ದಸರಾ ವೈಭವ

ದಸರಾ ವೈಭವ

ಕವನ

ನವರಾತ್ರಿ ವೈಭವಕೆ ತೆರೆಯೆಳೆವ ದಿನ

ಅದ್ಭುತ ಜಗತ್ಪ್ರಸಿದ್ಧ ದಸರವಿದು

ಅಂಬಾರಿ ಮೆರವಣಿಗೆ ಅಮೋಘ ಘಳಿಗೆ

ಅನನ್ಯ ನೆನಪು ನೆನಪಿಸೋ ಹಬ್ಬವಿದು....

 

ಹಿಂದೂಧರ್ಮದ ಪರಂಪರೆಯ ಆಚರಣೆ

ನಾಡಹಬ್ಬದ ಘನತೆ ಬಿಂಬಿಸಿದೆ

ಗತಕಾಲ ಮರುಕಳಿಸಿದ ದಸರೆ ಆಕರ್ಷಣೆ

ಅನುರಾಗದರಮನೆ ಮಿಂಚುತಿದೆ...

 

ದೀಪಾಲಂಕಾರ ಮನಮೋಹನ ದೃಶ್ಯಸುಧೆ

ಬೀದಿ ಬೀದಿಗಳು ರಾರಾಜಿಸುತಿವೆ

ಅರಸಮನೆತನ ಪೂಜಾ ವೈಭೋಗ ಧಾರೆ

ಜನಮಾನಸದಲಿ ಮರುಕಳಿಸುತಿವೆ...

 

ಅರಮನೆ ಅಂಗಳ ಸ್ತಬ್ಧಚಿತ್ರಗಳ ಹೂರಣ

ಮನಸೂರೆಗೊಳ್ಳುವ ದೃಶ್ಯಾವಳಿ

ವಿವಿಧ ವೇಷಭೂಷಣ ಕಣ್ಮನ ಸೆಳೆವತಾಣ

ಮೈಸೂರಿ ನಗರಿಯು ಪುಷ್ಪಾಂಜಲಿ...

 

ಅಂದಣದಿ ಚಾಮುಂಡಿ ಅಧಿದೇವತೆ ಸೊಬಗು

ಚಂದನದ ಘಮವದು ಬೀರುತಲಿ

ದುಷ್ಟರ ಶಿಕ್ಷಕಿ ಶಿಷ್ಟರ ರಕ್ಷಕಿಯ ಆರಾಧನೆ

ಅಂಬಾರಿ ರಾಜಮಾರ್ಗದಿ ಸಾಗುತಲಿ..

 

ತನುಮನ ಸೆಳೆಯುವ ದಸರೆಯ ಚಾಲನೆ

ನಾಡಿನಾದ್ಯಂತ ಭಕ್ತಿಪೂರಕ ನಡೆ

ಮಸ್ತಿಕುಸ್ತಿಗಳ ಮೋಜು ಕಸರತ್ತಿನ ಸೋನೆ

ಅದೆಷ್ಟು ವೈಭೋಗ ದಸರಪಡೆ...

 

-ಅಭಿಜ್ಞಾ ಪಿ ಎಮ್ ಗೌಡ

 

ಚಿತ್ರ್