ದುಂಬಿ ಮನಸು

ದುಂಬಿ ಮನಸು

ಕವನ

ಹೂವ ಕಂಡು ಹಗ್ಗ ಕಡಿದು
ಮನಸು ಗಿರಕಿ ಹೊಡೆದಿದೆ
ಜೇನು ಬೇಕು ಎಂಬ ಬಯಕೆ
ದುಂಬಿ ಮನದಿ ಮೂಡಿದೆ

ತಂಪನೀವ ಹೂವಿನಲ್ಲಿ
ರಸದ ಭಾವ ಉಕ್ಕಿದೆ
ದುಂಬಿ ಕಳೆದು
ವಿರಹದಲ್ಲಿ ಧಹಿಸಿ ಬೆರಗು ಗೊಂಡಿದೆ

ಒಸರಿ ಬಂದ ಪ್ರೀತಿಯಲ್ಲಿ
ಉಸಿರನ್ನೇ ಮರೆತಿದೆ
ಉಸಿರಾಗೋ ಸಮಯಕಾಗಿ
ಹಸಿದು ಕಾದು ಕುಳಿತಿದೆ