ದ.ಕ ಜಿಲ್ಲಾ ಮಟ್ಟದ ಯುವಜನ ಮೇಳ
ದ.ಕ.ಜಿಲ್ಲಾ ಮಟ್ಟದ ಯುವಜನ ಮೇಳವು ಸುಳ್ಯ ತಾಲೂಕಿನ ದುಗ್ಗಲಡ್ಕದ ಸರಕಾರಿ ಪ್ರೌಢಶಾಲೆಯಲ್ಲಿ ಶನಿವಾರದಂದು ನಡೆಯಿತು.
ಯುವಜನ ಮೇಳವನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಭಾರತ ಸರಕಾರದ ಆಡಳಿತ ಸುಧಾರಣ ಆಯೋಗದ ಅಧ್ಯಕ್ಷ ವೀರಪ್ಪ ಮೊಯಿಲಿ ಉದ್ಘಾಟಿಸಿ ಚಲನ ಶೀಲತೆ,ಪರಿವರ್ತನೆ,ವಿಕಾಸದ ಹಾದಿಯಿಂದ ನಾವು ಬದಲಾದರೆ ಜಗತ್ತು ಬದಲಾಗಲು ಸಾಧ್ಯ ಆದರೆ ನಾವು ಮಾಡುವ ಕೆಲಸದಲ್ಲಿ ದಕ್ಷತೆ ಇರಬೇಕು ಎಂದರು. ಸಮಯವೇ ನಮ್ಮ ಪ್ರತಿಸ್ಪರ್ಧಿ ಇದು ಯುವಕ ಯುವತಿಯರಿಗೆ ಒಂದು ಸವಾಲಾಗಿರಬೇಕು ಸಮಾಜದಲ್ಲಿ ಸಂಘರ್ಷ ಬೇಡ ಅದು ನಮ್ಮ ದೇಶಕ್ಕೆ ಮಾರಕ ಎಂದು ಹೇಳಿದ ಮೊಯಿಲಿ ವೈಯಕ್ತಿಕ ಲಾಭದ ಬದಲು ತಂಡದ ಲಾಭಕ್ಕೆ ಎಲ್ಲರೂ ಪ್ರಯತ್ನಿಸಬೇಕು ಎಂದು ಹೇಳಿದರು.
ಯುವಜನ ಮೇಳದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯದ ಕುರುಂಜಿ ವೆಂಕಟ್ರಮಣ ಗೌಡ ಉದ್ಘಾಟಿಸಿದರು.
ಸಭಾಧ್ಯಕ್ಷತೆಯನ್ನು ಜಿ.ಪಂ ಉಪಾಧ್ಯಕ್ಷೆ ಜಯಶ್ರೀ ಕೋಡಂದೂರು ವಹಿಸಿದ್ದರು.
ವೇದಿಕೆಯಲ್ಲಿ ಜಿ.ಪಂ ಸದಸ್ಯ ವೆಂಕಟ್ ದಂಬೆಕೋಡಿ, ಭಾಗೀರಥಿ ಮುರುಳ್ಯ,ಸುಳ್ಯ ನಗರ ಪಂಚಾಯತ್ ಸದಸ್ಯ ಚಂದ್ರಕುಮಾರ್,ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ನ.ಸೀತಾರಾಮ,ಸುಳ್ಯದ ಮೀನಾಕ್ಷಿ ಗೌಡ.ರಾಜ್ಯ ಯುವಪ್ರಶಸ್ತಿ ವಿಜೇತ ಟಿ.ಎಂ.ಶಹೀದ್,ಸುಳ್ಯ ತಾ.ಪಂ ಅಧ್ಯಕ್ಷ ಶಂಕರ್ ಪೆರಾಜೆ,ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ವಿಶ್ವನಾಥ,ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಎಂ.ಸಿ.ರಮೇಶ್, ಮೊದಲಾದವರು ಭಾಗವಹಿಸಿದ್ದರು.
ಈ ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಪಂಚಾಯತ್,ಯುವಜನ ಸೇವಾ ಕ್ರೀಡಾ ಇಲಾಖೆ,ತಾಲೂಕು ಪಂಚಾಯತ್ ಸುಳ್ಯ, ನಗರ ಪಂಚಾಯತ್ ಸುಳ್ಯ,ಯುವಜನ ಸಂಯುಕ್ತ ಮಂಡಳಿ ಸುಳ್ಯ,ಮಿತ್ರ ಯುವಕ ಮಂಡಲ ಕೊಯಿಕುಳಿ,ನವೋದಯ ಯುವತಿ ಮಂಡಲಗಳ ಜಂಟಿ ಆಶ್ರಯದಲ್ಲಿ ನಡೆಸಿದ್ದವು.