ದಿನಕ್ಕೊಂದು ಸಾಕು!

ದಿನಕ್ಕೊಂದು ಸಾಕು!

ಕವನ

ರವಿವಾರ ರಜೆಯಿರಲು ತಿರುಗಾಡಿ ಬರಲೆಂದು

ಹಳ್ಳಿಯೆಡೆ ನಡೆದಿಹೆವು ಜೊತೆಯಗೂಡಿ

ಸಿಹಿಮಾವು ತೋಟದಲಿ ಸುತ್ತಾಡಿ ಬರುತಿರಲು

ಹಣ್ಣನ್ನು ಸವಿಯುವುದು ನಮಗೆ ರೂಢಿ

 

ಕೈಗೆಟುಕುವಂತಿರಲು ಗಿಡಗಳಲಿ ಹಣ್ಣುಗಳು

ಗಮನಿಸುವ ಬಳಗವಿದೆ ಸುತ್ತಮುತ್ತ

ಅವರೊಂದು ಕಡೆಯಲ್ಲಿ ನೋಡುತ್ತ ನಿಂತಿರಲು

ಬಲಿತಿರುವ ಹಣ್ಣತ್ತ ನಮ್ಮ ಚಿತ್ತ

 

ನಿಮಗೊಂದು ನನಗೆರಡು ಎಂದಿಹಳು ನನ್ನವಳು

ನಮ್ಮೊಳಗೆ ನಡೆದ ಮಾತಿನೊಪ್ಪಂದ

ಮಧುಮೇಹ ನನಗಿರಲು ಭಯವಿತ್ತು ಮನದಲ್ಲಿ

ದಿನಕೊಂದು ಮೆಲ್ಲುತಿಹೆ ಆಸೆಯಿಂದ||

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್