
ಬೇಕಿರುವ ಸಾಮಗ್ರಿ
1 ಕಪ್ ಬೆಳ್ತಿಗೆ ಅಕ್ಕಿ, 2 ಚಮಚ ಉದ್ದಿನಬೇಳೆ, 4-5 ಕಾಳು ಮೆಂತೆ, 10-15 ತೊಂಡೆಕಾಯಿ, ಉಪ್ಪು ರುಚಿಗೆ ತಕ್ಕ ಷ್ಟು , 1 ಚಮಚ ಎಣ್ಣೆ .
ತಯಾರಿಸುವ ವಿಧಾನ
ಬೆಳ್ತಿಗೆ ಅಕ್ಕಿಯನ್ನು ಎರಡು ಗಂಟೆ ನೀರಿನಲ್ಲಿ ನೆನಸಿ. ನಂತರ ಚೆನ್ನಾಗಿ ತೊಳೆದು, 2 ಗಂಟೆ ನೆನೆಸಿದ ಉದ್ದಿನ ಬೇಳೆ, ಮೆಂತೆ ಹಾಗೂ ತೊಂಡೆಕಾಯಿ ಚೂರು, ಉಪ್ಪು ಹಾಕಿ ನಯವಾಗಿ ರುಬ್ಬಿ ಪಾತ್ರದಲ್ಲಿ ಹಾಕಿಡಿ. ಮಾರನೇ ದಿನ ತವಾ ಒಲೆಯ ಮೇಲಿಟ್ಟು ಎಣ್ಣೆ ಪಸೆ ಮಾಡಿ ನಂತರ ರುಬ್ಬಿದ ಹಿಟ್ಟು ಹಾಕಿ ದೋಸೆ ಹೊಯ್ಯಿರಿ. ನಂತರ ಕವುಚಿ ಹಾಕಿ ಎರಡು ಬದಿ ಬೇಯಿಸಿದರೆ ತೆಳ್ಳಗಿನ ಗರಿಗರಿಯಾದ ದೋಸೆ ತಿನ್ನಲು ಸಿದ್ಧ. ಹಣ್ಣಾದ ತೊಂಡೆಕಾಯಿಯಿಂದಲೂ ಇದೇ ರೀತಿ ದೋಸೆ ಮಾಡಬಹುದು. ಕಾಯಿಮೆಣಸಿನ ಚಟ್ನಿಯೊಂದಿಗೆ ಬಿಸಿ ದೋಸೆ ಸವಿಯಲು ರುಚಿ ಬಹಳ.