ದಿನಪತ್ರಿಕೆ

ದಿನಪತ್ರಿಕೆ

ಬರಹ

ಹೊತ್ತು ಹುಟ್ಟವ ಹೊತ್ತಿಗಾಗಲೇ,
ಹೊತ್ತಿಗೆಯಲಿರುವವರ ಅರಸಿ
ಸುದ್ದಿ ಹೊತ್ತು ಹೊರಡುವೆನು. ಕತ್ತು
ಹೊರಳಿಸಿ ನೋಡರು ನನ್ನ ಹಲವರು.

ಕೆಲವರು ಕಣ್ಣೂ ತೆರೆಯದೆ ಓದುವರು.
ಭ್ರಷ್ಟಾಚಾರ ಅನಾಚಾರಗಳಿಗೆ ಗುಡುಗುವರು.
ನೀತಿ ನೀಯತ್ತಿನ ಪರಾಕಾಷ್ಠೆ ಮೆರೆವರು.
ನನ್ನ ಮಡಿಚಿಟ್ಟು ಮತ್ತದೇ ಕೂಪಕ್ಕೆ ಇಳಿಯುವರು.

ನಿಮ್ಮ ಅಸಹಾಯಕತೆಗಳ ನೋಡಿ
ನಗುವುದ ಸಹಿಸಲಾರಿರಿ, ತೂಕಕ್ಕೆ
ಮಾರಿ ನಿರ್ಲಿಪ್ತರಾಗುವಿರಿ, ಗಂಗೆಯಲ್ಲಿ
ಮಿಂದು ಪಾಪ ಕಳೆದುಕೊಂಡವರಂತೆ.

ಮರಳಿ ಬರುವೆನು ಹೊಸ ಜೀವ
ಪಡೆದು, ಹೊಸ ಸುದ್ದಿ ಹೊತ್ತು.
ನಿಮ್ಮ ಮನದ ಕದವ ತಟ್ಟಲು.
ನಿಮ್ಮ ಬಡಿದೆಬ್ಬಿಸಲು...