ದರ್ಶನ

ದರ್ಶನ

ಬರಹ

ಅಂತರಾಳದಿ ನಾ ಕರೆದೆ ಬಾ
ನಿನ್ನಂತೆ ನನ್ನನ್ನು ನೀ ಮಾಡ ಬಾ
ನಿನ್ನಯ ಶುದ್ಧ ಹೃದಯವ ನೀಡು ಬಾ
ನಿನ್ನಯ ಸಧ್ಗುಣಗಳ ಕಲಿಸಲು ಬಾ
ನಿನ್ನ ಹಾಗೆ ನಾ ಬಾಳಲು ತೋರು ಬಾ

ಹಗಲಿರುಳು ದುಡಿಯಲು ನೆಮ್ಮಧಿಯ ತೋರಿದೆ
ಕಣ್ಣಿಗೆ ಕಾಣುವಷ್ಟು ಐಶ್ವರ್ಯ ತೋರಿಸಿದೆ
ಸುಖ ಸಂತೋಷದಿ ಬಾಳಲು ಮನೆಮಕ್ಕಳ ತೋರಿದೆ
ಆಧರೆ ಪೂಜೆಗೆಂದು ನಾ ಬಂದರೆ ನಿನ್ನ ನಾ ಕಾಣದೆ
ಮನನೊಂದು ನಿಜವ ತಿಳಿದಿರುವೆ
ಮನದಾಳದಿ ನಾ ಬೇಡುವೆ

ನಿನ್ನ ಧರ್ಶನ ತೋರು ಬಾ
ನಿನ್ನಂತೆ ನನ್ನನ್ನು ನೀ ಮಾಡ ಬಾ

ಸುಗುಣ ಪುಜಾರಿ