ದೀವಿಹಲಸು ಸಾಂಬಾರ್
ದೀವಿ ಹಲಸು (ಜೀಗುಜ್ಜೆ) ಬೇಕಾಗುವಷ್ಟು ಹೋಳುಗಳು, ಸಾಂಬಾರ್ ಹುಡಿ ೨ ಚಮಚ, ಬ್ಯಾಡಗಿ ಒಣ ಮೆಣಸು ೭-೮, ಕೊತ್ತಂಬರಿ ೧ ಚಮಚ, ಜೀರಿಗೆ ಅರ್ಧ ಚಮಚ, ಮೆಂತೆ - ಸ್ವಲ್ಪ, ಉದ್ದಿನ ಬೇಳೆ - ೧ ಚಮಚ, ತೊಗರಿಬೇಳೆ ೧ ಚಮಚ, ಚಿಟಿಕೆ ಇಂಗು, ರುಚಿಗೆ ಉಪ್ಪು, ಬೆಲ್ಲ, ಕರಿಬೇವಿನ ಎಲೆ ೧೦, ಸ್ವಲ್ಪ ಹುಣಸೇಹಣ್ಣು, ತೆಂಗಿನ ಕಾಯಿ ತುರಿ, ಒಗ್ಗರಣೆಗೆ ಬೆಳ್ಳುಳ್ಳಿ
ಒಂದು ಜೀಗುಜ್ಜೆ ಯನ್ನು ಹೋಳುಗಳಾಗಿ ಮಾಡಿ, ಅರಶಿನ ಹುಡಿ ಅಥವಾ ಹುಳಿಮಜ್ಜಿಗೆ ಮಿಶ್ರ ಮಾಡಿದ ನೀರಿನಲ್ಲಿ ಹಾಕಿ 10 ನಿಮಿಷ ಇಡಿ. ನಂತರ ಹೋಳುಗಳನ್ನು ಸ್ವಚ್ಛಗೊಳಿಸಿ ಉಪ್ಪು, ಸ್ವಲ್ಪ ಬೆಲ್ಲ, ಸಾಂಬಾರ್ ಹುಡಿ ಹಾಕಿ ಬೇಯಿಸಿ. ಒಣಮೆಣಸು, ಕೊತ್ತಂಬರಿ, ಜೀರಿಗೆ, ಸ್ವಲ್ಪ ಮೆಂತೆ, ಉದ್ದಿನಬೇಳೆ, ಚಿಟಿಕೆ ಇಂಗು, ತೊಗರಿಬೇಳೆ, ಕರಿಬೇವಿನ ಎಲೆ, ಸ್ವಲ್ಪ ಹುಣಿಸೇಹಣ್ಣು ಎಲ್ಲಾ ಹಾಕಿ ಹುರಿದು, ತೆಂಗಿನಕಾಯಿ ತುರಿ (ಎಸಳು) ಸೇರಿಸಿ ನಯವಾಗಿ ರುಬ್ಬಿ, ಬೆಂದ ಹೋಳುಗಳಿಗೆ ಸೇರಿಸಿ, ಸಣ್ಣ ಉರಿಯಲ್ಲಿ ಕುದಿಸಿ. ಬೆಳ್ಳುಳ್ಳಿ ಒಗ್ಗರಣೆ ಹಾಕಿ. ರುಚಿಯಾದ ಸಾಂಬಾರ್ ರೆಡಿ.
(ತೊಗರಿಬೇಳೆ ಬೇಯಿಸಿಯೂ ಹಾಕಬಹುದು.ಈ ಸಾಂಬಾರಿಗೆ ಜೀರಿಗೆ ಸ್ವಲ್ಪ ಹೆಚ್ಚೇ ಹಾಕಬೇಕು.)
-ರತ್ನಾ ಕೆ.ಭಟ್, ತಲಂಜೇರಿ