ದುಷ್ಟ ಕಾವ್ಯ...
ದುಷ್ಟ ಕನ್ನಡದ ಸಿನಿಮಾ. ತಮಿಳು ಫೀಲ್ ಕೊಡ್ತದೆ. ಪರುತಿವೀರನ್ ಚಿತ್ರ ಗೊತ್ತಿರಬೇಕಲ್ಲ. ಅದರಲ್ಲಿಯ ಆ ಹಾರಾಟ ಇಲ್ಲೂ ಇದೆ. ಸಂಭಾಷಣೆಯಲ್ಲಂತೂ ಕೂಗಾಡ ಜಾಸ್ತಿ. ಹಾಡುಗಳು ಖುಷಿ ಕೊಡ್ತವೆ. ಛಾಯಾಗ್ರಹಣ ಚೆಂದಗಿದೆ. ಕತೆ ಓಕೆ. ಎಸ್.ನಾರಾಯಣ್ ಪುತ್ರ ಮಿಂಚುತ್ತಾನೆ. ಹೊಸ ನಟಿ ಸುರಭಿ ಹೊಳೆಯುತ್ತಾಳೆ. ಈಸಾ ಮತ್ತು ಪಾತಿಯಯಾಗಿ ತೆರೆ ಮೇಲೆ ಬಂದ ಈ ಯುವ ಜೋಡಿಯ ಕತೆ ಇಲ್ಲಿ ಈ ಥರ ಸಾಗುತ್ತದೆ ಓದಿ...
ಸೂರ್ಯೋದಯದಿಂದಲೇ ಕತೆ ತೆರೆದು ಕೊಳ್ತದೆ. ನಾಯಕ ತಾಯಿ ನಿತ್ಯ ಕರ್ಮಗಳನ್ನ ಮುಗಿಸಿಕೊಂಡು ಹೊರ ನಡೆಯುತ್ತಾಳೆ. ಬಸ್ ಸ್ಟಾಂಡ್...ಪೋಲಿಸ್ ಸ್ಟೇಷನ್. ಎಲ್ಲವೂ ಅಲೆದು ಬರುತ್ತಾಳೆ.ತಾಯಿಯ ಈ ತಳ-ಮಳ ದಿಂದ ಪ್ರೇಕ್ಷಕರಿಗೆ ಈಸಾ ಎಲ್ಲಿ ಎಂಬ ಕುತೂಹಲ ಮೂಡುತ್ತದೆ. ಈಸಾ ಜೈಲಲ್ಲಿದ್ದಾನೆಂಬ ಕ್ಲೂ ಕೂಡ ಆಗಲೇ ಸಿಗುತ್ತದೆ.ಅಷ್ಟಾಗಿದ್ದೇ ತಡ.ಈಸಾ ಇನ್ ಜೈಲ್..ಅಷ್ಟೇ,ಅಲ್ಲ. ತನ್ ಕತೆಯನ್ನ ತಾನೇ ಹಿನ್ನೆಲೆ ಧ್ವನಿಯಲ್ಲಿ ನಿರೂಪಿಸುತ್ತಲೇ ಸಾಗುತ್ತಾನೆ...
ಸೂರ್ಯೋದಯದಿಂದಲೇ ಕತೆ ತೆರೆದು ಕೊಳ್ತದೆ. ನಾಯಕ ತಾಯಿ ನಿತ್ಯ ಕರ್ಮಗಳನ್ನ ಮುಗಿಸಿಕೊಂಡು ಹೊರ ನಡೆಯುತ್ತಾಳೆ. ಬಸ್ ಸ್ಟಾಂಡ್...ಪೋಲಿಸ್ ಸ್ಟೇಷನ್. ಎಲ್ಲವೂ ಅಲೆದು ಬರುತ್ತಾಳೆ.ತಾಯಿಯ ಈ ತಳ-ಮಳ ದಿಂದ ಪ್ರೇಕ್ಷಕರಿಗೆ ಈಸಾ ಎಲ್ಲಿ ಎಂಬ ಕುತೂಹಲ ಮೂಡುತ್ತದೆ. ಈಸಾ ಜೈಲಲ್ಲಿದ್ದಾನೆಂಬ ಕ್ಲೂ ಕೂಡ ಆಗಲೇ ಸಿಗುತ್ತದೆ.ಅಷ್ಟಾಗಿದ್ದೇ ತಡ.ಈಸಾ ಇನ್ ಜೈಲ್..ಅಷ್ಟೇ,ಅಲ್ಲ. ತನ್ ಕತೆಯನ್ನ ತಾನೇ ಹಿನ್ನೆಲೆ ಧ್ವನಿಯಲ್ಲಿ ನಿರೂಪಿಸುತ್ತಲೇ ಸಾಗುತ್ತಾನೆ...
