ತ್ರಿಪದಿ ೭-೮-೯-೧೦

ತ್ರಿಪದಿ ೭-೮-೯-೧೦

ಬರಹ

ಮನದಲ್ಲೊಂದು ನುಡಿದು ಆನನಲೊಂದು ನುಡಿವ
ಮಾನವನ ಸಹವಾಸಕ್ಕಿಂತ ಹಾವಿನೊಡನೆ
ಸರಸ ಲೇಸು ಪ್ರಭುಶಂಕರ

ಚಿಂದಿಯನ್ನುಟ್ಟು ಒಕ್ಕಲು ಬಿಟ್ಟು ಮಂದಿಯನ್ನೊಟ್ಟು
ರಂಡೆಯರಂತೆ ಆಡುವರೇಕೆ ಈ
ಮಂಡೆಗೆಟ್ಟ ಬೆಡಗಿಯರು ಪ್ರಭುಶಂಕರ

ನಚ್ಚುವೆಂಬುದು ಸ್ವಚ್ಛ ಕನ್ನಡಿಯಂತೆ
ಪಿಚ್ಚಿನ ನೋಟ ನಾಟಿದಾಗ ನುಚ್ಚಾಗಿ ಎದೆಯ
ಚುಚ್ಚಿ ನೋಚ್ಚುವುದು ಪ್ರಭುಶಂಕರ

ಬಳಗ ತೊರೆದು ಸಲಗ ಹಿಡಿದು
ಪಳಗಿಸಿ ಅದುರೊಟ್ಟಿಗೆ ಸಲ್ಲಾಪಿಸುವ ಮಾವುತರ
ಬಾಳಿನ ಆಲಾಪದಲ್ಲಿ ಕಂಡೆ ವಿಲಾಪ ಪ್ರಭುಶಂಕರ