ದಿನಕ್ಕೆ ಎಷ್ಟು ಸಿಗರೇಟು ಸೇದುತ್ತೀರ?,ಯಾಕೆ ಸೇದುತ್ತೀರ?,ನೀವು ಸಿಗರೇಟು ಬಿಡಲು ಎಷ್ಟು ಸಾರಿ ಪ್ರಯತ್ನಿಸಿದ್ದೀರಾ?

ದಿನಕ್ಕೆ ಎಷ್ಟು ಸಿಗರೇಟು ಸೇದುತ್ತೀರ?,ಯಾಕೆ ಸೇದುತ್ತೀರ?,ನೀವು ಸಿಗರೇಟು ಬಿಡಲು ಎಷ್ಟು ಸಾರಿ ಪ್ರಯತ್ನಿಸಿದ್ದೀರಾ?

ಬರಹ

ದಿನಕ್ಕೆ ಎಷ್ಟು ಸಿಗರೇಟು ಸೇದುತ್ತೀರ?

ಯಾಕೆ ಸೇದುತ್ತೀರ?

ನೀವು ಸಿಗರೇಟು ಬಿಡಲು ಎಷ್ಟು ಸಾರಿ ಪ್ರಯತ್ನಿಸಿದ್ದೀರಾ?

ನಿಮ್ಮ ಸಿಗರೇಟು ಸಹವಾಸ ಹೇಗೆ ಶುರು ಆಯ್ತು? 

ನಾನು ನನ್ನ ಕಥೆ ಮೊದಲು ಹೇಳುತ್ತೇನೆ......


ನಾನು ಮೊದಲು ಕದ್ದು ಮುಚ್ಚಿ ಬೀಡಿ ನಮ್ಮ ಅಪ್ಪನ ಜೇಬಿನಿಂದ ಎಗರಿಸಿ, ಶೌಚಾಲಯಕ್ಕೆ  ಹೊಲದಲ್ಲಿ/ಜಮೀನಿನಲ್ಲಿ ಹೋಗಿ ಅಲ್ಲಿ ಕೂಡ ಯಾರದ್ರೂ ನೋಡಿಯಾರು ಅಂತ ಕದ್ದು ಮುಚ್ಚಿ ಸೇದುತ್ತಿದ್ದೆವು.



ನನ್ನ ಮೊದಲ ಅನುಭವ ಕೇಳಿ,

ಮೊದಲ ಸಾರಿ ಬೀಡಿ ಎಳೆದಾಗ ,ನಮ್ಮ ಸ್ನೇಹಿತ(ಅವನಾಗಲೇ ಅದರಲ್ಲಿ ಪಂಟ/ಪಳಗಿದ್ದ) ಬೀಡಿಯನ್ನ ದೀರ್ಘವಾಗಿ ಒಳಗೆ ಎಳೆದುಕೊಳ್ಳಬೇಕು ಅಂತ ತಾನು ಮಾಡಿ ತೋರಿಸಿದ, ನಾವು(ನಾನು ನನ್ನ ಇನ್ನು ಇಬ್ಬರು ಸ್ನೇಹಿತರು)ಸಹ ಅವನ ಸ್ಟೈಲ್ ಮಾಡಲು ಹೋಗಿ ಬಂದ ಹೊಗೆಯನ್ನ ಪೂರ್ತಿಯಾಗಿ ಒಳಗೆ ತೆಗ್ದುಕೊಂಡೆವು, ನಂತರದ ಬವಣೆ ಹೇಳಿದರೆ ಈಗಲೂ ನಗು ಉಕ್ಕಿ ಬರುತ್ತದೆ, ಎಲೆದುಕೊಂದದ್ದೇ ತಡ, ಆ ಹೋಗೆ ನವರನ್ದ್ರವೆಲ್ಲ ಹೊಕ್ಕು ನರ ನಾಡಿ ಕಂಗೆಡಿಸಿ, ಸ್ವಾಶಕೋಶದ ದಿಕ್ಕು ತಪ್ಪಿಸಿ ,ನಮ್ಮನು ಸಾಯಲೂ ಬಿಡದೆ ಬದುಕಲೂ ಬಿಡದ ಹಾಗೆ ಮಾಡಿತು, ಕೆಮ್ಮು ಉಕ್ಕಿ ಬರುತ್ತಿದ್ದು, ಕಳ್ಳನಿಗೆ ಚೇಳು ಕಚ್ಚಿದ ಹಾಗೆ ಆಯ್ತು, ನಮ್ಮ ಪರಿಸ್ತಿತಿ, ನಂತರದ ಒಂದು ಘಂಟೆ ನಮ್ಮ ದೇಹ ನಮ್ಮ ಕೈಯಲ್ಲಿರಲಿಲ್ಲ ಇನ್ನೆಲ್ಲೋ ಇತ್ತು....

