ದಶಲಕ್ಷ ಹಿಂಬಾಲಕರತ್ತ ಸಿಎನೆನ್

ದಶಲಕ್ಷ ಹಿಂಬಾಲಕರತ್ತ ಸಿಎನೆನ್

ಬರಹ

ದಶಲಕ್ಷ ಹಿಂಬಾಲಕರತ್ತ ಸಿಎನೆನ್

ದಶಲಕ್ಷ ಹಿಂಬಾಲಕರತ್ತ ಸಿಎನೆನ್
ಸಿ
ಎನ್ ಎನ್ ಸುದ್ದಿ ಚಾನೆಲ್ ಟ್ವಿಟರ್ ಖಾತೆ ಹೊಂದಿದೆ. ಇದರ ಬಿಸಿಬಿಸಿ ಸುದ್ದಿ ಟ್ವಿಟರ್
ಖಾತೆಯು ಈಗ ದಶಲಕ್ಷ ಚಂದಾದಾರರನ್ನು ಹೊಂದುವತ್ತ ದಾಪುಗಾಲಿಟ್ಟಿದೆ.ಬುಧವಾರದ ವೇಳೆಗೆ
ಒಂಭತ್ತು ದಶಲಕ್ಷ ಚಂದಾದಾರರನ್ನು ಹೊಂದಿದ್ದ ಶುಕ್ರವಾರದ ವೇಳೆಗೆ ದಶಲಕ್ಷದ ಸಂಖ್ಯೆ
ತಲುಪುವ ಆಶಾಭಾವನೆ ಇತ್ತು.ದಶಲಕ್ಷ ಸಂಖ್ಯೆ ಹಿಂಬಾಲಕರನ್ನು ಹೊಂದಿರುವ ಖಾತೆಗಳು
ಬ್ರಿಟ್ನಿ ಸ್ಪಿಯರ್ ಮತ್ತು ಆಸ್ಟನ್ ಕುಚರ್ ಅವರ ಹೆಸರುಗಳಲ್ಲಿದೆ. ಅವರುಗಳು ಅತ್ಯಧಿಕ
ಟ್ವಿಟರ್ ಖಾತೆ ಹೊಂದಿದವರ ಪಟ್ಟಿಯಲ್ಲಿ ಸಿಎನೆನ್ ನಂತರದ ಸ್ಥಾನಗಳಲ್ಲಿದ್ದಾರೆ.ಆಸ್ಟನ್
ಅಂತೂ ಸಿಎನೆನಿಗಿಂತ ತನ್ನ ಖಾತೆಗೆ ಮೊದಲು ದಶಲಕ್ಷ ಹಿಂಬಾಲಕರು ಬಂದರೆ ತಾನು ಹತ್ತು
ಸಾವಿರ ಸೊಳ್ಳೆ ಪರದೆಗಳನ್ನು ದಾನ ಮಾಡಿ ಮಲೇರಿಯಾ ನಿರ್ಮೂಲನೆ ಚಳುವಲಿಗೆ ಸಹಾಯ
ಮಾಡಲಿದ್ದೇನೆ ಎಂದು ಪ್ರಕಟಿಸಿದ್ದಾರೆ. ಹಾಗಾಗದೆ ಸಿಎನೆನ್ ಮೊದಲು ಗುರಿ ಅಲುಪಿದರೆ
ಅವರು ನೀಡುವ ಸೊಳ್ಳೆ ಪರದೆಗಳ ಸಂಖ್ಯೆ ಬರೇ ಒಂದು ಸಾವಿರ. ತಾನು ಮೊದಲು ಸಾಧನೆ
ಮಾಡಿದರೆ ತಾನೂ ಸೊಳ್ಳೆ ಪರದೆಗಳನ್ನು ದಾನ ನೀಡಲು ಸಿಎನೆನ್ ಮುಂದೆ ಬಂದಿದೆ.
-------------------------------------------------
ಅಂಟಾರ್ಕ್ಟಿಕಾದ ಹತ್ತು ಸಾವಿರ ಆಯುಸ್ಸಿನ ಮಂಜುಗಡ್ಡೆ ಕರಗಿತು
ಜಾಗತಿಕ
ಬಿಸಿಯೇರಿಕೆಯ ಪರಿಣಾಮವೋ ಎನೋ ಎನ್ನುವಂತೆ ಅಂಟಾರ್ಕಟಿಕಾದ ಹತ್ತು ಸಾವಿರ ವರ್ಷಗಳ ಕಾಲ
ಕರಗದೆ ಇದ್ದ ಮಂಜುಗಡ್ಡೆ ಸೇತುವೆಯು ಮುರಿದ ವಿಷಯವು ಉಪಗ್ರಹ ಚಿತ್ರಗಳು ದೃಢ
ಪಡಿಸಿವೆ.ತಕ್ಷಣವೇ ಅಮೆರಿಕಾವು ಜಗತ್ತಿನ ಹವಾಮಾನದಲ್ಲಿ ಆಗುತ್ತಿರುವ ಏರುಪೇರಿನ ಬಗ್ಗೆ
ತಾನು ಕ್ರಮ ಕೈಗೊಳ್ಳಲು ಬದ್ಧ ಎನ್ನುವುದನ್ನು ದೃಡಪಡಿಸಿತು.ಕಳೆದ ವರ್ಷದಲ್ಲೇ
ಮಂಜುಗಡ್ಡೆಯು ಶೇಕಡಾ ಹದಿನೈದು ಭಾಗ ಕರಗಿದೆ.ಉತ್ತರಧ್ರುವದ ಆರ್ಕ್‌ಟಿಕ್ ಪ್ರದೇಶದ
