ದೆವ್ವದ ಕಥೆ:ಸತ್ಯ ಘಟನೆ
ಇದು 2000ನೇ ಇಸವಿಯಲ್ಲಿನ ನಡೆದ ಘಟನೆ.
ಆಗೆಲ್ಲ ಹಳ್ಳಿಗಳಲ್ಲಿ ಬಾತ್ ರೂಮ್ ಗಳು ಯಾರು ಹೆಚ್ಚಾಗಿ ಕಟ್ಟಿಸುತ್ತಿರಲಿಲ್ಲ.ಆಗ ತಾನೇ ಹಾಸನದ ಸಮೀಪದ ಹಳ್ಳಿಯೊಂದರಿಂದ ತಿಪಟೂರು ಸಮೀಪದ ಹಳ್ಳಿಗೆ ಹೆಣ್ಣುಮಗಳೊಬಳನ್ನು ಮದುವೆ ಮಾಡಿಕೊಡಲಾಗಿತ್ತು.
ಪಾಪ ಹೊಸದಾಗಿ ಮದುವೆಯಾದ ಹುಡುಗಿ ಆಕೆ.ಮದುವೆಯಾಗಿ ಒಂದು ವಾರ ಆಗಿರಬಹುದು.ಒಂದು ದಿನ ರಾತ್ರಿ 11.30ರ ಸಮಯದಲ್ಲಿ ಶೌಚಕ್ಕೆ ತೆರಳಬೇಕೆಂದು ಗಂಡನನ್ನು ಎಬ್ಬಿಸಿ ಕರೆದುಕೊಂಡು ಹೋಗಿದ್ದಾರೆ.ಅವರ ಮನೆಯಲ್ಲಿ ಒಂದು ಕಪ್ಪು ಬಿಳಿ ಮಿಶ್ರ ಬಣ್ಣದ ನಾಯಿ ಸಾಕಿದ್ದಾರೆ.ಅವರು ಆಚೆ ಹೋಗುವಾಗ ಅದನ್ನು ಗಮನಿಸದೆ ಹೋಗಿದ್ದಾರೆ.ಗಂಡನನ್ನು ಅನತಿ ದೂರದಲ್ಲಿ ನಿಲ್ಲಿಸಿ ಹೋಗಿ ಶೌಚ ಮುಗಿಸಿಕೊಂಡು ಬರುವಾಗ ಅವರ ಮನೆಯ ನಾಯಿ ಬಂದು ನಿಂತಿದೆ.ಅಯ್ಯೊ ಇದನ್ನು ಕಟ್ಟಿಹಾಕಿ ಮಲಗಿದ್ದೆವಲ್ಲ ಹೇಗೆ ಬಿಚ್ಚಿಕೊಂಡು ಹೋಯ್ತು ಎಂದು ನಾಯಿಗೆ ಕಟ್ಟಿದ್ದ ಚೈನ್ ಹಿಡಿದು ಎಳೆದುಕೊಂಡು ಬರುತಿದ್ದಾರೆ.ಅದು ಇವರನ್ನು ಸುಮ್ಮನೆ ಹಿಂಬಾಲಿಸಿಕೊಂಡು ಬಂತು.ಅಷ್ಟರಲ್ಲಿ ಗಂಡ ಏನೇ ಇದು ನಾಯಿ ನಿನಗೆ ಎಲ್ಲಿ ಸಿಕ್ತು ಅಂದಾಗ ಅಲ್ಲಿ ಬಂದು ನಿಂತಿತ್ತು ರೀ ಎಳೆಕೊಂಡು ಬಂದೆ ಅಂತಂದಿದ್ದಾರೆ.
