ತ್ರಿಪದಿ ೧೧-೧೨-೧೩

ತ್ರಿಪದಿ ೧೧-೧೨-೧೩

ಬರಹ

ದುಂಡು ಮಲ್ಲಿಗೆ ಸೂಡಿ ಅಂಗಳಲಿ ಬೆಳದಿಂಗಳೂಟ ಊಡಿ
ಅಂಗಕ್ಕೆ ಆಲಿಂಗನ ನೀಡುವ ಮಡದಿ
ಸಂಗಡವೇ ಮಂಗಳ ಪ್ರಭುಶಂಕರ

ಕುಡುಕರೆಲ್ಲಾ ಕೆಡುಕರಲ್ಲ ಹೆಂಡ
ಕುಡಿದು ಹೆಂಡತಿ ಹೊಡೆದು ಅರಚುವ
ಗಂಡ ಗುಂಡಿಗೆಯಿಲ್ಲದ ಷಂಡ ಪ್ರಭುಶಂಕರ

ಕರಿಬಟ್ಟೆಯ ಧರಿಸಿ ಐಯ್ಯಪ್ಪನೊಲಿಸುವಿರಿ
ಕರಿಮಣಿ ಧರಿಸಿ ಹೆಂಗಳು ಮಾಂಗಲ್ಯವುಳಿಸುವಿರಿ
ಕರಿ ಅಮಂಗಲವೆಂಬ ಮೂಢನಂಬಿಕೆ ಬೇಡೆಂದೆ ಪ್ರಭುಶಂಕರ