ತೊರೆಯದೆ ಬಾಳೋಣ
ಕವನ
ಮುನಿಸದಿರು ನನ್ನವಳೆ
ಮುನಿಸೇತಕೇಯಿಂದು
ಕನಸಿನೊಲು ನೀನಿರುವೆ
ನನಸಿನೊಲುಯೆಂದು
ಹಸೆಮಣೆಯ ಸನಿಹದಲಿ
ಖುಷಿಯಿಂದ ಕುಳಿತಿರುವೆ
ಹಸಿವಿನೊಲವಲಿ ಬಳಲಿ
ಹಸಿಯ ಬರವಸೆಲಿರುವೆ
ಮರೆಯ ಬೇಡವೇಯಿಂದು
ಹರಷದೊಲವಿನ ಪ್ರೀತಿ
ಕರಪಿಡಿದು ಸಾಗುತಲಿಯಿಂದು
ತೊರೆಯದೆ ಬಾಳೋಣ ಶಾಂತಿ
***
ಒಂದು ಗಝಲ್
ತಟ್ಟಿ ಹಾಕದಿರುವೆ ಗವಿಯ ಒಳಗೆ ಯಾರಿರುವರೊ ತಿಳಿಯೆ
ಮೆಟ್ಟಿ ಬಿಸುಡದಿರುವೆ ನೀರನೆಲ್ಲ ತುಂಬಿರುವರೊ ತಿಳಿಯೆ
ಹೊಟ್ಟೆ ಹಸಿವು ತಾಳದೆಯೇ ಕನಸನಿಂದು ಹೆಣೆಯ ಹೊರಟೆ
ಚಟ್ಟ ಕಟ್ಟಲೆನ್ನ ಗೋರಿಯೆಡೆಗೆ ಸಾಗಿರುವರೊ ತಿಳಿಯೆ
ಕುಟ್ಟಿ ಹಾಕದಿರೈಯೆನ್ನ ಮುಕುತಿಯೆಡೆಗೆ ಹಾಗೆ ಬಿಡಿರೊ
ಬಟ್ಟಿ ತುಂಬಿಸದಿರಲು ಮನುಜ ಲೋಕ ಕಂಡಿರುವರೊ ತಿಳಿಯೆ
ಮುಟ್ಟ ಬಂದಿತೆಂದು ಕೇಡಿರುವುದ ಕಾಣಬಹುದೆ ನೋಡು
ತೊಟ್ಟು ಕಳಚಿಯುದಿರಿ ಹೋಗೆ ದೂರ ಹೋಗಿರುವರೊ ತಿಳಿಯೆ
ಮೆಟ್ಟಲೇರಿ ಬಂದವರೆಡೆ ಸೇರಿ ಹೋದ ನಮ್ಮ ಈಶ
ಕಟ್ಟೆಯೊಡೆದು ಪ್ರೀತಿ ಹೊಸಕಿ ಅಳಿಸಿ ಹಾಕಿರುವರೊ ತಿಳಿಯೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್