ನಂತರ ಇನ್ನಿತರ ಧೂಮಪಾನಿಗಳ ಹಾಗೇ ನಾನೂ ಅದರಲ್ಲಿ ಪಳಗುತ್ತ, ಕದ್ದು ಮುಚ್ಚಿ ಸೇದುತ್ತ, ೧,೨,೩,೫.....೧೦ ಬೀಡಿ ಆಗಿ ಕೊನೆಗೆ ಒಂದು ದಿನಕ್ಕೆ ಒಂದು ಕಟ್ಟು/ಅದರಲ್ಲಿ ೨೫ ಬೀಡಿ ಇರುತ್ತವೆ) ಸಹ ಬೂದಿ ಮಾಡುವ ಮಟ್ಟಕ್ಕೆ ಬೆಳೆದೆ. ೧೮ನೆಯ ವರುಷದಲ್ಲಿ ಕಾಲೇಜಿಗೆ ಸೇರಿದಾಗ ನಾನು ಮೊದಲು ಸೇದಿದ್ದೆ ಗೋಲ್ಡ್ ಪ್ಲೇಕ್ ಸಿಗರೆಟ್ , ಅದನ್ನು ಸಹ ದಿನಕ್ಕೆ ೧,೨,೩,೫,೧೦ ಸೇದುತ್ತಿದ್ದೆ. ಕೊನೆಗೆ ನಮ್ಮ ಮನೆಯಲ್ಲಿ ನಾನು ಈ ರೀತಿ ವಿಪರೀತ(ಧೂಮಪಾನ ಮಾಡುವುದೇ ನಮ್ಮ ಮನೆಯವರಿಗೆ ಅಪರಾಧ ಅದರಲ್ಲಿ ವಿಪರೀತ!) ಧೂಮಪಾನ ಮಾಡುತ್ತೇನೆ ಅಂತ ನಮ್ಮ ಮನೆ ಎದುರಿನ ಆಸಾಮಿ ಕಣ್ಣಾರೆ ನೋಡಿ ಇನ್ನೋದಿಸ್ತು ಒಗ್ಗರಣೆ ಹಾಕಿ ವರಧಿ ಮಾಡಿ ಆ ವಯಸ್ಸಿನಲ್ಲಿ(೧೮) ನನಗೆ ನಮ್ಮ ಅಪ್ಪ ,ಅಮ್ಮ,ಅಣ್ಣ ನಾಲ್ಕು ಪೇಮೆಂಟ್ /ಹೊಡೆತ ಕೊಡುವ/ಬೀಳುವ ಹಾಗೆ ಮಾಡಿದ,.

ಪರಿಣಾಮ?.........................

ನನ್ನ ದಿನದ ಪಾಕೆಟ್ ಮನಿ ಕೈ ತಪ್ಪಿ ಬಾಯಿ ಬಡ್ಕೊಲ್ಲೋ ಹಾಗೆ ಆಯಿತು,

ಪರಿಣಾಮ?...........

