*ದುಡ್ಡಿಗೆ ಓಟು ಬದುಕಿಗೆ ಏಟು*
ಕವನ
ಗ್ರಾಮದ ಏಳ್ಗೆ ದೇಶದ ಏಳ್ಗೆ
ಎಂದರು ಬಾಪೂಜಿಯು
ಸ್ವಾರ್ಥವೆ ರಾಜಕೀಯದ ಸೂತ್ರ
ಎಂದರು ಭ್ರಷ್ಟದೊರೆಯು ||
ಮೋಜಿನ ಸುಳಿಗೆ ಯುವಕರು ಸಿಲುಕಿ
ಜೀವನವೆ ಕಳಕೊಂಡರು
ಅಮಲಲಿ ಕಳ್ಳ ಖದಿಮರ ಕೈಗೆ
ಗ್ರಾಮವ ಕೊಟ್ಟುಕೆಟ್ಟರು ||
ದುಡ್ಡಿಗೆ ಓಟು ಬದುಕಿಗೆ ಏಟು
ಸತ್ಯವ ಮರೆತೆ ಬಿಟ್ಟರು
ಹೆಂಡಕೆ ಓಟು ನೋಟಿಗೆ ಓಟು
ಮಾರುತ ಕುಲಗೆಟ್ಟರು ||
ಗ್ರಾಮದ ಚುನಾವಣೆಯಲಿ ರಕ್ತ
ಸಂಬಂಧ ಕಳಚಿಬಿದ್ದಿತು
ಊರಲಿ ಗೆದ್ದು ಬರುತಲಿ ನಾಯ್ಕ
ಕೋಮಲಿ ಗಲಭೆವೆದ್ದಿತು ||
ಹಳ್ಳಿಯೆ ನಮ್ಮ ದೇಶದ ಬಳ್ಳಿ
ಸುಂದರ ಮಧುರ ತಾಣವು
ಹಳ್ಳಿಯ ಜಗವು ಸಂಸ್ಕೃತಿ ನೆಲವು
ಕಾಪಾಡಿ ದೇಶದ ಪ್ರಾಣವು ||
-*ಶ್ರೀ ಈರಪ್ಪ ಬಿಜಲಿ*
ಚಿತ್ರ್
