ದಾಹ

ದಾಹ

ಕವನ

ತೀರದ ದಾಹ ಮನುಜನ ಮೋಹ

ಬಿಡನು ಎಂದು ದುರಾಸೆಯ ಭಾವ

 

ಅದಕ್ಕಾಗೆ ಎoದು ನೋವ ಪಡುವ

ಶಿಕ್ಷೆ ನೀಡಿರುವ ಕಾಣದ ಡೈವ

 

ಆದರೂ ಅರಿಯದೆ ಮಾಡಿದ್ದೆ ಮಾಡುವ

ಆಗುತ್ತಿರುವ ದಾನವ

 

ದೇವರ ಕೂಡಿದ ಗುಡಿಯ ಒಳಗೆ

ಇಂದು ಅವನು ಬಂಧಿ ಮನೆಯ ಒಳಗೆ

 

ಈ ಭೂಮಿ ಸಾಲದೆಂದು

ಆಕಾಶದೆಡೆಗೆ ಓಟ ನಿಂದು

 

ಕಾಡನು ಕಡಿದು ನಾಡೆಲ್ಲಾ ಬರಿದು

ಭೂಮಿಯ ಕೊರೆದು ಮಣ್ಣೆಲ್ಲ ಸವೆದು 

 

ನಾನೇ ಎಂದು ಮೆರೆಯುವ

ಜಂಭದಿಂದ  ಬೀಗುವ

 

ಆಗುತ್ತಿರುವೆ ದಾನವ

ನೀನಾಗುವೆ ಎಂದು ಮಾನವ

 

ಕಡಿವಾಣ ಹಾಕುತ್ತಿರುವ ಎಂದು

ಆ ವಿಧಿಯು ಬಂದು

 

ಆ ದೇವರು ಇಟ್ಟಂಗೆ ಇರು

ಮಾಡಬೇಡ ಯಾವುದೇ ಕಾರುಬಾರು

-ಎಸ್. ನಾಗರತ್ನ ಚಿತ್ರದುರ್ಗ

ಚಿತ್ರ ಕೃಪೆ: ಇಂಟರ್ನೆಟ್ ತಾಣ 

 

ಚಿತ್ರ್