ದೀಪಾವಳಿ ಹಬ್ಬ

ದೀಪಾವಳಿ ಹಬ್ಬ

ಕವನ

ಬನ್ನಿ ಬಾಂಧವರೇ, ಬನ್ನಿ ಬಂಧುಗಳೇ

ದೀಪ ಹಚ್ಚೋಣ, ದೀಪದ ಹಬ್ಬ ಆಚರಿಸೋಣ||

 

'ಭಾರತ' ಸಂಸ್ಕೃತಿ ಸಿರಿಯ ಬೆಳಕು

ಹಬ್ಬ ಹರಿದಿನಗಳ ಆಗರ ಬೆಳಕು

ದೀಪಾವಳಿ ದೀಪದ ಬೆಳಕು

ಭಾವ ಬಾವದಲಿ ಕಾಣುವ ದೀಪಗಳ ಹಬ್ಬ ||೧||

 

'ನಾನು' ಎಂಬುದು ಕತ್ತಲು

'ನಾವು' ಎಂಬುದು ಬೆಳಕು

ನಾನು ಕಳೆದು ನಾವು ಆಗುವ ಬೆಳಕು

ವಿಶೇಷಾನಂದ ಕಾಣುವ ದೀಪಾವಳಿ ಹಬ್ಬ ||೨||

 

ದುರ್ಗಣತೆ ದುಷ್ಟತೆ ರಕ್ಕಸತೆ

ಸಂಹರಿಸಿದ ಸಂದೇಶದ ಬೆಳಕು

ಸದ್ಗುಣ ಸದ್ಭಾವ ಸದಾಶಿವ ಬಿಂಬದ ಬೆಳಕು

ಸದ್ಗತಿ ಸನ್ಮಾರ್ಗ ಕಾಣುವ ದೀಪಾವಳಿ ಹಬ್ಬ ||೩||

 

ಬಹ್ಯಾಂತರ ಅಂತರಂಗ ಶುದ್ಧತೆಯಲಿ

ದೈವ ಶ್ರದ್ಧಾ ಕಾಯಕಾಯಕದಲಿ

ಪ್ರೀತಿ ಪ್ರೀತಿಯಿಂದ ಹಚ್ಚುವ ದೀಪದಲಿ 

ಪರಂಜ್ಯೋತಿ ಕಾಣುವ ದೀಪಾವಳಿ ಹಬ್ಬ ||೪||

 

ಮಧುರತೆ ಹೃದಯದಲಿ

ಸೌಂದರ್ಯ ನೋಟದಲಿ

ಸಕಲ ಜೀವ ಜಗದಲಿ

'ಮಾನವತೆ ಬೆಳಕು' ಕಾಣುವ ದೀಪಾವಳಿ ಹಬ್ಬ ||೫||

 

ಜ್ಞಾನಾರಿವಿನ ಅನುಭಾವ ಅನುಭೂತಿಯಲಿ

ಪ್ರಕೃತಿ ವಿಸ್ಮಯ ಬೆಳಕಿನ ಬೆಳಕಿಗೆ ಶಿರಬಾಗುವ

ಅಜ್ಞಾನ - ಅಂಧಕಾರ ತೊಲಗಿಸುವ

ತ್ಯಾಗ - ಸೇವೆ - ಸಾರ್ಥಕ್ಯ ಕಾಣುವ ದೀಪಾವಳಿ ಹಬ್ಬ ||೬||

 

ಸೂರ್ಯದೇವ ಜಗವ ಬೆಳಗುವ ಬೆಳಕು

ಪುಟ್ಟದೀಪ  ಮನೆ ಬೆಳಗುವ ಬೆಳಕು

' ಆಂತರ್ಯ ಬೆಳಕು ' ಮನ ಬೆಳಗಿ ಮಾಧವನಾಗಿಸುವ ಬೆಳಕು

ಪುಣ್ಯಭೂಮಿ ಭಾರತಾಂಬೆ ಬೆಳಗುವ ಬೆಳಕಾಗುವ

ದೀಪಾವಳಿ ಹಬ್ಬ ಆರಾಧನೆಯಲಿ ದೈವ ಸಾಕ್ಷತ್ಕಾರ ಬೆಳಕು ||೭||

-ಶ್ರೀ.ಟಿ.ಮಂಜಪ್ಪ

ನಿವೃತ್ತ ಮುಖ್ಯಪಾಧ್ಯಾಯರು, ಶಿವಮೊಗ್ಗ

ಚಿತ್ರ್