ನಾನು ದಂ ಹೊಡೆಯೋದು ಬಿಟ್ಟಿರಬೇಕು ಅಂದಿಕೊಂಡಿದ್ದೆರ? ನೋ , ನಮ್ಮ ಸ್ನೇಹಿತರಿದ್ದರಲ್ಲ, ಅವರು ನನಗೆ ಏನೋ ಮಹಾ ದಾನ/ಪುಣ್ಯ ಕೊಡಿಸುವಹಗೆ ಮಾಡಿ ಧೋಮಪಾನ ಮಾಡಿಸುತ್ತಿದ್ದರು, ನಂತರ ಕಾಲೇಜ್ ಮುಗಿಸಿ ,ಡಿಪ್ಲೊಮಾಗೆ ಸೇರಿಕೊಂಡೆ/ಬೆಂಗಳೂರಲ್ಲಿ, ಈಗ ನಾನು ಅಸ್ಟು ದಂ ಹೊಡೆಯುತ್ತಿದ್ದವನು ಕಡಿಮೆ ಮಾಡುತ್ತಾ ಮಾಡುತ್ತಾ................................................?


ದಿನಕ್ಕೆ ಕೇವಲ!! ೩ ಸಿಗರೆಟ್ ಹೊಡೆಯುತ್ತೇನೆ,

ಈಗ ಸಾರ್ವಜನಿಕ ಧೂಮಪಾನ ನಿಷೇದ ಇರುವುದು ಸಹ ನನಗೆ ವರವಾಗಿ ಇಷ್ಟು ಕಡಿಮೆ ಹೊಡೆಯುವಂತಾಗಿದೆ. (ಇನ್ನು ಅಗಾಗ ಕೆಲವೊಂದು ಸಾರಿ ರಾತ್ರಿಯಲ್ಲಿ,ಸಿಗರೆಟ್ ಸಿಗದೇ ಕಿಲೋ ಮೀಟರ್ ಗಟ್ಟಲೆ ಗಾಡಿ ಹಾಕಿಕೊಂಡು ಅಂಗಡಿ ಹುಡುಕಿಕೊಂಡು ಹೋದದ್ದು ಇದೆ. ಮತ್ತು ಅದು ಸಿಗದೇ ದಂ ಎಲೆಯುತ್ತಿರುವವರ ಹತ್ತಿರ ಹೋಗಿ ರಿಕ್ವೆಸ್ಟ್ ಮಾಡಿ ಅವರ ದಂ ಹೊಡೆದದ್ದು, ಸ್ನೇಹಿತರ ಜೊತೆಗೆ ಒಂದೇ ಸಿಗರೆಟ್ನಲ್ಲಿ /೭ ಜನ(ಥೂ ಅಸಹ್ಯ ಅಂತಾ ಇದ್ದೀರಾ?) ಹೊಡೆದದ್ದು ಇದೆ) ಇನ್ನು ನಾನು ಧೂಮಪಾನ ಬಿಡಬೇಕು ಅಂತ ಅಂದುಕೊಂಡ ಬಗ್ಗೆ........

ನಾನು ಅಗಾಗ ಇದನ್ನ ಬಿಡುವ ಬಗ್ಗೆ ಯೋಚಿಸುದ್ದುಂಟು/ಈಗಲೂ ಸಹ....

ಪ್ರತಿ ಸಾರಿ ಅಂದುಕೊಂಡು ಕೈ ನಲ್ಲಿನ ಸಿಗರೆಟ್ ನೋಡಿ ಇದೆ ಲಾಸ್ಟ್ ಅಂದುಕೊಂಡು ,ಮತ್ತೆ ಮತ್ತೆ ನನ್ನ ಪ್ರಮಾಣ ನಾನು ಅದೆಷ್ಟು ಸಾರಿ ಮುರಿದಿದ್ದೇನೋ ನನಗೆ ಗೊತ್ತಿಲ್ಲ,,,,,,,,,,,,,

ಆದರೂ ಎಂದೋ ಒಂದು ದಿನ(ಯಾವಾಗ?) ಇದನ್ನು ಬಿಡಬಹುದು....