ದೀಪಾವಳಿ ಹಬ್ಬದ ಸಂಭ್ರಮಕ್ಕೆ ಎರಡು ಕವನಗಳು
ಭಾವಗಳ ಚಿತ್ತಾರ
ಬಣ್ಣಗಳ ಚಿತ್ತಾರ
ಬೆಳಕುಗಳ ಹರಿಕಾರ
ವರುಷ ಹರುಷದ
ಜೊತೆಗೆ ಉಲ್ಲಾಸ ಸಾಗರ//
ಸೋಲು ಗೆಲುವಿನ
ನಡುವೆ ಒಲವಿನಾಟ
ಬಾಳ ಹಾದಿಯ ತಿರುವ
ಮಡಿಲ ನೋಟ//
ಕತ್ತಲೆಯ ಸರಿಸಿ
ಬೆಳಕ ಕೊಡುತಲೆ ಸಾಗಿ
ಜಾತಿ ಮತವನು ತೊರೆದು
ಎಲ್ಲರೊಂದೇ ಬಾಗಿ//
ಆಸೆ ಪಥವನು ತೊರೆದು
ಮುಂದೆ ಮುಂದಕೆ ನಡೆದು ನವ ಭಾವ ಭಕುತಿಯೊಳು
ಬದುಕುತಲಿ ಬೆಳಗು//
*ದೀಪಾವಳಿ* ಬಂದಿಹುದು ನವೋಲ್ಲಾಸ ತಂದಿಹುದು
ನಿಮಿಷ ನಿಮಿಷ ಹರುಷವಾಗಿ
ಸುತ್ತೆಲ್ಲವೂ ಗೆಲುವಾಗಿ//
-ರತ್ನಾ ಭಟ್ ತಲಂಜೇರಿ
****
ಹಣತೆ ಹಣತೆ ಬೆಳಕಿನಲ್ಲಿ
ಹಣತೆ ಹಣತೆ
ಬೆಳಕಿನಲ್ಲಿ
ದೀಪಾವಳಿಯು
ಬಂದಿದೆ
ವರುಷವೆಲ್ಲ
ಹರುಷ ಚೆಲ್ಲಿ
ಶುಭೋದಯವ
ಸಾರಿದೆ
ಗೆಲುವಿನಲ್ಲಿ
ನಲಿವಿನಲ್ಲಿ
ತನ್ನದೆನುವ
ಸೇವೆ ಕೊಡುತ
ಬಾಳ ಬಾನ
ಬಯಲಿನಲ್ಲಿ
ಶುಭೋದಯವ
ಸಾರಿದೆ
ಜ್ಯೋತಿ ಉರಿದು
ಜಾತಿ ಸರಿದು
ಮನುಜ ಮತಕೆ
ಬಾಗುತ
ದುಡಿವ ಜನರ
ನಗುವ ಕಂಡು
ಶುಭೋದಯವ
ಸಾರಿದೆ
ಹಸುವ ಹಾಲ
ಸವಿದ ಜನರ
ಬಾಳಿನಲ್ಲಿ
ಮಧುವನಿಟ್ಟು
ಹೊಸ ಹುರುಪಿನ
ಪಯಣ ಸವಿಗೆ
ಶುಭೋದಯವ
ಸಾರಿದೆ
ನೋವ ಮರೆತು
ಮೊಗವು ಅರಳಿ
ಆಸೆ ಹೊತ್ತು
ನಮಿಸುವಾಗ
ಹಣತೆ ಹಣತೆ
ಬೆಳಕಿನಲ್ಲಿ
ಶುಭೋದಯವ
ಸಾರಿದೆ
-ಹಾ ಮ ಸತೀಶ