ದೀವರಿಗುತ್ತರ

ದೀವರಿಗುತ್ತರ

ಕವನ

ಕವಿಯದಿರಲಿ, ಕಾರ್ಮೋಡಗಳು ಕನಸ್ಸು ತುಂಬಿದ ಕಣ್ಣುಗಳನ್ನು

ಮರೆಮಾಚದಿರಲಿ, ಹೆಮ್ಮರಗಳು ಆ ಕಣ್ಣುಗಳನ್ನು ಸ್ಪರ್ಶಿಸುವ ಕಿರಣಗಳನ್ನು

ಕತ್ತಲಾಗದಿರಲಿ, ಯೇಕೆಂದರೆ ಕಸಿದುಕೊಂಡಿರುವೆ ಬೆಳಕು ನೀಡುವ ದೀಪಗಳನ್ನು

ಕುರುಡುತನವೇ ಇರಲಿ, ಆದರೂ ಬಿಟ್ಟಿಲ್ಲ ಯಶಸ್ಸನ್ನು ಸಾಧಿಸುವ ಛಲವನ್ನು

ದೇವರೇ...ನಿನ್ನ ಸವಾಲಿಗೆ ಉತ್ತರ ನೀಡುವೆ, ನಿನ್ನ ಆತ್ಮೀಯ ದೃಷ್ಟಿಹೀನ ನಾನು.

 

ತಡೆಯದಿರಲಿ, ಯಾವ ನೋವು ಮಿಂಚಿನಂತೆ ಓಡುವ ಕಾಲುಗಳನ್ನು

ಕೊನೆಯಾಗದಿರಲಿ, ಕುದುರೆಯ ಪಯಣ ತನ್ನ ಬದುಕಿನಲಿನ್ನು 

ಬೀಳದಿರಲಿ, ಮುಗಿಲೆತ್ತರಕ್ಕೆ ಹಾರುವ ಕನಸಿನ್ನೂ

ಭದ್ರವಾಗಿರಲಿ, ಆತ್ಮವಿಶ್ವಾಸ ಯೇಕೆಂದರೆ ಇನ್ನೂ ಬಿಟ್ಟಿಲ್ಲ ಛಲವನ್ನು

ದೇವರೇ...ನಿನ್ನ ಸವಾಲಿಗೆ ಉತ್ತರಿಸುವೆ ನಿನ್ನ ಆತ್ಮೀಯ ಅಂಗವಿಕಲ ನಾನು.​​ನಾಾಾ.     

ನಿಲ್ಲದಿರಲಿ, ಹೇಳಬೇಕೆಂದು ಹಂಬಲಿಸುತ್ತಿರುವ ಮಾತುಗಳಿನ್ನೂ

ಕಂಗೆಡದಿರಲಿ, ಕಂಠ ಯೇಕೆಂದರೆ ಹಾಡಬೇಕಿದೆ ಸ್ವರಗಳನ್ನು

ನಶಿಸಿಹೋಗದಿರಲಿ, ವ್ಯಕ್ತವಾಗಬೇಕಿದ್ದ ಮನದಾಳದ ಭಾವನೆಗಳಿನ್ನೂ

ವಿಶ್ವಾಸವಿರಲಿ, ಸಾಧನೆ ನಿಲ್ಲಿಸುವುದು ಅನ್ಯರ ಕೊಂಕು ನುಡಿಗಳನ್ನು

ದೇವರೇ...ನಿನ್ನ ಸವಾಲಿಗೆ ಉತ್ತರಿಸುವೆ ನಿನ್ನ ಆತ್ಮೀಯ ಮೂಗ ನಾನು.

 

ನೆಮ್ಮದಿಯಿರಲಿ, ಯೇಕೇಂದರೆ ಕೇಳಲಾಗುವುದಿಲ್ಲ ಹುಚ್ಚು ನುಡಿಗಳನ್ನು

ಅಳುಕಇರದಿರಲಿ, ಕೇಳಬಹುದು ನಿನ್ನ ಮನಸ್ಸಿನ ಮಾತುಗಳನ್ನು

ತಾಳ್ಮೆಇರಲಿ, ಸಹನೆಯಿಂದ ಸಹಿಸಿಕೊ ಎಲ್ಲವನ್ನೂ

ಎದೆಗುಂದದಿರಲಿ, ತಿರುಗಿ ನೋಡುವಂತೆ ಮಾಡು ಜಗತ್ತನ್ನು

ದೇವರೇ...ನಿನ್ನ ಸವಾಲಿಗೆ ಉತ್ತರಿಸುವೇ ನಿನ್ನ ಆತ್ಮೀಯ ಕಿವುಡ ನಾನು.❤️