ದೇವರು--ಪುರುಷ ಪ್ರಯತ್ನ

ದೇವರು--ಪುರುಷ ಪ್ರಯತ್ನ

ಪತತಿ ಕದಾ ಚಿನ್ನ ಭಸಃ

ಖಾತೇ ಪಾತಾಳತೋಪಿ ಜಲಮೇತಿ/

ದೈವಮಚಿಂತ್ಯಂ ಬಲವದ್

ಬಲವಾನ್ನನು ಪುರುಷಕಾರೋಪಿ//

 

ದೈವ  ದೇವರು ಮತ್ತು ಪುರುಷ ಪ್ರಯತ್ನ ಎಂಬುದರ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು, ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವುದು ಜಾಣತನ. ಕೆಲವು ಸಲ ಹೇಳುತ್ತೇವೆ, ಮಳೆ ಬರುವುದು ಆಕಾಶದಿಂದ, ಇದರಿಂದ ನೀರು ಸಿಗುತ್ತದೆ. ಪಾತಾಳದಿಂದಲೂ ನೀರು ಸಿಗುತ್ತದೆ. ದೈವ ದೇವರ ಬಗ್ಗೆ ಕಂಡವರು ಯಾರೂ ಇಲ್ಲ, ಅದು ಅವರವರ ನಂಬಿಕೆ. ಆದರೆ ನೀರು ಸಿಗುವುದೆಂದು ಕೈಕಟ್ಟಿ ಕುಳಿತರೆ ಸಿಗದು. ಪುರುಷ ಪ್ರಯತ್ನ ಬೇರೇಯೇ ಇದೆ, ನಾವು ಕೆಲಸ ಮಾಡಬೇಕು. ಒಂದು ವೇಳೆ ಮಳೆಯೇ ಬಾರದಿದ್ದರೆ ನೀರಿನ ಕೊರತೆ ಉಂಟಾಗುತ್ತದೆ. ಆಳವಾದ ಬಾವಿಗಳನ್ನು ತೋಡುವುದರ ಮೂಲಕ ನೀರಿನ ಸೆಲೆಯನ್ನು ಮಾಡಿಕೊಳ್ಳುತ್ತೇವೆ. ಇದುವೇ ಪುರುಷ ಪ್ರಯತ್ನ. ನೀರಿಲ್ಲ, ಮಳೆ ಬರಲಿಲ್ಲ, ಕಷ್ಟ ಆಗಿದೆ ಎಂದು ಯೋಚಿಸಿ ಪ್ರಾಣಕಳಕೊಂಡರೆ ನಮ್ಮ ಜೀವ ಹೋಗುವುದಲ್ಲದೆ, ಏನೂ ಪ್ರಯೋಜನವಿಲ್ಲ. ಆದಷ್ಟೂ ಪ್ರಯತ್ನ ಮಾಡೋಣ, ಆಗ ಭಗವಂತನ ಆಶೀರ್ವಾದ ಖಂಡಿತಾ ಇದೆ.

 

-ರತ್ನಾ ಭಟ್ ತಲಂಜೇರಿ

(ಸಂಗ್ರಹ: ಸುಭಾಷಿತ ಕೋಶ)