ತೌಖ್ತೆ ಚಂಡಮಾರುತಕ್ಕೆ ಬಿದ್ದ ಕೆಲವು ಹನಿಗಳು !

ತೌಖ್ತೆ ಚಂಡಮಾರುತಕ್ಕೆ ಬಿದ್ದ ಕೆಲವು ಹನಿಗಳು !

ಕವನ

*ಬಿರುಗಾಳಿ* 

ನಗರದೆಲ್ಲೆಡೆ

ಬಂದೆರಗಿದೆ

ಕೊರೋನಾದ ಹಾವಳಿ

ಕರಾವಳಿ ಮೇಲೆಯು

ಕಣ್ಣಿಟ್ಟಿದೆಯಂತೆ

ಚಂಡಮಾರುತ ಹಲ್ಲಿ!

*

 *ತೂಫಾನಿ!* 

ಕ್ಷಣದಿಂದ ಕ್ಷಣಕ್ಕೆ

ಏರುತ್ತಿದೆ 

ಅಲೆ ಅಬ್ಬರ!

ಬಿಡದೆ ಸುರಿದ

ಜಡಿ ಮಳೆಗೆ

ನೆಲವಾಗಿದೆ ಗೊಬ್ಬರ!!

*

ಬಲಿ!

ಹಳಿ 

ತಪ್ಪಿದ 

ಹಲ್ಲಿ

ಬೆಂಡಾಯಿತು 

ಹಳ್ಳಿ!!

*

ತೌಕ್ತೆ.! (ತುಳು ಹನಿ)

ಬಜಿ ತೌತೆ ಪಂಡುದ್

ಮಾನ್ಪಡೆ ಬರ್ಸನ್ ಸಿಲ್ಲಿ!

ಪನಿ ಕಡಿಯಂದೆ ಬತ್ತ್ಂಡ

ಲಗಾಡಿ ಪೋವು ಹಳ್ಳಿ!!

*

ನಿರಾಳ

ದಕ್ಷಿಣದಿಂದ

ಉತ್ತರದೆಡೆಗೆ

ಸಾಗುತ್ತಿದೆ ತೌಕ್ತೆ!

ಸಾಗರದಿಂದ

ಚುಕ್ತಾ ಆಗಿದೆ

ಮಾನವ ಕೊಟ್ಟ ತಖ್ತೆ!!

*

-ಜನಾರ್ದನ ದುರ್ಗ

 

ಚಿತ್ರ್