ದುಃಖದ ಪ್ರೀತಿ..
ಕವನ
ಮನಸ್ಸಿನ ಮೌನಕೆ ಏನೆಂದು ಉತ್ತರಿಸಲಿ
ಹಾಳಾದ ಮಾತಿಗೆ ಹೇಗೆಂದು ಅರ್ಥೈಸಲಿ
ಮನವು ಚದುರಂಗ ಆಟವಾಗಿದೆ
ಸೋತರು ನೋವು ಗೆದ್ದರು ನೋವು
ಕಾರಣ ದುಃಖವೇ ಪ್ರೀಯವಾಗಿದೆ
ಮೌನದ ದಾರಿಗೆ ಮಾತೆಲ್ಲಿ ಹುಡುಕಲಿ
ಮರೆತ ಸ್ನೇಹಕ್ಕೆ ಗೆಳೆಯನೆಲ್ಲಿ ಹುಡುಕಲಿ
ಮನ ದಡ ಸೇರದ ಕಡಲು ತೀರಾಗಿದೆ
ಪ್ರೀಯತಮನ ನೆರಳಿನ ಹುಡುಕಾಟವಿದೆ
ಕಾರಣ ಪ್ರೀತಿಯೇ ದುಃಖವಾಗಿದೆ