ದಿನಕ್ಕೊಮ್ಮೆ ಬ್ಯಾಟರಿ ಚಾರ್ಜ್ ಬಯಸುವ ಲ್ಯಾಪ್‌ಟಾಪ್

ದಿನಕ್ಕೊಮ್ಮೆ ಬ್ಯಾಟರಿ ಚಾರ್ಜ್ ಬಯಸುವ ಲ್ಯಾಪ್‌ಟಾಪ್

ಬರಹ

HP EliteBook 6930p ನೋಟ್‌ಬುಕ್ ಕಂಪ್ಯೂಟರ್ ಎಲ್ ಇ ಡಿ ತೆರೆ ಹೊಂದಿದೆ. ಸಾಮಾನ್ಯವಾಗಿ ಎಲ್ ಸಿ ಡಿ ತೆರೆ ಇರುತ್ತದೆ ತಾನೇ? ಇದರಿಂದಲೇ ಬ್ಯಾಟರಿ ನಾಲ್ಕು ಗಂಟೆ ಹೆಚ್ಚು ಕೆಲಸ ಮಾಡುತ್ತದೆ. laptop

ಹಾಗಾಗಿ ಈ ಲ್ಯಾಪ್‌ಟಾಪ್ ಬಳಸುವ ವಿದ್ಯುಚ್ಛಕ್ತಿ ಕಡಿಮೆ. ಜತೆಗೆ ಇದರ ಇಂಟೆಲ್ ಸಂಸ್ಕಾರಕವೂ ಕಡಿಮೆ ಶಕ್ತಿ ಬಳಸಿ ಕಾರ್ಯನಿರ್ವಹಿಸುತ್ತದೆ.ಇದರಿಂದ ಶೇಕಡಾ ಏಳು ಶಕ್ತಿ ಉಳಿತಾಯ ಆಗುತ್ತದೆ.

ಇದನ್ನು ಅತ್ಯಂತ ದೀರ್ಘ ವೈಮಾನಿಕ ಯಾನವಾದ ನೆವಾರ್ಕ್ ಮತ್ತು ಸಿಂಗಾಪುರ ಯಾನದಲ್ಲಿ ಬಳಸಬಹುದಂತೆ.ಈ ವಿಮಾನ ಯಾನ ಹದಿನೆಂಟು ಗಂಟೆ ಕಾಲದ್ದು.ಲಂಡನ್ ಮತ್ತು ಪ್ಯಾರೀಸ್ ನಡುವಣ ವಿಮಾನ ಯಾನದ ಹತ್ತು ಟ್ರಿಪ್ ಅವಧಿಯಲ್ಲೂ ಲ್ಯಾಪ್‌ಟಾಪ್ ಚಾರ್ಜ್ ಮಾಡದೇ ಬಳಸಬಹುದು. ಇದರ ತೂಕ ಎರಡು ಕಿಲೋಗಿಂತ ತುಸು ಹೆಚ್ಚು.ಬೆಲೆ ಸುಮಾರು ಐವತ್ತೈದು ಸಾವಿರ ರುಪಾಯಿಗಳು.ಇದರಲ್ಲಿ ಬಳಕೆಯಾಗುವ ಬ್ಯಾಟರಿ 6-cell (55 WHr) Lithium-Ion; 4-cell (37 WHr) Lithium-Ion.

ಇತರ ವಿವರಗಳು