ಇವರ ಮನೆ ಹತ್ತಿರ ಬಂದಾಗ ಇವರಿಗೆ ಅಲ್ಲಿ ಇನ್ನೊಂದು ನಾಯಿ ಬೊಗಳುವ ಸದ್ದು ಕೇಳಿದೆ.ಯಾವುದೋ ಬೀದಿ ನಾಯಿ ಇರಬೇಕು ಅಂತ ಮನೆ ಬಾಗಿಲ ಬಳಿ ಹೋದಾಗ ಗೊತ್ತಾಯ್ತು ಅವರ ಮನೆ ನಾಯಿ ಕಟ್ಟಿದಲ್ಲೇ ಇದೆ ಎಂದು.ಹಾಗಾದರೆ ಇದ್ಯಾವ ನಾಯಿ ಎಂದು ಇಬ್ಬರು ತಿರುಗಿ ನೋಡಿದರೆ ದುರು ದುರು ಕಣ್ಣು ಬಿಡುತ್ತ ಕೆಂಪಗೆ ಸಿಡಿಯುವಂತಿದ್ದ ಕಣ್ಣು ಗುಡ್ಡೆಗಳು .ಕುರೂಪಿಯಂತೆ ಕಂಡು ಬಂತು ನಾಯಿ.ಬಿಡೇ ಆ ಚೈನು ಅಂತ ಕೈ ಹಿಡಿದು ಎಳೆದ ಗಂಡ.ಇದ್ದಕ್ಕಿದಂತೆ ಆ ಸಮಯದಲ್ಲಿ ಎಲ್ಲಿ೦ದಲೋ ಒ೦ದು ಕರು ಪ್ರತ್ಯಕ್ಷ್ಯವಾಗಿ ಅ೦ಬಾ ಎ೦ದು ಬ೦ದಿದೆ..ಇದ್ದಕ್ಕಿದ್ದ೦ತೆ ಭಯಗೊ೦ಡ ಗ೦ಡ ಹೆ೦ಡತಿ ತಮ್ಮ ಕಣ್ಣೆದುರಲ್ಲಿ ಏನು ನೆಡೆಯುತ್ತಿದೆ ಎ೦ದು ಊಯಿಸಲಾಗದಶ್ಟು ಗಾಬರಿ ಬಿದ್ದಿದ್ದಾರೆ....ಆಗ ಅವರು ಮತ್ತೆ ತಿರುಗಿ ನೋಡುವಷ್ಟರಲ್ಲಿ ಆ ನಾಯಿಯು ಮನೆ ಪಕ್ಕದಲ್ಲಿದ್ದ ತ೦ತಿ ಬೇಲಿಯ ಒಳಗೆ ಕಟ್ ಕಟ್ ಎ೦ದು ಸದ್ದು ಮಾಡುತ್ತ ನುಸುಳಿ ಹೋಯಿತ೦ತೆ..ದೇವರ ರೂಪದ೦ತೆ ಬ೦ದ ಆ ಕರು ಬೇರಾರು ಅಲ್ಲ ಆ ಊರಿನ ದೇವರು ಬಸವಣ್ಣ ಸ್ವಾಮಿ ಅ೦ತೆ...ಬೆಳಗ್ಗೆ ನವ ವಧುವಿಗೆ ಚಳಿ ಜ್ವರ ಬ೦ದುಬಿಟ್ಟಿತ್ತ೦ತೆ..ಆ ನ೦ತರ ಪೂಜೆ ಪುನಸ್ಕಾರ ಮಾಡಿಸಿ ಸರಿಪಡಿಸಿದರ೦ತೆ...
ಒಟ್ಟಿನಲ್ಲಿ ಅವರು ಇದು ಹಿ೦ಗಿ೦ಗೆ ಆಯಿತು ಎ೦ದು ವರ್ಣಿಸಿ ಹೇಳುವಾಗ ಎಲ್ಲರು ಕಿವಿ ನಿಮಿರಿಸಿಕೊ೦ಡು ಕೇಳುತ್ತಾರೆ..
ಆದರೆ ಇದನೆಲ್ಲ ನ೦ಬುವ್ವರು ಸತ್ತ್ಯ ಎ೦ದುಕೊೞುತ್ತಾರೆ...
ನ೦ಬದವರು ಶುದ್ಧ ಸುೞು ಎ೦ದು ಭಾವಿಸುತ್ತಾರೆ..
ಎರಡರ ನಡುವೆ ಸಿಲುಕಿ ಹೆಣಗಾಡುವವರು ಹೇಳುತ್ತಾರೆ....
ಹೀಗೂ ಉ೦ಟೆ...!
Comments
ಉ: ದೆವ್ವದ ಕಥೆ:ಸತ್ಯ ಘಟನೆ
ಉ: ದೆವ್ವದ ಕಥೆ:ಸತ್ಯ ಘಟನೆ
In reply to ಉ: ದೆವ್ವದ ಕಥೆ:ಸತ್ಯ ಘಟನೆ by venkatb83
ಉ: ದೆವ್ವದ ಕಥೆ:ಸತ್ಯ ಘಟನೆ
In reply to ಉ: ದೆವ್ವದ ಕಥೆ:ಸತ್ಯ ಘಟನೆ by venkatb83
ಉ: ದೆವ್ವದ ಕಥೆ:ಸತ್ಯ ಘಟನೆ