ದಿನ ಪತ್ರಿಕೆಯೂ ಪ್ರಾದೇಶಿಕ ಆವೃತ್ತಿಗಳೂ
ದಿನ ಪತ್ರಿಕೆಯ ಪ್ರಾದೇಶಿಕ ಆವೃತ್ತಿಗಳಿಂದ ಸುದ್ದಿಯ ವಿಸ್ತಾರ ಆಯಾ ಪ್ರದೇಶಕ್ಕೆ ಸೀಮಿತವಾಗುತ್ತಿದೆಯೇ?ಆಯಾ ಭಾಗದ ಸಮಾಚಾರವನ್ನು ಸಮಗ್ರವಾಗಿ ಬರೆದು ಇತರೆಡೆಯ ಸುದ್ದಿಯನ್ನು ಪೂರಕವೆಂಬಂತೆ ಪ್ರಕಟಿಸುತ್ತಾರೇನೋ?ಸದ್ಯಕ್ಕೆ ಕನ್ನಡದ ನಂ ೧ ಪತ್ರಿಕೆಯ ಮೂರು ಆವೃತ್ತಿಯನ್ನು ಓದಿ ನನಗೆ ಹೀಗನ್ನಿಸಿತು.
ಬೆಂಗಳೂರು ಆವೃತ್ತಿಯಲ್ಲಿ ಸುದ್ದಿಯ ವಿವರಣೆ ಜಾಸ್ತಿ;ವೈವಿಧ್ಯತೆಯೂ ಕೂಡಾ.ಅದೇ ಮಂಗಳೂರು ಆವೃತ್ತಿಯಲ್ಲಿ ದಕ್ಶಿಣ ಕನ್ನಡ,ಉಡುಪಿ ಸುದ್ದಿಗಳೇ ಮೇಲುಗೈ ಸಾಧಿಸಿ ಇತರೆ ಸುದ್ದಿ ಗೌಣವಾದಂತೆ ಅನಿಸುತ್ತದೆ.'ಸಿಂಪ್ಲಿ ಸಿಟಿ ಪೇಜ್' ಅಲ್ಲಿ ಒಂದು ಪುಟ ಇದ್ದರೆ ಇಲ್ಲಿ ೧/೨ ಪುಟ(ಅದೂ ಸ್ವಾರಸ್ಯಕರವಾಗಿಲ್ಲ).ಎ.ಆರ್.ಮಣಿಕಾಂತ್ ಅವರ ಲೇಖನ,ವಿಶೇಶವಾಗಿ 'ಉಭಯ ಕುಶಲೋಪರಿ ಸಾಂಪ್ರತ' ಇಲ್ಲಿ ಪ್ರಕಟವಾಗುವುದೇ ಇಲ್ಲ.ಚಿತ್ರ ವಿಮರ್ಶೆ ಬೆಂಗಳೂರಿಗೆ ಮಾತ್ರ ಸೀಮಿತ.ಒಮ್ಮೆ ಬೆಳಗಾವಿಗೆ ಹೋದಾಗ ಅಲ್ಲಿನ ಪತ್ರಿಕೆ ತುಂಬಾ ಖೋರೆ ಗುಂಡೇಟು ಪ್ರಕರಣದ್ದೇ ಸುದ್ದಿ.ಬೇರೆ ವಾರ್ತೆ ತಿಳಿಯಲು ಟಿವಿಯ ಮೊರೆ ಹೋಗಬೇಕಾಯ್ತು.ಯಾಕೆ ಹೀಗೆ ಭೇದ ಭಾವ?ಸಂಪಾದಕರಿಗೆ ಪತ್ರ ಬರೆದರೂ ಉತ್ತರಿಸುವ ಗೋಜಿಗೇ ಹೋಗಲಿಲ್ಲ!ನನ್ನ ಅನಿಸಿಕೆಯಲ್ಲಿ ಹುರುಳಿಲ್ಲವೇ?ಎಲ್ಲ ಪತ್ರಿಕೆಗಳೂ ಹೀಗೆಯೇ?ನಿಮ್ಮ ಅಭಿಪ್ರಾಯ/ಅನುಭವ ಹಂಚಿಕೊಳ್ಳುವಿರಾ?
Comments
ಉ: ದಿನ ಪತ್ರಿಕೆಯೂ ಪ್ರಾದೇಶಿಕ ಆವೃತ್ತಿಗಳೂ