ಹಿನ್ನೆಲಯ ಈ ಕತಾ ನಿರೂಪಣೆ ಈಸನ ಚರಿತ್ರೆಯನ್ನೇ ಬಿಚ್ಚಿಕೊಳ್ಳುತ್ತದೆ. ಪ್ರೇಯಸಿ ಪಾತಿಯ ಪರಿಚಯವೂ ಅಗ್ತದೆ. ಚಿಕ್ಕಂದಿನಲ್ಲಿಯೇ ಪ್ರೀತಿ-ಪ್ರೇಮ ಅರಳಿದ ವಿಚಾರವೂ ತಿಳಿಯುತ್ತದೆ. ಈಸನು ದೊಡ್ಡವನಾಗ್ತಾನೆ. ಪಾತಿನೂ ಮೆಚ್ಯೂರ್ಡ್ ಆಗ್ತಾಳೆ. ಅದನ್ನ ಹೇಳೋಕೆ ಇಲ್ಲೊಂದು ಸಾಂಗ್ ಇದೆ.
ನನ್ನ ಹೆಂಡ್ತಿ ದೊಡ್ಡವಳಾಗಿದ್ದಾಳೆ...
ಇಷ್ಟೊಂದಿಗೆ ಕತೆ ಪ್ರೇಕ್ಷಕರನ್ನ ತನ್ನತ್ತ ಸೆಳೆಯೋ ಸಾಹಸ ಮಾಡಿರುತ್ತದೆ. ದೊಡ್ಡವಳಾದ ಹುಡುಗಿ ಮನದಲ್ಲಿ ಕಲರ್..ಕಲರ್ ಕನಸುಗಳು ಹುಟ್ಟಿಕೊಳ್ತವೆ. ಪ್ರೀತಿಸಿದ ಈಸನನ್ನ ಐ ಲವ್ ಯೂ ಅನ್ನೋ ಮಟ್ಟಿಕೆ ಪ್ರೀತಿ ಪಕ್ವವಾಗಿರುತ್ತದೆ. ಅದನ್ನೂ ಸಹ ಇಲ್ಲಿ ನಿದೇಶಕ್ರು ಒಂದು ಹಾಡಿನ ಮೂಲಕವೇ ಹೇಳಿಸಿದ್ದಾರೆ.
ಈಸಾ ಓ ಈಸಾ ಐ ಲವ್ ಯೂ ಅನ್ನೋ ಹಾಡು...
ಈ ಹಾಡಾದ ಬಳಿಕ ಮಾತಲ್ಲಿ ಅಬ್ಬರ ಜಾಸ್ತಿ ಆಗ್ತದೆ. ಪ್ರೇಕ್ಷಕರಿಗೂ ಇದು ಹೋಗ್ತಾ...ಹೋಗ್ತಾ ಚಿತ್ರದಲ್ಲಿ ಇದು ಕಾಮನ್ ಅನಿಸಿಬಿಡ್ತದೆ. ಹೊಡೆದಾಟ...ಓಡಾಟ ಇಷ್ಟು ಬೇಕಿತ್ತಾ ಅನಿಸುತ್ತದೆ. ಆದ್ರೆ, ಈ ಮೊಲಾರ್ಧದ ಮುಗಿಯೋ ವೇಳೆಗೆ ಪಾತಿ ಮತ್ತು ಈಸ ಪ್ರೀತಿ ಫೀಲ್ ಆಗ್ತದೆ. ಆದ್ರೆ, ಅದನ್ನ ಅನುಭವಿಸೋ ಮೊದಲೇ ಇಂಟರ್ ವಲ್ ಅಗ್ತದೆ. ಅಷ್ಟೇ,ಅಲ್ಲ. ಒಂದು ಟ್ವೀಸ್ಟ್ ಕೂಡ ಇದೆ...
