ತ್ಯಾಗ ಕಾಣದು

ತ್ಯಾಗ ಕಾಣದು

ಕವನ

ಕಾಗೆ ಕಟ್ಟಿದ ಗೂಡನರಸುತ

ಹಾರಿ ಬಂದಿತು ಕೋಗಿಲೆ

ಕಾಗೆ ಇರಿಸಿದ ಮೊಟ್ಟೆ ಜೊತೆಯಲಿ

ತನ್ನದಿರಿಸಿತು ಆಗಲೆ

 

ನಡೆಸಿ ಕೋಗಿಲೆ ತಂತ್ರಗಾರಿಕೆ

ಅರಿಯದಾಯಿತು ಕಾಗೆಗೆ

ಕಾವು ಕೊಟ್ಟಿತು ಮರಿಯ ಮಾಡಿತು

ತುತ್ತನಿತ್ತಿತು ಜೊತೆಯಲೆ

 

ರೆಕ್ಕೆ ಬಲಿಯಲು ಪಿಕದ ಮರಿಗಳು

ಗೂಡು ತೊರೆದವು ಹಾಡುತ

ಕೇಳಿ ಮಂದಿಯ ಹೊಗಳು ನುಡಿಗಳು

ಕಾಗೆ ತ್ಯಾಗವ ಮರೆಯುತ

 

ಕಾಗೆ ಇಲ್ಲದೆ ಎಲ್ಲಿ ಕೋಗಿಲೆ?

ಪಿಕದ ಮೊಟ್ಟೆಗಳೊಡೆಯದು

ಅದರ ಜನ್ಮಕೆ ಕಾಗೆ ಕಾರಣ

ಹೆಸರು ಮರೆಯಲಿ ಉಳಿದುದು||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್