ಮಂಜುಗಡ್ಡೆಯೂ ಕರಗುವುದರಲ್ಲಿ ಹಿಂದೆ ಬಿದ್ದಿಲ್ಲ ಎನ್ನುವುದು ಚಿಂತೆಯ ವಿಷಯವಾಗಿದೆ.
-----------------------------------------------
ಬಾಹ್ಯಾಕಾಶದಲ್ಲಿ ವಿದ್ಯುತ್ ಸ್ಥಾವರ!
ಇನ್ನೂರು
ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರವೊಂದನ್ನು ಬಾಹ್ಯಾಕಾಶದಲ್ಲಿ ಸ್ಥಾಪಿಸಲು
ಸೊಲಾರೆನ್ ಕಂಪೆನಿಯು ಯೋಜಿಸಿದೆ. ಕ್ಯಾಲಿಫೋರ್ನಿಯಾಕ್ಕೆ ವಿದ್ಯುಚ್ಛಕ್ತಿ ಒದಗಿಸಲು
ಸ್ಥಾವರ ಬಳಕೆಯಾಗಲಿದೆ.ಉಪಗ್ರಹಗಳ ಸೌರ ಫಲಕಗಳ ಮೂಲಕ ಸೌರಶಕ್ತಿಯನ್ನು ವಿದ್ಯುತ್
ಅಯಸ್ಕಾಂತೀಯ ಕಿರಣಗಳಾಗಿ ಮಾರ್ಪಡಿಸಿ,ಅದನ್ನು ಕೆಳಗಿನ ಕಕ್ಷೆಯಲ್ಲಿರುವ ವಿದ್ಯುತ್
ಸ್ವೀಕಾರ ಕೇಂದ್ರಕ್ಕೆ ಕಳುಹಿಸಿ, ಅಲ್ಲಿಂದ ಅದನ್ನು ವಿದ್ಯುತ್ ಆಗಿ ಮಾರ್ಪಡಿಸುವ
ಯೋಜನೆಯನ್ನು ಸೊಲಾರೆನ್ ಮಾಡಿ,ಅನುಮತಿಗೆ ಕಾಯುತ್ತಿದೆ.ವಿದ್ಯುತ್ ಅಯಸ್ಕಾಂತೀಯ ಕಿರಣಗಳ
ಮೂಲಕ ಶಕ್ತಿಯನ್ನು ಕಳುಹಿಸುವ ಪ್ರಾಯೋಗಿಕ ಯೋಜನೆ ಈಗಾಗಲೇ ಸಣ್ಣ ಮಟ್ಟದಲ್ಲಿ ನಡೆದಿದೆ.
ಹವಾಯಿ ದ್ವೀಪಗಳ ಸಮೂಹದ ಎರಡು ದ್ವೀಪಗಳ ನಡುವೆ ತೊಂಭತ್ತು ಕಿಲೋಮೀಟರ್ ದೂರಕ್ಕೆ ಈ
ರೀತಿ ಶಕ್ತಿಯ ಕಳುಹಿಸುವ ಪರೀಕ್ಷೆ ಯಶಸ್ವಿಯಾಗಿದೆ.
----------------------------------------------
ಕನ್ನಡದ ವಿಜ್ಞಾನ-ತಂತ್ರಜ್ಞಾನ ಬ್ಲಾಗ್‌ಗಳು
ಕನ್ನಡದಲ್ಲಿ
ಬ್ಲಾಗ್ ಬರವಣಿಗೆ ಸಮೃದ್ಧವಾಗಿ ಬೆಳೆದಿದೆ. ಆದರೆ ವಿಜ್ಞಾನ ತಂತ್ರಜ್ಞಾನ ವಿಷಯದ
ಬಗೆಗಿರುವ ಬ್ಲಾಗುಗಳ ಸಂಖ್ಯೆ ಬಹು ಕಡಿಮೆ.ಇ-ಜ್ಞಾನ ಬ್ಲಾಗ್‌ನ ಶ್ರೀನಿಧಿಯವರು ತಮ್ಮ
ಬ್ಲಾಗ್ ಬರಹದಲ್ಲಿ "ಉದಯವಾಣಿ"ಯ ವಿಜ್ಞಾನ ಬರಹಗಳ ಬ್ಲಾಗ್
"ಅಶೋಕ್‌ವರ್ಲ್ಡ್"(ashok567.blogspot.com),ಪವನಜರ ವಿಶ್ವಕನ್ನಡ, ಕೊಳ್ಳೆಗಾಲ
ಶರ್ಮರ "ಇಂದಿನ ವಿಜ್ಞಾನ",ಕನ್ನಡಪ್ರಭ
ಲೇಖನಗಳು,ನೆಟ್‌ನೋಟ,ತತ್ತ್ವಜ್ಞಾನಿ,ಕುತೂಹಲಿ,ಖಗೋಳ,ರಾಧಾಕೃಷ್ಣ ಉವಾಚ,ವಿಸ್ಮಯ +
ಮುಂತಾದ ಕೆಲ ಬ್ಲಾಗುಗಳನ್ನು http://e-jnana.blogspot.comನಲ್ಲಿ ಪಟ್ಟಿ
ಮಾಡಿದ್ದಾರೆ. ಈ ಬ್ಲಾಗುಗಳ ಕೊಂಡಿಗಳನ್ನು ಇ-ಜ್ಞಾನ ಬ್ಲಾಗಿನ ಮೂಲಕ ಪಡೆಯಬಹುದು.
*ಅಶೋಕ್‌ಕುಮಾರ್ ಎ