ಟ್ವೀಸ್ಟ್ ಸೆಕೆಂಡ್ ಹಾಫ್ ವರೆಗೂ ಮುಂದುವರೆಯುತ್ತದೆ. ಜೈಲಲ್ಲಿ ಇರೋ ಈಸಾ ಈಗ ಹೊರಗಡೆ ಬಂದಿರುತ್ತಾನೆ. ಪಾತಿ ವಿಷ್ಯ ತಿಳಿದು ಮತ್ತೆ ಜೈಲಿಗೆ ಹೋಗ್ತಾನೆ. ಅಲ್ಲಿಯೇ ಈ ಪ್ರೇಮಿಗಳ ಮುಖಾ-ಮುಖಿ ಆಗುತ್ತದೆ. ಆಗ ನಾವು ಏಕ್ ದುಜೇ ಕೇಲಿಯೆ ಹೈ ಅಂತಲೇ ಜೈಲಿಂದ ಓಡಿ ಹೋಗ್ತಾರೆ. ಒಂದು ಕಡೆ ಪೋಲಿಸ್ರು. ಮತ್ತೊಂದು ಕಡೆ ಹುಡುಗಿ ಅಪ್ಪ. ಪ್ರೇಮಿಗಳ ಹಿಂದೆ ರನ್ನಿಂಗೋ..ರಂನ್ನಿಂಗೂ...ಆ ಗ್ಯಾಪ್ ನಲ್ಲಿ ಎಲ್ಲ ಚಿತ್ರಗಳಂತೆ ನಾಯಕ ಕೆಲ್ಸ ಮಾಡ್ತಾನೆ. ನಾಯಕಿನೂ ಕೆಲ್ಸ ಮಾಡ್ತಾಳೆ. `ದಿಲ್' ಫಿಕ್ಚರ್ ಥರ ಸಂಸಾರ ಶುರು ಆಗುತ್ತದೆ..
ಇಷ್ಟಾಗೋ ಹೊತ್ತಿಗೆ ಕತೆ ಕ್ಲೈಮ್ಯಾಕ್ಸ್ ಬಂದು ತಲುಪಿರುತ್ತದೆ. ಆದರೆ, ಇಲ್ಲೂ ಟರ್ನ್ ಅಂಡ್ ಟ್ವಿಸ್ಟ್ ಗಳಿವೆ. ಸ್ನೇಹದ ಮೇಲೆ ಬರೆದ ಒಂದು ಹಾಡು ಈ ಘಳಿಗೆಯಲ್ಲಿಯೇ ಬಂದು ಹೋಗುತ್ತದೆ. ಇಷ್ಟಾದ್ಮೇಲೆ ಕೊನೆ ಬಂದು ಬಿಡುತ್ತದೆ. ಅದು ಹೇಗೆ ಏನೂ.. ಅಂತ ಕೇಳೋ ಬದ್ಲು. ನೋಡಿದ್ರೇನೆ ತಿಳಿಯೋದು. ಹಾಗಂತ ಇಲ್ಲಿ ಮಹಾನ್ ಥ್ರಿಲ್ಲ್ ಇದೆ ಅಂತ ಭಾವಿಸಬೇಡಿ. ನಿರ್ದೇಶಕ್ರು ಇದನ್ನ ಇನ್ನೂ ಚೆನ್ನಾಗಿ ಮಾಡಬಹುದಿತ್ತು. ಇನ್ನೊಂದು ಸಂಗ್ತೀ ಅಂದ್ರೆ, ಗೆಳೆಯರ ಗೆಳೆತನಕ್ಕೆ ಸಾಕ್ಷ್ಯ ಆಗಿರೊ ಕೊನೆ ಸನ್ನಿವೇಶ್ ಏಕೋ...ತುಂಬಾ ಕ್ರೂರ ಅನಿಸುತ್ತದೆ....
-ರೇವನ್ ಪಿ.ಜೇವೂರ್