ದಿನ ರಾತ್ರಿ ಕನಸಲ್ಲಿ

ದಿನ ರಾತ್ರಿ ಕನಸಲ್ಲಿ

ಕವನ

ದಿನ ರಾತ್ರಿ ಕನಸಿನಲಿ

ನೀ ಬರುವ ಗಳಿಗೆಗಾಗಿ

ಕಾಯುವೆನು ಕಣ್ಮುಚ್ಚಿ

ಕನವರಿಸುತಾ ನಿನ್ನೆ


ಹಗಲೆಲ್ಲ ಎದೆಯಲ್ಲಿ

ನಿನ್ನ ಹೆಸರಿನ ಮಿಡಿತ

ದಿನದ ಪ್ರತಿ ಕ್ಷಣ-ಕ್ಷಣವು

ನಿನ್ನನೇ ಕಾಣುವ ತುಡಿತ

 

ಇರುಳ ಬಾನಲ್ಲಿ, ಬೆಳಗುವ

ಎಲ್ಲ ತಾರೆಗಳ ನಗುವಲ್ಲಿ

ನಿನ್ನ ಮೊಗದ ಚೆಲುವಿನ

ಚಿತ್ತಾರವನೆ ಅರಸುವೆನು


ಸುರಿವ ಪ್ರತಿ ಸೋನೆಯಲು

ನಿನ್ನ ಸವಿಯೊಲವ ಸಿಂಚನದ

ಮೃದು ಸ್ಪರ್ಷವನೆ ಅನುಭವಿಸುವೆನು


ಯಾವ ಜನ್ಮದ ಮೈತ್ರಿ

ಬೆಸೆದಿಹುದು ನಮ್ಮ

ಈ ಜನ್ಮದಲಿ ಮತ್ತೆ


ಒಲವನಲ್ಲದೆ ನಾನು

ಏನ ಕೊಡ ಬಲ್ಲೆನು,ಗೆಳತಿ

ಮತ್ತೆ ಏನನು ನಾ

ಬಯಸಲೊಲ್ಲೆ

 

ಇಂದೇ ನೀಡುವೆ ವಚನ

ಒಂದೇ ಮನದಿ

ಎಂಥ ಸಮಯದಲು

ಎಲ್ಲ ಸಮಯದಲು

ನಾನಿರುವೆ ನಿನಗಾಗಿ

ನಿನ್ನೊಲವ ಜೊತೆಯಾಗಿ

ನಿನ್ನೆಲ್ಲ ಮಾತುಗಳಿಗೆ

ನಾನಿರುವೆ ದನಿಯಾಗಿ

ನಿನ್ನೆದೆಯ ಹಾಡಾಗಿ

 


ಬಿಡು ಎಲ್ಲ ಚಿಂತೆಯನು

ನನ್ನೆಡೆಗೆ ಇನ್ನು

ನನ್ನರಸಿಯೆ ನಿನ್ನ

ಕೈಹಿಡಿದು ನಡೆಸುವೆನು

ಕೊನೆವರೆಗು ಕಾಯುವೆನು

ನೆರಳಂತೆ ನಡೆದು

 

 -ಜಯಪ್ರಕಾಶ ಶಿವಕವಿ