ತೊಂಡೆಕಾಯಿ ಸಂಡಿಗೆ
ಬೇಕಿರುವ ಸಾಮಗ್ರಿ
೨೦ ಬೆಳೆದ ತೊಂಡೆಕಾಯಿ( ಹಣ್ಣಾಗಿರಬಾರದು), ಹುಡಿಉಪ್ಪು ೨ ಚಮಚ, ಮೆಣಸಿನ ಪುಡಿ ೧ ಚಮಚ, ದಪ್ಪ ಮಜ್ಜಿಗೆ ೧/೨ ಸೌಟು.
ತಯಾರಿಸುವ ವಿಧಾನ
ತೊಂಡೆಕಾಯಿಯನ್ನು ತೆಳ್ಳಗೆ ನಾಲ್ಕು ತುಂಡು ಕತ್ತರಿಸಬೇಕು. ರಾತ್ರಿ ಕತ್ತರಿಸಿ ಮಜ್ಜಿಗೆ, ಉಪ್ಪು, ಮೆಣಸಿನ ಪುಡಿ ಹಾಕಿ ಮಿಶ್ರಣ ಮಾಡಿ ಇಡಬೇಕು. ಬೆಳಿಗ್ಗೆ ತೊಂಡೆಕಾಯಿಯ ಹೋಳುಗಳನ್ನು ತೆಗೆದು (ಸ್ವಲ್ಪ ನೀರು ಎದ್ದಿರುತ್ತದೆ) ಒಣ ಹಾಳೆಯಲ್ಲಿ ಹಾಕಿ ಬಿಸಿಲಿನಲ್ಲಿ ಒಣಗಿಸಬೇಕು. ೬ ಒಳ್ಳೆಯ ಬಿಸಿಲು ಬೇಕಾಗುತ್ತದೆ. ಗರಿ ಗರಿಯಾಗುವಷ್ಟು ಒಣಗಿಸಿ ಗಾಳಿಯಾಡದಂತೆ ಇಟ್ಟರೆ ಬಹುಕಾಲ ಸಂರಕ್ಷಿಸಿ ಉಪಯೋಗಿಸಬಹುದು.
- ಅಶ್ವಿನಿ ಮೂರ್ತಿ ಅಯ್ಯನಕಟ್ಟೆ, ಸುಳ್ಯ